ಸೋರುತ್ತಿರುವ ಮಿನಿವಿಧಾನಸೌಧ ತಹಶೀಲ್ದಾರರಿಂದ ಪರಿಶೀಲನೆ

ಮುದ್ದೇಬಿಹಾಳ:ಜೂ.10: ಪಟ್ಟಣದ ಇಲ್ಲಿನ ಹುಡ್ಕೋ ಬಡಾವಣೆಯಲ್ಲಿರುವ ಮಿನಿವಿಧಾನ ಸೌಧದೊಳಗೆ ಇರುವ ಕೆಲ ಕೋಠಡಿಗಳು ಮಳೆ ಸುರಿದ ಪರಿಣಾಮ ಸರಕಾರಿ ದಾಖಲೆಗಳು ಹಾಳಾಗುತ್ತಿರುವುದನ್ನು ಮನಗಂಡು ನೂತನ ತಹಶಿಲ್ದಾರ ಬಿ ಎಸ್ ಕಡಕಭಾವಿ ಅವರು ಬುಧವಾರ ಸಂಪೂರ್ಣ ಮಿನಿವಿಧಾನ ಸೌಧದ ಸುತ್ತಾಡಿ ಪರಿಶಿಲನೇ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಈಗಾಗಲೇ ಮಿನಿ ವಿಧಾನ ಸೌಧ ಕಟ್ಟಡದೊಳಗೆ ಕಂದಾಯ ಇಲಾಖೆ, ಸಬ್ ರಜಿಷ್ಟರ್ ಕಚೇರಿ, ಭೂಮಿ ಕೇಂದ್ರ, ಚುನಾವಣಾ ವಿಭಾಗ, ಸಿಟಿ ಸರ್ವೇ ಕಚೇರಿ ಹಾಗೂ ಟ್ರಜರಿ ಕಚೇರಿ ಸೇರಿದಂತೆ ಇತರೇ ಸರಕಾರಿ ಕಚೇರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು.

ಆದರೇ ಮಿನಿ ವಿಧಾನ ಸೌಧದೊಳಗಿನ ಬಹುತೇಕ ಎಲ್ಲ ಕೋಡಿಗಳು ಮಳೆ ಸುರಿಯುತ್ತಿರುವುದರಿಂದ ಸೋರುವಿಕೆ ಪ್ರಾರಂಭಗೊಂಡು ಕೋಠಡಿ ಗೋಡೆಗಗಳ ಒಳಗೆ ನೀರು ಇಳಿದು ಸರಕಾರಿ ಮೂಲ ದಾಖಲೆಗಳು ಹಾಳಾಗುತ್ತಿವೆ ಕಾರಣ ದಾಖಲೆಗಳು ಹಾಳಾಗದಂತೆ ಎಲ್ಲಿ ಸೋರುವಿಕೆ ಇದೇ ಅಲ್ಲಲ್ಲಿ ದುರಸ್ಥಿಗೊಳಿಸುವುದು ಮತ್ತು ಸರಕಾರಿ ಕೆಲಸಕ್ಕೆಂದು ಬರುವ ಸಾರ್ವಜನಿಕರಿಗೆ ಶೌಚಾಲಯ, ಶುದ್ಧ ಕುಡಿಯುವ ನೀರು ಒದಗಿಸುವುದು ಸೇರಿದಂತೆ ಹಲವು ರೀತಿಯ ಮೂಲಬೂತ ಸೌಲಭ್ಯಗಳನ್ನು ಒದಗಸಲು ಮೇಲಾಧಿಕಾರಿಗಳ ಗಮನಕ್ಕೆ ತಂದು ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು.

ಈ ವೇಳೆ ಹೋರಗಡೆ ಬೇಕಾಬಿಟ್ಟಿಯಾಗಿ ನಿಲ್ಲಿಸಲಾಗುತ್ತಿರು ದ್ವೀಚಕ್ರ ವಾಹನಗಳನ್ನು ಒಂದೆ ಕಡೆ ನಿಲ್ಲುವಂತೆ ಮಾಡುವ ಮೂಲಕ ಸುಂದರ ಹಾಗೂ ಸ್ವಚ್ಛತೆಯಿಂದ ಸರಕಾರಿ ಮಿನಿ ವಿಧಾನ ಸೌಧ ಕಾಣುವಂತೆ ಮಾಡುವುದು ಮುಖ್ಯ ಉದ್ದೇಶ ಇದಾಗಿದೆ ಎಂದರು.ಸಧ್ಯ ಕೋರೊನಾ ಎರಡನೆ ಅಲೇ ಬಳಕ ಬೀಕರತೆಯಿಂದ ಕೂಡಿದ್ದು ಸಾರ್ವಜನಿಕರು ಕಚೇರಿಗೇ ಬರಬೇಕಾದರೇ ಸರಕಾರದ ಮಾರ್ಗ ಸೂಚಿಯಂತೆ ಮಾಸ್ಕ್ ಧರಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದಕೊಂಡು ತಮ್ಮ ಕೆಲಸಗಳನ್ನು ಮಾಡಿಕೊಂಡು ಜಾಗೃರಾಗಿರಬೇಕು ಎಂದರು