ಸೋಲಾಪುರ-ಹಾಸನ ಎಕ್ಸ್‌ಪ್ರೆಸ್ ರೈಲಿಗೆ ಒತ್ತಾಯ

ರಾಯಚೂರು.ನ.೦೫- ಸೋಲಾಪುರ-ಹಾಸನ ನಡುವೆ ಓಡಾಡುವ ಎಕ್ಸಪ್ರೆಸ್ ರೈಲಿಗೆ (ರೈಲ್ ನಂಬರ್ ೧೧೩೧೧) ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿ, ಈ ಪ್ರದೇಶದ ಘನತೆ ಎತ್ತಿ ಹಿಡಿಯುವಂತೆ ದಕ್ಷೀಣ ಮಧ್ಯೆ ರೈಲ್ವೆ ಬೋರ್ಡ್ ಸದಸ್ಯರಾದ ಬಾಬುರಾವ್ ರೈಲ್ವೆ ಮಂತ್ರಿ ಅಶ್ವೀನ ವೈಷ್ಣವ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಈ ಪ್ರಾಂತದ ಜನರ ದಿನದ ಬೇಡಿಕೆಯಾಗಿದೆ ಎಂದು ಗಮನಕ್ಕೆ ತಂದಿದ್ದಾರೆ. ಈ ರೈಲು ಪ್ರಯಾಣ ಹೆಚ್ಚಾಗಿ ಕಲ್ಯಾಣ ಕರ್ನಾಟಕದವರೇ ಬಳಕೆ ಮಾಡಿತ್ತಾರೆ. ರೈಲ್ವೆ ಇಲಾಖೆಗೆ ಕಲ್ಬುರ್ಗಿ, ಯಾದಗಿರ್ ಮತ್ತು ರಾಯಚೂರು ಜಿಲ್ಲೆಗಳಿಂದ ಶೇ.೯೫ ರಷ್ಟು ಆದಾಯ ಸಂದಾಯವಾಗುತ್ತದೆ ಎಂದು ತಿಳಿಸಿದ್ದಾರೆ. ಸೋಲ್ಲಾಪುರ-ಗುಂತಕಲ್ ನಡುವಿನ ಪ್ಯಾಸೆಂಜರ್ ರೈಲ್ ನಂಬರ್ ೭೧೩೦೧ ರೈಲು ಮತ್ತೆ ಆರಂಭಿಸಿ, ರೈಲು ಪ್ರಯಾಣಿಕರಿಗೆ ಅನುಕೂಲ ಮಾಡಿಕೋಡಬೇಕು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣ ತಿಳಿಸಿ, ಓಡಾಟ ನಿಲ್ಲಿಸಲಾಗಿದ್ದು, ಆರಂಭವಾಗುವ ಲಕ್ಷ್ಷಣಗಳೇ ಕಾಣುತ್ತಿಲ್ಲವೆಂದು ತಿಳಿಸಿದ್ದಾರೆ. ಸೋಲ್ಲಾಪುರ ಬೆಳಗಿನ ಜಾವಾ ಬಿಟ್ಟು, ೩೮ ನಿಲ್ದಾಣಗಳ ಮೂಲಕ ಬರುತ್ತಿತ್ತು. ೩೮೦ ಕೀ.ಮೀ. ಸಂಚರಿಸುತ್ತಿತ್ತು ಎಂದು ತಿಳಿಸಿದ್ದಾರೆ. ಪ್ರಯಾಣ ದರ ಕಡಿಮೆ, ಸಣ್ಣ ನಿಲ್ದಾಣಗಳಲ್ಲೂ ನಿಲುಗಡೆ ಇದ್ದ ಕಾರಣ ಶಾಲಾ ವಿದ್ಯಾರ್ಥಿಗಳಿಗೆ, ಕೂಲಿಕಾರರಿಗೆ, ರೈತರಿಗೆ, ಸರ್ಕಾರಿ ನೌಕರರಿಗೆ ಮತ್ತು ಇತರ ವರ್ಗಕ್ಕೆ ಅನುಕೂಲಕರವಿತ್ತು ಎಂದು ತಿಳಿಸಿ, ತಕ್ಷಣ ಪುನಃ ಆರಂಭಕ್ಕೆ ಆಗ್ರಹಿಸಿದ್ದಾರೆ.