ಬೀದರ್: ಸೆ.21:ತಾಲೂಕಿನ ಸೋಲಪೂರ ಗ್ರಾಮದಲ್ಲಿ ಇತ್ತಿಚೀಗೆ ಶ್ರೀ ವೀರಭದ್ರೇಶ್ವರ ಜಯಂತಿ ಜರುಗಿತು.
ಭಾದ್ರಪದ ಮಾಸದ ಪ್ರಥಮ ಮಂಗಳವಾರ ಶ್ರೀ ವಿರಭದ್ರೆಶ್ವರ ಜನ್ಮದಿನ ಆಗಿರುತ್ತದೆ. ವಿರಶೈವ ಆಗಮ ಆದಾರವಾಗಿ ಪರಶಿವನ ರುದ್ರ ಅವತಾವಾಗಿ ತಾಳಿದ ಶ್ರೀ ವಿರಭದ್ರೆಶ್ವರ ದಕ್ಷ ಭ್ರಹ್ಮನ ಅಹಂಕಾರ ಮುರಿಯಲು ಜನ್ಮ ತಾಳಿದ ದಿನವಿದು. ಭ್ರಹ್ಮ, ವಿಷ್ಣು, ಮಹೇಶ್ವರ ದೇವರಲ್ಲಿ ಸೃಷ್ಟಿಕರ್ತ ಬ್ರಹ್ಮನಾದರೆ, ವ್ಯವಸ್ಥಾಪಕನಾಗಿ ವಿಷ್ಣು, ಲಯಕರ್ತನಾಗಿ ಪರಮಾತ್ಮ ಈ ಮೂವರು ಬ್ರಹ್ಮಾಂಡದ ತ್ರಿಮೂರ್ತಿಗಳು ಎಷ್ಟು ಸತ್ಯವೋ ಅμÉ್ಟೀ ಸತ್ಯವು ಶ್ರೀ ವೀರಭದ್ರನ ಅವತಾರ. ದುಷ್ಟ ಸಂಹಾರಕ್ಕಾಗಿ ಸೃಷ್ಟಿಯ ರಕ್ಷಣೆಗಾಗಿ ವೀರ ಪರಂಪರೆಯ ಪಾಲನೆಗಾಗಿ ಶಿವ ತತ್ವ ಪ್ರಚಾರಕ್ಕಾಗಿ ಭೂಲೋಕದಲ್ಲಿ ನೆಲೆಗೊಳಿಸಿದ್ದಾನೆ. ಶ್ರೀ ವೀರಭದ್ರನ ಒಂದು ಮತಕ್ಕೆ ಆರಾಧ್ಯ ದೈವವಾಗಿಲ್ಲ ಸುಮಾರು 18 ಮತಗಳಿಗೆ ಆರಾಧ್ಯ ದೈವನಾಗಿ ಕುಲದೈವನಾಗಿ ಭೂಲೋಕದಲ್ಲಿ ಸಭಕ್ತರಿಗೆ ಆಶೀರ್ವದಿಸುತ್ತಿರುವುದು ಕಾಣಬಹುದು.
ಗ್ರಾಮದಲ್ಲಿ ಶ್ರೀ ನಂದಿ ಬಸವೇಶ್ವರ ಸಮೆತ ಶ್ರೀ ವಿರಭದ್ರೇಶ್ವರ ದೆವಸ್ಥಾನದಲ್ಲಿ ಶ್ರಾವಣಮಾಸ ಪ್ರಯುಕ್ತ ಲೊಕ ಕಲ್ಯಾಣಕ್ಕಾಗಿ ಶ್ರೀ ವಿರಭದ್ರೇಶ್ವರನಿಗೆ ರುದ್ರಾಭಿμÉೀಕ ಅಷ್ಟುತೊರ ಶತನಾಮಾವಳಿ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ತಮಲುರಿನ ಶ್ರೀ ಷ ಬ್ರ ಶಿವಾನಂದ ಶಿವಾಚಾರ್ಯ ಆಶೀರ್ವಚನ ನೀಡಿ, ನಾವು ನಿವುಗಳೆಲ್ಲ ನಂದಿ ವಂಶಪಾರಂಪರ್ಯವಾಗಿ ಹಾಗೂ ವಿರಗೋತ್ರ ವೀರಭದ್ರೇಶ್ವರ ಸಂತಾನವಾಗಿ ಈ ಭುಮಿ ಮೇಲೆ ಅವನ ಆರಾದನೆ ಮಾಡುವದು ನಮ್ಮ ಪುಣ್ಯ. ತಾವು ಒಂದು ತಿಂಗಳ ಪರಿಯಂತರ ಶ್ರೀ ಅಕ್ಕಮಹಾದೇವಿ ಮಹಿಳಾ ಸಂಘದಿಂದ ಬಜನೆ ಮಾಡಿಕೊಂಡು ಬಂದಿರುವುದು ಶ್ರೀಗಳಿಗೆ ಅತ್ಯಂತ ಸಂತೋಷವಾಗಿದೆ. ಇಂದಿನ ದಿನಮಾನದಲ್ಲಿ ಆಧ್ಯಾತ್ಮಿಕ ಚಿಂತನೆ ಮಾಡುವದು ಬಲು ದುಸ್ತರ. ಹಾಗಾಗಿ ಬರುವ ದಿನಗಳಲ್ಲಿ ನಾವು ಈ ಸೊಲಪೂರ ಗ್ರಾಮದಲ್ಲಿ ಮುರು ದಿನಗಳ ಕಾಲ ಬೆಳಿಗ್ಗೆ ಹಾಗೂ ಸಾಯಂಕಾಲ ಪ್ರವಚನ ಕಾರ್ಯಕ್ರಮ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಸಿದ್ದಪ್ಪ ಖೆಳಗಿ, ಸಂಗಶೆಟ್ಟಿ ಖೆಳಗೆ, ಶ್ರೀಕಾಂತ ಸ್ವಾಮಿ ಸೊಲಪೂರ, ರಾಚಯ್ಯ ಸ್ವಾಮಿ, ವಿರಶೆಟ್ಟಿ ಪಾಟೀಲ, ಮಂಜುನಾಥ ಮಲಕನೊರ, ಗುಂಡಪ್ಪ ಮಡೆಪನೊರ, ಬಸವರಾಜ ಬೀರಾದರ, ಶಿವಕುಮಾರ ರಾಯಪನೊರ, ಗುಣವಂತ ಪಾಟೀಲ, ಹಿರಿಯರಾದ ಅಣ್ಣೆಪಾ ಪಾಟೀಲ ಮತ್ತು ತಿಪ್ಪಣ್ಣ ಜಟನೊರ ಉಪಸ್ಥಿತರಿದ್ದರು.