ಸೋಯಾ ಚಿಕನ್

ಬೇಕಾಗುವ ಸಾಮಗ್ರಿಗಳು

*ಚಿಕನ್ – ೧/೨ ಕೆ,ಜಿ
*ಅಕ್ಕಿ ಹಿಟ್ಟು – ೧ ಚಮಚ
*ಮೈದಾಹಿಟ್ಟು -೧ ಚಮಚ
*ಅರಿಶಿಣ – ೧/೨ ಚಮಚ
*ಕರಿಬೇವು – ೧೫ ಎಲೆ
*ಕಾಳು ಮೆಣಸಿನಕಾಯಿ – ೧ ಚಮಚ
*ಈರುಳ್ಳಿ – ೧
*ನಿಂಬೆಹಣ್ಣು -೧
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಗರಂ ಮಸಾಲ – ೧/೨ ಚಮಚ
*ಕಸೂರಿ ಮೇಥಿ – ೧/೨ ಚಮಚ
*ಚಿಲ್ಲಿ ಸಾಸ್ – ೧ ಚಮಚ
*ಸೋಯಾಸಾಸ್ – ೧ ಚಮಚ
*ಟೊಮೆಟೋ ಸಾಸ್ – ೧ ಚಮಚ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಎಣ್ಣೆ – ೧ ಲೀಟರ್

ಮಾಡುವ ವಿಧಾನ :

ಬೌಲಿಗೆ ದಪ್ಪಗೆ ಕಟ್ ಮಾಡಿದ ಚಿಕನ್ ಹಾಕಿ. ಇದಕ್ಕೆ ಅಕ್ಕಿಹಿಟ್ಟು, ಮೈದಾಹಿಟ್ಟು, ಗರಂ ಮಸಾಲ, ಕಸೂರಿ ಮೇಥಿ, ಚಿಲ್ಲಿಸಾಸ್, ಸೋಯಾಸಾಸ್, ಶುಂಠಿ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಬೆರೆಸಿ. ಬಾಣಲಿಗೆ ಎಣ್ಣೆ ಹಾಕಿ ಕಾದನಂತರ ಒಂದೊಂದೇ ಪೀಸ್‌ಗಳನ್ನು ಹಾಕಿ ಕರಿಯಿರಿ.
ಪ್ಯಾನಿಗೆ ೩ ಚಮಚ ಎಣ್ಣೆ ಹಾಕಿ. ಕಾದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ,ಪೇಸ್ಟ್, ಕಸೂರಿ ಮೇಥಿ, ಗರಂ ಮಸಾಲ, ಅರಿಶಿಣ ಹಾಕಿ ಹಸಿವಾಸನೆ ಹೋಗುವವರೆಗೆ ಹುರಿಯಿರಿ. ಇದರ ಜೊತೆಗೆ ಕರಿಬೇವು, ಕಾಳು ಮೆಣಸಿನ ಪುಡಿ, ಚಿಲ್ಲಿಸಾಸ್, ಸೋಯಾಸಾಸ್, ಟೊಮೆಟೋ ಸಾಸ್, ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ನಂತರ ಕರಿದಿಟ್ಟುಕೊಂಡ ಚಿಕನ್, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಹಾಕಿದರೆ ಸೋಯಾ ಚಿಕನ್ ರೆಡಿ.