ಸೋಮೇಶ್ವರ ಸೋಮನಾಥ ದೇವಸ್ಥಾನ ದ ರಾಜಗೋಪುರ

ಉಳ್ಳಾಲದ ಸೋಮೇಶ್ವರ ಸೋಮನಾಥ ದೇವಸ್ಥಾನ ದ ರಾಜಗೋಪುರದ ಮುಂಭಾಗಕ್ಕೆ ೧೫ ಲಕ್ಷ ರೂ. ವೆಚ್ಚದಲ್ಲಿ ಅಳವಡಿಸ ಲಾದ ಇಂಟರ್ ಲಾಕ್ ಹಾಗೂ ಮೆಟ್ಟಿಲುಗಳನ್ನು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಡ್ವಕೇಟ್ ರವೀಂದ್ರನಾಥ ರೈ, ಸಮಿತಿ ಸದಸ್ಯರಾದ ಜನಾರ್ದನ ಹೊಳ್ಳ, ರಾಮದಾಸ್, ಜಗದೀಶ್ ಉಚ್ಚಿಲ್, ಅಚ್ಯುತ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.