
ಕೋಲಾರ, ಸೆ, ೧೩- ಒಕ್ಕೂಟದಲ್ಲಿನ ವಿದ್ಯುತ್ ಶುಲ್ಕಕ್ಕೆ ಕಡಿವಾಣ ಹಾಕಲು ಹೊಳಲಿ ಸಮೀಪವಿರುವ ಒಕ್ಕೂಟದ ಜಮೀನಿನಲ್ಲಿ ಸೋಲಾರ್ ಘಟಕ ಸ್ಥಾಪಿಸಿ ಅದರಿಂದ ಬರುವ ಆದಾಯ ಹಾಲು ಉತ್ಪಾದಕರ ರಕ್ಷಣೆಗೆ ವಹಿಸಲಾಗುತ್ತದೆ ಎಂದು ಕೋಚಿಮುಲ್ ನಿರ್ದೇಶಕ ವಡಗೂರು ಡಿ.ವಿ.ಹರೀಶ್ ತಿಳಿಸಿದರು
ತಾಲ್ಲೂಕಿನ ವಿಟ್ಟಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಒಕ್ಕೂಟವು ಕೊರೊನಾ ಸಂದರ್ಭದಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸ ಬೇಕಾಯಿತು ಕ್ರಮೇಣ ಹಂತ ಹಂತವಾಗಿ ಲಾಭವನ್ನು ಪಡೆಯುವ ಹಂತಕ್ಕೆ ಬಂದಿದ್ದು, ರೈತರು ಕೂಡ ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡುವುದರಿಂದ ಆದಾಯ ಹೆಚ್ಚಿಸಿಕೊಳ್ಳಿ ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ಪಾದಕರರು ಲಾಭ ಪಡೆಯುವಂತಾಗಬೇಕೆಂದರು.
ರಾಜ್ಯದಲ್ಲಿನ ಸುಮಾರು ೧೪ ಒಕ್ಕೂಟಗಳಲ್ಲಿನ ಹಾಲು ಉತ್ಪಾದನೆಯಲ್ಲಿ ಕೋಲಾರ ಚಿಕ್ಕಬಳ್ಳಾಪುರ ಒಕ್ಕೂಟ ಎರಡನೇ ಸ್ಥಾನ ಪಡೆದಿದೆ, ಚಿಂತಾಮಣಿ ಬಳಿ ಐಸ್ ಕ್ರೀಂ ಫ್ಯಾಕ್ಟರಿಗೆ ಆಡಳಿತ ಮಂಡಳಿ ಅನುಮೋದನೆ ನೀಡಿದೆ ಹಂತ ಹಂತವಾಗಿ ಒಕ್ಕೂಟದಿಂದ ಸಿಗುವ ಲಾಭವನ್ನು ಉತ್ಪಾದಕರಿಗೆ ನೀಡಲಾಗುತ್ತದೆ ಎಂದು ಹೇಳಿದರು
ವಿಟ್ಟಪನಹಳ್ಳಿ ಎಂಪಿಸಿಎಸ್ ಡೇರಿಯು ಸುಮಾರು ೩೬ ವರ್ಷಗಳ ಇತಿಹಾಸ ಹೊಂದಿದೆ ಒಕ್ಕೂಟದಿಂದ ಸೌಲಭ್ಯಗಳನ್ನು ಪಡೆದುಕೊಂಡು ಹಾಲು ಕರೆಯುವ ಯಂತ್ರ, ಬಿಎಂಸಿ ಕೇಂದ್ರದ ಸ್ಥಾಪನೆ ಮಾಡಲಾಗಿದೆ, ಈ ಡೇರಿಯೂ ತಾಲೂಕಿನ ಮಾದರಿ ಡೇರಿಗಳಲ್ಲಿ ಒಂದಾಗಿದೆ ಇದೇ ಮಾದರಿಯಲ್ಲಿ ಮುಂದುವರೆಯಲಿ ಎಂದರು.
ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ ಮಾತನಾಡಿ, ಹಾಲು ಉತ್ಪಾದಕರು ಖಾಸಗಿ ಡೇರಿಗಳಿಗೆ ಹಾಲು ನೀಡದೆ ನೇರವಾಗಿ ಒಕ್ಕೂಟದ ಡೇರಿಗಳಿಗೆ ಹಾಕುವುದರ ಮೂಲಕ ಸರಕಾರದಿಂದ ಹಾಗೂ ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ಹಾಲು ಒಕ್ಕೂಟದಿಂದ ವಿಮಾ ಸೌಲಭ್ಯ ಕಲ್ಪಿಸಲಾಗಿದೆ, ಹಸುಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ಹಾಗೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ, ಇವತ್ತು ಹೈನುಗಾರಿಕೆ ರೈತರ ಜೀವನಾಡಿಯಾಗಿದೆ, ಹಾಲು ಉತ್ಪಾದನೆಯ ಮೂಲಕ ತಕ್ಕಮಟ್ಟಿಗೆ ಆರ್ಥಿಕವಾಗಿ ಚೇತರಿಸಿಕೊಂಡಿದ್ದಾರೆ, ಉತ್ತಮ ಗುಣಮಟ್ಟದ ಹಸುಗಳನ್ನು ಖರೀದಿಸಿ ವೈಜ್ಞಾನಿಕವಾಗಿ ಹಾಲು ಉತ್ಪಾದಿಸಬೇಕು ಎಂದು ಹೇಳಿದರು.
ವಿಟ್ಟಪನಹಳ್ಳಿ ಡೇರಿ ಅಧ್ಯಕ್ಷ ವಿ.ಆರ್ ಮಂಜುನಾಥ್ ಮಾತನಾಡಿ, ಸತತವಾಗಿ ನಾಲ್ಕನೇ ವರ್ಷವು ಹಂತ ಹಂತವಾಗಿ ಲಾಭವನ್ನು ಪಡೆದಿದೆ, ಈ ಬಾರಿ ಸುಮಾರು ೧೫ ಲಕ್ಷದಷ್ಟು ವ್ಯಾಪಾರ ಲಾಭ ಹಾಗೂ ೬.೫ ಲಕ್ಷದಷ್ಟು ನಿವ್ವಳ ಲಾಭ ಪಡೆದಿದೆ ಉತ್ಪಾದಕರನ್ನು ಉತ್ತೇಜಿಸಲು ಉಡುಗೊರೆ ಹಾಗೂ ಬೋನಸ್ ಸಹ ನೀಡಲಾಗಿದೆ, ಪಶು ಆಹಾರದಲ್ಲಿ ಒಂದು ಮೂಟೆಗೆ ೧೦೦ ರೂಪಾಯಿ ಕಡಿಮೆಗೆ ನೀಡಲು ಸಹ ಆಡಳಿತ ಮಂಡಳಿ ನಿರ್ಧರಿಸಿದೆ ಉತ್ಪಾದಕರರು ಗುಣಮಟ್ಟದ ಹಾಲು ನೀಡುವ ಮೂಲಕ ಡೇರಿ ಹಾಗೂ ಒಕ್ಕೂಟವು ಲಾಭಗಳಿಸಲು ಕೈಜೋಡಿಸಬೇಕು ಎಂದರು.
ಕೋಚಿಮುಲ್ ಒಕ್ಕೂಟ ಉಪ ವ್ಯವಸ್ಥಾಪಕ ಡಾ.ಮಹೇಶ್, ಒಕ್ಕೂಟ ಹಣಕಾಸು ವಿಭಾಗದ ಮುರಳಿ, ವಿಸ್ತರಣಾಧಿಕಾರಿ ನಾಗಪ್ಪ, ವಿಟ್ಲಪನಹಳ್ಳಿ ಗ್ರಾಪಂ ಸದಸ್ಯ ಕೋಟೆ ನಾರಾಯಣಸ್ವಾಮಿ, ಸಂಘದ ನಿರ್ದೇಶಕರಾದ ಟಿ.ಹನುಮಪ್ಪ, ಎನ್.ನಾರಾಯಣಸ್ವಾಮಿ, ಪಿ.ಶಂಕರಪ್ಪ, ವಿ.ಎಸ್ . ಸುಬ್ರಮಣಿ, ವಿ.ಎಸ್ ಪ್ರಕಾಶ್ ಬಾಬು, ಚೌಡಮ್ಮ, ರತ್ನಮ್ಮ, ಜಯರಾಮ್, ಕಾರ್ಯದರ್ಶಿ ವಿ.ಎಂ ವೆಂಕಟೇಶ್, ಸಿಬ್ಬಂದಿಗಳಾದ ವಿ.ಎಂ ನಾರಾಯಣಸ್ವಾಮಿ, ಮಾರ್ಕೊಂಡಪ್ಪ, ಮಂಜುನಾಥ್ ಇದ್ದರು.