ಸೋಲು ಅನುಭವ ತಂದುಕೊಡುತ್ತದೆ- ಕೆ.ಶಿವನಗೌಡ ನಾಯಕ

ಅರಕೇರಾ,ಜು.೦೮-ಶಾಸಕನಾಗಿದ್ದ ಸಮಯದಲ್ಲಿ ಶಕ್ತಿ ಮೀರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ, ಜನಪರ ಕಾಳಜಿಯ ಜತೆ ಕಾರ್ಯಕರ್ತರ ಹಿತ ಕಾಯುವಲ್ಲಿ ಕಾರ್ಯ ನಿರ್ವಹಿಸಿದ್ದೇನೆ ಆದರು ಸಹ ವಿಧಾನ ಸಭಾ ಚುನಾವಣೆಯಲ್ಲಿ ಸೋಲಾಗಿದೆ. ನಾವು ಮಾಡಿದ ಕೆಲ ತಪ್ಪುಗಳನ್ನು ಗುರುತಿಸಿ ಕ್ಷೇತ್ರದ ಜನತೆ ತೀರ್ಪು ನೀಡಿದ್ದಾರೆ. ಅದನ್ನು ತಲೆಬಾಗಿ ಸ್ವೀಕರಿಸುತ್ತೇನೆ ಮತ್ತೆ ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರ ಜೊತೆಗೆ ಸಕ್ರಿಯವಾಗಿ ಕೆಲಸಮಾಡುತ್ತೇನೆ ಎಂದು ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅನಿಸಿಕೆ ವ್ಯಕ್ತಪಡಿಸಿದರು.ಪಟ್ಟಣದ ಕೆ.ಹೆಚ್. ನಗರದ ಗೃಹ ಕಚೇರಿಯಲ್ಲಿ ದೇವದುರ್ಗ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ತಮ್ಮ ಮನೆಯ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕ್ಷೇತ್ರದಲ್ಲಿ ಹಗಲು-ರಾತ್ರಿ ಚುನಾವಣೆಗಾಗಿ ಶ್ರಮಿಸಿದ್ದೀರಿ ನಿಮ್ಮ ಅಭಿಮಾನಕ್ಕೆ ನಾನು ರುಣಿಯಾಗಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ೭ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು ೪ ರಲ್ಲಿ ಗೆಲವು ಹಾಗೂ ೩ ರಲ್ಲಿ ಸೋಲು ಕಂಡಿದ್ದೇನೆ ಗೆಲುವು ಖುಷಿ ನೀಡಿದರೆರ ಸೋಲು ಅನುಭವ ನೀಡುತ್ತದೆ. ಕ್ಷೇತ್ರದ ಅಭಿವೃದ್ದಿಯ ಸಲುವಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಕಾಡಿ ಬೇಡಿ ಅನುದಾನ ತಂದಿದ್ದು ಹಾಗೂ ಕ್ಷೇತ್ರದ ಜನರ ಮನಗೆಲ್ಲುವಲ್ಲಿ ಎಡವಿದ್ದು ನೋವುಂಟುಮಾಡಿದೆ.