ಸೋಮಸಮುದ್ರದ ರಸ್ತೆ ದುರಸ್ಥಿಗೆ ಮನವಿ.

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ತಾಲೂಕಿನ ಸೋಮ ಸಮುದ್ರ ಗ್ರಾಮದ ರಸ್ತೆ ದುರಸ್ಥಿಗೆ ಆಗ್ರಹಿಸಿ ಆರ್. ಕೆ.ಎಸ.  ಮತ್ತು ಎಐಡಿವೈಓ   ಸಂಘಟನೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ವೆಂಕಟರಮಣ ಅವರಿಗೆ
ಮನವಿ‌ ಮಾಡಿವೆ.
ಆರ್ ಕೆ ಎಸ್  ಸಂಘಟನೆಯ ಜಿಲ್ಲಾ ಅಧ್ಯಕ್ಷ ಎ  ದೇವದಾಸ್ ಈ ಸಂದರ್ಭದಲ್ಲಿ ಮಾತನಾಡಿ.   ಬಳ್ಳಾರಿ ಸಿರುಗುಪ್ಪ ಮುಖ್ಯ ರಸ್ತೆಯಿಂದ ಸೋಮಸಮುದ್ರ ಮೂಲಕ ಏರ್ರಂಗಳಿ ಗ್ರಾಮಕ್ಕೆ ಹೋಗುವ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯು ಸಿರುಗುಪ್ಪ ರಸ್ತೆಯಿಂದ ಊರಿನ ಮುಖಾಂತರ ಹಾದು ಹೋಗುವ ಎರಡು ಕಿಲೋಮೀಟರ್ ಮಾತ್ರ ಸಂಪೂರ್ಣ ಹದಗೆಟ್ಟು ಹೋಗಿದೆ.  ವಾಹನ ಸಂಚಾರಕ್ಜೆ ಸಂಚಾಕಾರ ತರುವಂತಾಗಿದೆ.  ಈಗಾಗಲೇ ಹತ್ತಾರು ಅಪಘಾತಗಳು ಸಂಭವಿಸಿ, ಊರಿನ ಅನೇಕ ಜನ ಗಾಯಗೊಂಡಿದ್ದಾರೆ. ಜನತೆ ದಿನನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ.  ಕೂಡಲೇ ರಸ್ತೆಯಲ್ಲಿ ಗರುಸು ಹಾಕಿ ವಾಹನಗಳ ಓಡಾಟಕ್ಜೆ ಅನುಕೂಲವಾಗಲು ತಾತ್ಕಾಲಿಕ ಕ್ರಮ ಮಾಡಬೇಕು ಹಾಗೂ ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರಕ್ಕೆ  ಸಿಸಿ ರಸ್ತೆ ನಿರ್ಮಿಸಬೇಕೆಂದು  ಆಗ್ರಹಿಸಿದರು .
ಈ ಸಂದರ್ಭದಲ್ಲಿ ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಜಗದೀಶ್ , ಆರ್ ಕೆ.ಎಸ್  ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ ಗ್ರಾಮಸ್ತರಾದ
 ಜಿ.  ಸಿದ್ದಲಿಂಗಪ್ಪ , ಎನ್ ರಮೇಶ್ ,   ಜಿ. ಈಶ್ವರ್ , ಗವಿಸಿದ್ದಪ್ಪ  ಮೊದಲಾದವರು ಇದ್ದರು.