ಸೋಲಾರ್ ಪಾರ್ಕ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ:ಸಚಿವ ಖೂಬಾ

ಬೀದರ ಸೆ 2: ಜಿಲ್ಲೆಯ ಔರಾದ ತಾಲೂಕಿನಲ್ಲಿ ನೂತನ ಹಾಗೂ
ನವೀಕರಿಸಬಹುದಾದ ಇಂಧನ ಮೂಲ ಸಚಿವಾಲಯದಿಂದ ಸೋಲಾರ್
ಪಾರ್ಕ ನಿರ್ಮಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು
ಕೇಂದ್ರ ಸಚಿವ ಭಗವಂತ ಖೂಬಾರವರು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಔರಾದ ತಾಲೂಕಿನಲ್ಲಿ ಸುಮಾರು 3500
ಎಕರೆ ಜಮೀನು ಅವಶ್ಯಕತೆಯಿದ್ದು, ಜಾಗ ಗುರುತಿಸುವಲ್ಲಿ ಜಿಲ್ಲಾಡಳಿತ ಕಾರ್ಯನಿರತವಾಗಿದೆ.ಅಲ್ಲಲ್ಲಿ ರೈತರುಸಹ ಜಮೀನು ನೀಡಲು ಒಪ್ಪಿಗೆ ಸೂಚಿಸುತ್ತಿದ್ದಾರೆ.ಈ ಸೋಲಾರ ಪಾರ್ಕನಿಂದ ಸುಮಾರು 1000 ಮೆಗಾವ್ಯಾಟ್ ವಿದ್ಯುತ ಉತ್ಪಾದನೆಯಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ವಿದ್ಯುತ ಉತ್ಪಾದನೆಯಲ್ಲಿ ಸ್ವಾವಲಂಬತೆಯನ್ನು
ಹೊಂದಿ, 2030ರವೆಗೆ 500 ಗಿಗಾ ವ್ಯಾಟ ವಿದ್ಯುತ್ಚಕ್ತಿಯನ್ನು
ನವೀಕರಿಸಬಹುದಾದ ಇಂಧನ ಮೂಲದಿಂದ ಉತ್ಪಾದಿಸಬೇಕೆನ್ನುವ
ಉದ್ದೇಶ ದೇಶದ ಪ್ರಧಾನಮಂತ್ರಿನರೇಂದ್ರ ಮೋದಿಯವರು ಹೊಂದಿದ್ದಾರೆ.
ಪ್ರಧಾನಮಂತ್ರಿಯವರ ಆಶಯದಂತೆ, ಕೇಂದ್ರ ನೂತನಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯವು ಶ್ರಮಿಸುತ್ತಿದೆ
ಎಂದು ಸಚಿವರು ತಿಳಿಸಿದ್ದಾರೆ.ಸೋಲಾರ ಪಾರ್ಕ ನಿರ್ಮಾಣಕ್ಕೆ ಸಂಬಂಧಿüಸಿದಂತೆ ರಾಜ್ಯ ಸರ್ಕಾರವುಸಹ ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ.ರಾಜ್ಯದಿಂದ ಎಲ್ಲಾ ಸಹಕಾರ ನೀಡುವ ಭರವಸೆಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿಯವರು ನೀಡಿದ್ದಾರೆ. ಸೋಲಾರ್ ಪಾರ್ಕ ನಿರ್ಮಾಣಕ್ಕೆ ಔರಾದ ತಾಲೂಕಿನ ಜನತೆಯೂ ತಮ್ಮ ಜಮೀನು ಸರ್ಕಾರಕ್ಕೆ ಗುತ್ತಿಗೆ (ಲೀಸ್) ನೀಡಬೇಕೆಂದು ಕೇಂದ್ರ ಸಚಿವರು
ತಾಲೂಕಿನ ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ.