ಸೋಮಸಮುದ್ರ ಗ್ರಾಮದಲ್ಲಿ ಅಧಿಕಾರಿಗಳ ಗ್ರಾಮವಾಸ್ತವ್ಯ ಮದಿರೆ ಗ್ರಾಮವನ್ನು ಕಂದಾಯಗ್ರಾಮವನ್ನಾಗಿ ಮಾಡಲು ಗ್ರಾಮಸ್ಥರ ಒತ್ತಾಯ

ಕುರುಗೋಡು. ಮಾ.20 ಸಾರ್ವಜನಿಕರ ಕುಂದುಕೊರತೆಗಳ ಸಮಸ್ಯೆಗಳಿಗೆ ಗ್ರಾಮವಾಸ್ತವ್ಯ ಸಹಕಾರಿಯಾಗಿದೆ ಎಂದು ಕುರುಗೋಡು ತಹಶೀಲ್ದಾರ್ ರಾಘವೇಂದ್ರರಾವ್ ಹೇಳಿದರು.
ಅವರು ಶನಿವಾರ ಕುರುಗೋಡು ಸಮೀಪದ ಸೋಮಸಮುದ್ರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯಕಡೆ ಸಾರ್ವಜನಿಕರ ಅಹವಾಲುಸ್ವೀಕಾರ ಮತ್ತು ಪರಿಹಾರ ಸಭೆಯ ಅದ್ಯಕ್ಷತೆ ವಹಿಸ ಮಾತನಾಡಿದರು. ಸಭೆಯಲ್ಲಿ ಸಾರ್ವಜನಿಕರಿಂದ 93 ಅರ್ಜಿಸಲ್ಲಿಕೆಯಾಗಿದ್ದು, ಸಂಬಂದಪಟ್ಟ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಜನರ ಸಮಸ್ಯೆಗೆ ಪರಿಹಾರನೀಡುವುದಾಗಿ ಭರವಸೆ ನೀಡಿದರು.
ಕೆಲವಯೋವ್ರುದ್ದರಿಗೆ ಸ್ಥಳದಲ್ಲೇ ಮಾಶಾಸನದ ಆದೇಶಪತ್ರ ವಿತರಿಸಿದರು.
ಗ್ರಾಮದಲ್ಲಿ ಬಹುದಿನಗಳಬೆಡಿಕೆಯಾಗಿದ್ದ ಮುಖ್ಯರಸ್ತೆಯನ್ನು ಸುಗಮಸಂಚಾರಕ್ಕಾಗಿ ರಸ್ತೆಅಗಲೀಕರಣಗೊಳಿಸಬೇಕೆಂದು ಮುಖಂಡ ಚಂದ್ರಶೇಖರ, ರಾಘವೇಂದ್ರ, ಮಂಜುನಾಥ, ಪಿ.ರಮೇಶ, ಕೆ.ಸಿದ್ದಲಿಂಗಪ್ಪ ಒತ್ತಾಯಿಸಿದರು. 5ಸಾವಿರ ಜನಸಂಖ್ಯೆಯನ್ನೊಳಗೊಂಡ ಮದಿರೆಗ್ರಾಮವನ್ನು ಕಂದಾಯಗ್ರಾಮವನ್ನಾಗಿ ಮಾಡಬೇಕು,ಜೊತೆಗೆ ಪ್ರಸ್ತುತ 3000 ಎಕರೆಆಯಕಟ್ಟು ಜಮೀನಿಗೆ ಕಾಲುವೆಯನೀರು ಸಣ್ಣಪ್ರಮಾಣದಲ್ಲಿ ಸಾಕಾಗುವುದಿಲ್ಲ, ರಾಜ್ಯಸರ್ಕಾರದ ಮಟ್ಟದಲ್ಲಿ ಹೆಚ್ಚಿಗೆ ಇಂಡೆಂಟ್‍ಹಾಕಿಸಿ ರೈತರಿಗೆ ನೀರಿನಸೌಲಭ್ಯಕಲ್ಪಿಸಬೇಕು, ಮತ್ತು ಮದಿರೆ ಹಳ್ಳದಲ್ಲಿ ತುಂಬಿದ ಹೂಳನ್ನು ತೆಗೆಯಬೇಕೆಂದು ಕುಮಾರಸ್ವಾಮಿ, ಕೆ.