ಸೋಲಿಗೆ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಗಳು ಭಾವುಕರಾದ ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.16: ತಮ್ಮ ನಾಯಕನ ಸೋಲಿಗೆ  ಅಭಿಮಾನಿಗಳು ಬಿಕ್ಕಿ, ಬಿಕ್ಕಿ ಅತ್ತರೆ, ಅವರ ಕಣ್ಣಿರಿಗೆ ಮಾಜಿ ಸಚಿವ, ಗ್ರಾಮೀಣ ಕ್ಷೇತ್ರದ ಬಿಜೆಪಿಯ ಪರಾಜಿತ ಆಭ್ಯರ್ಥಿ ಬಿ ಶ್ರೀರಾಮುಲು  ಅವರು ಸಹ ಭಾವುಕರಾಗಿದ್ದಾರೆ.
ಶ್ರೀರಾಮುಲು ಕಾಲು ಹಿಡಿದು ಕೊಂಡು ನಿಮಗೆ ಅನ್ಯಾಯ ಮಾಡಿಬಿಟ್ಟೇವು ಎಂದು  ಅಭಿಮಾನಿಗಳು ಅಳುತ್ತಿದ್ದಾರೆ. ಅಭಿಮಾನಿಗಳ ಸಮಾಧಾನ ಮಾಡಲು ಸಹ  ಶ್ರೀರಾಮುಲು ಕೂಡ ಕ್ಷಣಕಾಲ ಗದ್ಗದಿತರಾಗಿ ಕಣ್ಣಿರು ಹಾಕಿದ್ದಾರೆ.
ಸೋಲಿನ ಬಳಿಕ‌ ಸಹೋದರಿ ಜೆ. ಶಾಂತಾ ಮತ್ತಿತರ ಬೆಂಬಲಿಗರೊಂದಿಗೆ ಕ್ಷೇತ್ರದ  ಮೋಕಾ ಮತ್ತಿತರ ಹಳ್ಳಿಗಳಲ್ಲಿ ತಮಗೆ ಮತ ನೀಡಿದ ಜನರ ಜೊತೆ ಸಮಾಲೋಚನೆ ಜೊತೆಗೆ ಸೋಲಿನ ಪರಾಮರ್ಶೆಗೆ ಹಳ್ಳಿಗಳ ಪ್ರವಾಸದಲ್ಲಿದ್ದಾರೆ.
ಮೂವತ್ತು ಸಾವಿರ ಅಂತರದಿಂದ ಶಾಸಕ ನಾಗೇಂದ್ರ ವಿರುದ್ಧ ಸೋಲಿನ ಬಗ್ಗೆ ರಾಮುಲು ಅವರು ಸಹ ತೀವ್ರ ಬೇಸರವಾಗಿದ್ದಾರೆ.
ಆಗಿದ್ದು, ಆಗಿದೆ. ಬಂದುದ್ದನ್ನು ಎದುರಿಸೋಣ, ಹೋರಾಟ ಮಾಡೋಣ ಎನ್ನುವ ಶ್ರೀರಾಮುಲು ಅವರ ಕಾಲಿಗೆ ಬಿದ್ದು ಹೀಗಾಗಬಾರದಿತ್ತು ಎಂದು ಅಳುವ ವ್ಯಕ್ತಿಗೆ ಇನ್ನಿತರ ಜನರು. ಅವರೇ ದುಖಃದಲ್ಲಿರುವಾಗ ಹೀಗೆ ಮಾಡುವುದು ಸರಿಯಲ್ಲ ಎಂದು ಸಂತೈಸುತ್ತಾರೆ. ನೀವು ಇರಿ ನಾವು ಇನ್ನು ಮುಂದೇ ಏನು ಬೇಕಾದರೂ ಮಾಡಲು ಸಿದ್ದರಿದ್ದೇವೆ ಎನ್ನುತ್ತಾರೆ ಬೆಂಬಲಿಗರು. ಈ ದೃಶ್ಯದ ವೀಡಿಯೋ ಈಗ ವೈರಲ್ ಆಗಿದೆ.
ಮೊದಲ 1999 ರ ಚುನಾವಣೆಯ  ರಾಜಕೀಯ ಆರಂಭಗೊಂಡು ಅಂದು ಮೊದಲ‌ ಬಾರಿ ಸೋತರೂ ಅಷ್ಟು ನೋವಾಗಿರಲಿಲ್ಲ. ನಂತರ 2004ರಿಂದ ಈವರೆಗೆ ‌ಸೋತಿರಲಿಲ್ಲ. 2004 ಬಳ್ಳಾರಿ ನಗರ, 2008, 2011ರ ಉಪಚುನಾವಣೆ 2013 ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣದಿಂದ ಗೆದ್ದಿತ್ತು 2014ರಲ್ಲಿ‌ ಕ್ಷೇತ್ರ ಬಿಟ್ಟು ಎಂಪಿಯಾಗಿದ್ದ ಶ್ರೀರಾಮುಲು 2018ರಲ್ಲಿ ಮೊಳಕಾಲ್ಮೂರಿನಿಂದ ಗೆದ್ದಿದ್ದರು.