ಸೋಲಿನಲ್ಲಿಯೂ ಗೆಲುವು ಸಾಧಿಸಲಾಗಿದೆ

ವಿರೋಧ ಪಕ್ಷವಾಗಿ ನಿಷ್ಠೆಯಿಂದ ಪಕ್ಷ ಸಂಘಟಿಸುತ್ತೇನೆ-ಬಿ.ವಿ.ನಾಯಕ
ಮಾನ್ವಿ,ಮೇ.೧೪- ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಮತಗಳನ್ನು ಪಡೆಲಾಗಿದ್ದು ತಾಲೂಕಿನ ವಿರೋಧ ಪಕ್ಷವಾಗಿ ಹಾಗೂ ಪಕ್ಷವನ್ನು ಬಹಳ ನಿಷ್ಠೆಯಿಂದ ಪಕ್ಷ ಸಂಘಟನೆ ಮಾಡಲಾಗುತ್ತದೆ ಕ್ಷೇತ್ರದಲ್ಲಿ ಬೆಂಬಲಿಸಿದ ಮತದಾರರಿಗೆ ಧನ್ಯವಾದಗಳು ಎಂದರು.
ಪಟ್ಟಣದ ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ಕರೆದು ಮಾತಾನಾಡಿದ ಅವರು ನಮ್ಮ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ನಿತ್ಯ ನಿರಂತರ ಪರಿಶ್ರಮದಿಂದ ಹೆಚ್ಚಿನ ಮತಗಳನ್ನು ಪಡೆಯಾಗಿದ್ದು ಇದಕ್ಕೆಲ್ಲ ಸಹಕಾರ ಮಾಡಿದ ಕ್ಷೇತ್ರದ ಮತದಾರ ಪರವಾಗಿ ಕೆಲಸ ಮಾಡಲಾಗುತ್ತದೆ ಹಾಗೂ ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸಲಾಗುತ್ತದೆ ಹಾಗೂ ಈ ಸೋಲಿನಲ್ಲಿಯೂ ಗೆಲುವು ಸಾಧಿಸಲಾಗುತ್ತದೆ ಎಂದರು.
ಸಂಸದ ಸ್ಥಾನಕ್ಕಿಂತ ಶಾಸಕ ಸ್ಥಾನನಿಂದ ಜನಸೇವೆ ಮಾಡಲು ಸಾಧ್ಯ ಆದರಿಂದ ಸ್ಪರ್ಧೆ ಮಾಡಲಾಗಿದ್ದು ನಮ್ಮ ಕುಟುಂಬದ ರಾಜಕೀಯ ಅನುಭವನನ್ನು ಕ್ಷೇತ್ರದ ಜನರಿಗೆ ದಾರೆಎಳೆಯುತ್ತೇನೆ, ರಾಜಕೀಯವಾಗಿ ಯಾರೇ ವಿರೋಧಿಸದರು ಕೂಡ ನಾನು ಸ್ಥಳೀಯವಾಗಿ ವಾಸ ಮಾಡುವುದರ ಮೂಲಕ ಎಲ್ಲ ಸಮಾಜದವರನ್ನು ಪರಿಗಣಿಸಲಾಗುತ್ತದೆ ಎಂದರು.
ಇಂದಿನ ಶಾಸಕರಿಗೆ ವಯಸ್ಸಾಗಿದೆ ಅವರ ವಿರೋಧ ಪಕ್ಷದ ನಾಯಕರಾಗಿ ಅವರನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತದೆ ಹಾಗೂ ಅವರಂತೆಯೇ ಕೀಳು ಮಟ್ಟದ ಭಾಷೆಯನ್ನು ಬಳಸದೆ ಲೋಪದೋಷಗಳನ್ನು ಸರಿಪಡಿಸಲು ತಿಳಸಿಲಾಗುತ್ತದೆ ಪ್ರಮುಖವಾಗಿ ಬಿಜೆಪಿ ನನಗೆ ದೊಡ್ಡ ಜವಾಬ್ದಾರಿಯನ್ನು ನೀಡಿದ್ದು ಪಕ್ಷಕ್ಕೆ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ ಎಂದರು..
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಶರಣಪ್ಪಗೌಡ ನಕ್ಕುಂದಿ, ಮಲ್ಲಿಕಾರ್ಜುನ ನಕ್ಕುಂದಿ, ಮಹಮ್ಮದ್, ಅಯ್ಯಪ್ಪ ನಾಯಕ, ಶಿವಶರಣಗೌಡ, ನಾಗಲಿಂಗಸ್ವಾಮಿ, ಶ್ರೀಕಾಂತ್, ಗುರು ಸಿದ್ದಪ್ಪ ಕಣ್ಣೂರು, ಸೈಯದ್ ಉಸ್ತಾನ್, ರಾಹುಲ್, ವೆಂಕಟೇಶ ಕೆ, ಚಂದ್ರು, ಸೇರಿದಂತೆ ಅನೇಕರು ಇದ್ದರು.