ಎಚ್ ರುದ್ರಪ್ಪ, ರಾಘವೇಂದ್ರ, ಕೆಂಚಮಾಳಪ್ಪ, ಇತರರು ಆಗ್ರಹಿಸಿದರು. ವೀರಾಂಜಿನೇಯಕ್ಯಾಂಪಿನ ನಿವಾಸಿಗಳಾದ ಕಟಿಗೆಮಾರೆಕ್ಕ ಕುಟುಂಬದ ಸದಸ್ಯರು ಗುಡಿಸಲು ಸುಟ್ಟುಹೋಗಿದೆ. ನಮಗೆ ವಾಸಮಾಡಲು ಮನೆಇಲ್ಲ. ಪಂಚಾಯಿತಿ ಕಡೆಯಿಂದ ನಿವೇಶನಕೊಡಿರಿ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಸೋಮಸಮುದ್ರ ಗ್ರಾ.ಪಂ. ಪಿಡಿಒ. ಮಹಮ್ಮದ್‍ಗೌಸ್ ಮಾತನಾಡಿ, ಮುಂದಿನದಿನಗಳಲ್ಲಿ ಸಾಮಾನ್ಯಸಭೆಯಲ್ಲಿ ಸದಸ್ಯರ ಒಪ್ಪಿಗೆಪಡೆದು ನಿವೇಶನ ನೀಡುವುದಾಗಿ ಭರವಸೆ ನೀಡಿದರು. ಆಸ್ಪತ್ರೆಗೆ ಹೋಗಲು ದಾರಿಸರಿಇಲ್ಲ, ಗ್ರಾಮದಸಾರ್ವಜನಿಕರ ಸ್ಥಳಗಳಲ್ಲಿ ಅಸ್ರುಸ್ಯತೆ ಹೆಚ್ಚಾಗಿದ್ದು ಹೋಟೆಲ್ ಗಳಲ್ಲಿ ಕುಡಿಯುವನೀರು, ಶೌಚಾಲಯ, ಪ್ರೌಢಶಾಲೆಗೆಅನುಮತಿ, ವಿದ್ಯಾರ್ಥಿಗಳಿಗೆ ಬಸ್‍ಸೌಕರ್ಯ, ಅಕ್ರಮಮದ್ಯಮಾರಾಟವನ್ನು ಕಡಿವಾಣಹಾಕಲು ಒತ್ತಾಯಿಸಿದರು. ಗ್ರಾ.ಪಂ.ಅದ್ಯಕ್ಷೆ ಲಕ್ಷಿ, ಉಪಾದ್ಯಕ್ಷ ಗಾದಿಲಿಂಗನಗೌಡ, ಗ್ರೇಡ್2ತಹಶೀಲ್ದಾರ್ ಮಲ್ಲೇಶಪ್ಪ ಗ್ರಾಮೀಣ ಕುಡಿಯುವನೀರು ನೈರ್ಮಲ್ಯ ಇಲಾಖೆಯ , ಇಇ ಸುರೇಂಧ್ರನಾಥ್, ಪಿಎಸ್‍ಐ.ಮೌನೇಶರಥೋಡ್,ತಾ.ಪಂ. ಅದ್ಯಕ್ಷೆ ತಾಯಮ್ಮ. ಶಿರಸ್ತೆದಾರ ಚೆನ್ನಪ್ಪ,ವಿಜಯಕುಮಾರ್, ಎಇಇ.ಸುರೇಂದ್ರರೆಡ್ಡಿ, ಸಹಾಯಕಅಭಿಯಂತರ ಗವಿಯಪ್ಪ, ಎಡಿ.ಪಾಲಾಕ್ಷಗೌಡ, ತಾ.ಪಂ.ಅನಿಲ್, ಬಿಇಒ.ವೆಂಕಟೇಶ,ಜೆಸ್ಕಾಂ ಅಶೋಕರೆಡ್ಡಿ,, ಮುಖಂಡ ಚಂದ್ರಶೇಖರ, ವಿಎ. ಶ್ರೀನಿವಾಸ್, ಎಸಿಡಿಪಿಒ.ರಾಜುನಾಯ್ಕ್, ಮೇಲ್ವಿಚಾರಕಿ ಗೀತಾಅಂಬೆಗರ್,ಸುಮಂಗಳಮ್ಮ,ನಾಗೂಬಾಯಿ ಸೇರಿದಂತೆ ವಿವಿದ ಇಲಾಖೆಯ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು. ಪ್ರಾರಂಭದಲ್ಲಿ ಸೋಮಸಮುದ್ರ ಗ್ರಾ.ಪಂ. ಪಿಡಿಒ.ಮಹಮ್ಮದ್‍ಗೌಸ್ ರವರು ಎಲ್ಲರನ್ನು ಸ್ವಾಗತಿಸಿ, ವಂದಿಸಿದರು.