ಯಾವುದೇ ಕಾರಣಕ್ಕೂ ಕಾರ್ಯಕರ್ತರು ಧೃತಿಗೆಡದೆ ಧೈರ್ಯವಾಗಿ ಪಕ್ಷ ಸಂಘಟನೆ ಮಾಡಿ ನಿಮ್ಮ ಜೊತೆಗೆ ನಾನಿದ್ದೇನೆ. ಮುಂಬರುವ ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವರ ಗೆಲುವುಗೆ ಶ್ರಮಿಸೋಣ. ನಾವು ಗನತೆಗೆ ತಕ್ಕ ರಾಜಕೀಯ ಮಾಡಿದವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನ ಮಾಡಿದ್ದು ಈಗಿನ ಸರ್ಕಾರ ಹಾಗೂ ನೂತನ ಜನಪ್ರತಿನಿಧಿಗಳು ಅದನ್ನು ಮುಂದುವರಿಸಿಕೊಂಡು ಹೋಗಲಿ ಎಂದು ತಿಳಿಸಿದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಎಂ.ಪಾಟೀಲ್ ಮಾತನಾಡಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೆ.ಶಿವನಗೌಡ ನಾಯಕರು ಸೋತಿಲ್ಲ ಅಭಿವೃದ್ಧಿ ಸೋತಿದೆ. ಮುಂಬರುವ ತಾಪಂ ಗಾಗೂ ಜಿಪಂ ಚುನಾವಣೆಗಳಲ್ಲಿ ಕಾರ್ಯಕರ್ತರು ಸಿದ್ದರಾಗಬೇಕು ಎಂದರು.ನಂತರ ಹಿರಿಯ ಮುಖಂಡ ಶ್ಯಾಮರಾವ್ ಕುಲಕರ್ಣಿ ಮಾತನಾಡಿ, ಕ್ಷೇತ್ರದ ಪ್ರತಿ ಹಳ್ಳಿಯಲ್ಲೂ ದೇವಾಲಯ, ಶಾಲೆಗಳು, ರಸ್ತೆಗಳ ನಿರ್ಮಾಣ ಸೇರಿ ಹಲವು ಜನಪರ ಕಾರ್ಯಗಳಿಗೆ ಶ್ರಮಿಸಿದ್ದಾರೆ ಅಲ್ಲದೆ ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಿದ ಕೀರ್ತಿ ಇವರದ್ದು ಅಭಿವೃದ್ಧಿಗೆ ಇನ್ನೊಂದು ಹೆಸರೇ ಕೆ.ಶಿವನಗೌಡ ನಾಯಕ ಎಂದರು. ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಸಾಕಷ್ಟು ಸಮಖ್ಯೆಯಲ್ಲಿ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.ಈ ವೇಳೆ ಶಿವಣ್ಣ ತಾತ ಮುಂಡರಗಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಜಂಬಣ್ಣ ನೀಲಗಲ್, ಹಿರಿಯ ಮುಖಂಡರಾದ ಸತ್ಯನಾರಾಯಣ ನಾಯಕ ಪೋ.ಪಾ, ಕೆ.ಅನಂತರಾಜ ನಾಯಕ, ವಿಶ್ವನಾಥ ಬಾನಟ್ಟಿ, ರಾಮನಗೌಡ, ಮಲ್ಲಣ್ಣ ಸಾಹುಕಾರ, ಮಲ್ಲಿಕಾರ್ಜುನ ಪಾಟೀಲ್ ಅಂಚೆಸುಗೂರು, ಗೋಪಾಲಪ್ಪಗೌಡ ಚಿಂತಲಕುಂಟ, ಡಾ.ಹೆಚ್.ಎ.ನಾಡಗೌಡ, ಶರಣಗೌಡ ಬಿ.ಗಣೇಕಲ್, ಆರ್.ಎಸ್.ಪಾಟೀಲ್, ಸಾಹಿತಿ ಅಮರೇಶ್ ಬಲ್ಲಿದವ್, ಶರಣಪ್ಪ ಕೊರವಿ ಗಬ್ಬೂರು, ರಾಚಣ್ಣ ಅಬಕಾರಿ, ಶರಣಬಸವ ಜೋಳದಹೆಡಗಿ, ಲಿಂಗನಗೌಡ ಕೊಪ್ಪರ, ಲಕ್ಕಪ್ಪಗೌಡ, ಹನ್ಮಂತ್ರಾಯ ಮಟ್ಲ, ಚಂದಪ್ಪ ಬುದ್ದಿನ್ನಿ, ಬಸವರಾಜ ಅಕ್ಕರಕಿ, ಶಿವರಾಜ ಶಾಖೆ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.