ಸೋರೆಕಾಯಿಯ ಉಪಯೋಗಗಳು

ಸೋರೆಕಾಯಿ ಬಹಳ ಜನಪ್ರಿಯ ತರಕಾರಿ. ಇದರಲ್ಲಿ ಪಲ್ಯ, ಕೂಟು, ದೋಸೆ, ಹುಳಿ, ಹಲ್ವ, ಮಜ್ಜಿಗೆ ಹುಳಿ ಮಾಡುತ್ತಾರೆ. ಮಧುಮೇಹಿ, ಮೂಲವ್ಯಾಧಿ, ಕಾಮಾಲೆ, ರಕ್ತದ ಒತ್ತಡ ಇರುವವರು ಇದನ್ನು ಉಪಯೋಗಿಸಿದ್ದರೆ, ಶರೀರಕ್ಕೆ ತಂಪನ್ನುಂಟು ಮಾಡುತ್ತದೆ. ಈ ತರಕಾರಿ ಗರ್ಭಿಣಿ ಸ್ತ್ರೀಯರಿಗೆ, ಹೃದಯ ದೌರ್ಭಲ್ಯ, ಮಕ್ಕಳಿಗೆ ಎಲ್ಲರಿಗೂ ಒಳ್ಳೆಯ ತ್ರಾಣಿಕ.
ಪೌಷಕಾಂಶಗಳು: ಸೋರೆಕಾಯಿಯಲ್ಲಿ ತೇವಾಂಶ, ಖನಿಜಾಂಶ, ಕಾರ್ಬೋಹೈಡ್ರೈಟ್ಸ್, ನಾರಿನಾಂಶ, ಮೇದಸ್ಸು, ಕ್ಯಾಲ್ಸಿಯಮ್, ಮೆಘ್ನೇಶಿಯಮ್, ಸೋಡಿಯಂ, ಪಾಸ್ಪರಸ್, ಕಬ್ಬಿಣ, ಕಾಪರ್, ಗಂಧಕ, ‘ಸಿ’ ಜೀವಸತ್ವ ಇವೆಲ್ಲವೂ ಇದೆ. ಸೋರೆಕಾಯಿಯನ್ನು ಉಪಯೋಗಿಸುವುದರಿಂದ ಹಲವಾರು ರೋಗಗಳನ್ನು ನಿವಾರಣೆ ಮಾಡಲು ಸಹಾಯವಾಗುತ್ತದೆ.

ಔಷಧೀಯ ಗುಣಗಳನ್ನು ಪರಿಶೀಲಿಸೋಣ

೧. ಗರ್ಭಿಣಿಯ ನಿಶ್ಯಕ್ತಿಗೆ: ಸೋರೆಕಾಯಿಯ ಪಲ್ಯ ತಿನ್ನುವುದರಿಂದ ಗರ್ಭಿಣಿಯರ ನಿಶ್ಯಕ್ತಿ ದೂರವಾಗಿ, ಒಳಗೆ ಬೆಳೆಯುವ ಮಗುವಿಗೆ ಪುಷ್ಠಿ ದೊರೆಯುತ್ತದೆ.
೨. ಪುರುಷರಿಗೆ ಪುಂಸತ್ವ: ಪುರುಷರು ಸೋರೆಕಾಯಿಯನ್ನು ಸೇವನೆ ಮಾಡುವುದ ರಿಂದ ಪುರುಷತ್ರ (ಪುಂಸತ್ವ) ಜಾಸ್ತಿಯಾಗುತ್ತದೆ.
೩. ಅಂಗೈ, ಅಂಗಾಲು ಉರಿಗೆ: ಸೋರೆಕಾಯಿ ರಸವನ್ನು ಹಚ್ಚುವುದರಿಂದ ಅಂಗೈ ಅಂಗಾಲು ಉರಿ ಗುಣಮುಖವಾಗುತ್ತದೆ.
೪. ರೋಗನಿರೋಧಕ ಶಕ್ತಿ: ಸೋರೆಕಾಯಿಯನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
೫. ಮುಖದಕಾಂತಿಗೆ: ಸೋರೆಕಾಯಿಯ ತಿರುಳನ್ನು ರುಬ್ಬಿ ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯುತವಾಗುತ್ತದೆ.
೬. ಕೂದಲ ಬೆಳವಣಿಗೆ: ಸೋರೆಕಾಯಿಯ ರಸದಿಂದ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ, ತಲೆಕೂದಲು ಸೊಂಪಾಗಿ ಬೆಳೆಯುತ್ತದೆ.
೭. ಮಲಬದ್ಧತೆ ನಿವಾರಣೆ: ಸೋರೆಕಾಯಿರಸವನ್ನು ಸೇವಿಸುವುದರಿಂದ ಮಲವು ಸಡಿಲಗೊಳ್ಳುತ್ತದೆ. ಇದರಿಂದಾಗಿ ಮಲಬದ್ಧತೆ ನಿವಾರಣೆಯಾಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