ಸೋಮಶೇಖರ ರೆಡ್ಡಿ ವಿರುದ್ಧ ಕೆಆರ್‌ಪಿ ವಾಗ್ದಾಳಿ

ಬಳ್ಳಾರಿ,ಜೂ.೩- ಮಾಜಿ ಸಚಿವ ಜನಾರ್ದನರೆಡ್ಡಿ ಅವರ ಸಹೋದರ ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಟೀಕೆ ಮಾಡಿದ್ದರ ಬಗ್ಗೆ ಇಂದು ಕೆಆರ್‌ಪಿ ಪಕ್ಷದ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ರಾಜಶೇಖರಗೌಡ ಅವರು ನಗರದಲ್ಲಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ
ಮಾಜಿ ಶಾಸಕ ಸೋಮಶೇಖರ ರೆಡ್ಡಿ ಅವರು ನಮ್ಮ ಪಕ್ಷದ ನಾಯಕ ಜಬಾರ್ಧನ ರೆಡ್ಡಿ ಅವರು ಅಕ್ರಮ ಮಾಡಿದ್ದಾರೆ. ಸ್ವಾರ್ಥಿ, ತಾನು ಬೆಳೆಯಲು ಇತರರನ್ನು ಬಳಸಿಕೊಂಡರು ಮುಂತಾಗಿ ಟೀಕಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಅವರನ್ನು ಖರೀದಿ ಮಾಡಿ ಕರುಣಾಕರ ರೆಡ್ಡಿ ಅವರನ್ನು ಖರೀದಿ ಮಾಡಿ ಗೆಲಿಸಿಕೊಂಡಿತು ಎಂದು ಹೇಳಿದ್ದಾರೆ.
ಹಾಗದರೇ ಕರುಣಾಕರ ರೆಡ್ಡಿ ಗೆಲುವು ಅಕ್ರಮವೇ ಎಂದು ಪ್ರಶ್ನಿಸಿದರು. ಸೋಲಿನ ಹತಾಶೆಯಿಂದ ಏನೆಲ್ಲಾ ಮಾತನಾಡುತ್ತಿದ್ದಾರೆ ಎನಿಸುತ್ತದೆಂದರು.
ಅಕ್ರಮ ಮಾಡಿದ್ದಾರೆಂದು ಸೋಮಶೇಖರ ರೆಡ್ಡಿ ಅವರು ಹೇಳಿದ್ದಾರೆ. ಆದರೆ ಅವರೇ ಈ ಹಿಂದೆ ಜನಾರ್ದನರೆಡ್ಡಿ ಅವರ ಬಗ್ಗೆ ಏನು ಹೇಳುತ್ತಿದ್ದರು ಎಂಬುದರ ಬಗ್ಗೆ ತೆಲುಗಿನಲ್ಲಿ ನೀಡಿದ ಸಂದರ್ಶನದ ಭಾಗವನ್ನು ಪತ್ರಕರ್ತರಿಗೆ ಪ್ರದರ್ಶಿಸಿದರು. ಅದರಲ್ಲಿ ಸೋಮಶೇಖರ ರೆಡ್ಡಿ ಅವರು ” ಜನಾರ್ಧನರೆಡ್ಡಿ ಲ್ಯಾಕ ಪೋತೆ ಶ್ರೀರಾಮುಲು ಚೇರಿ ಅಂದರಿನಿ ಪೆಂಚಾರು ಅದೇ ವಿದಂಗ
ತಮ್ಮಡು ನೆನ್ನನ್ನೀ ರಾಜಕೀಯಂಗ ಪೆದ್ದಗ ಪೆಂಚಾಡು. ಕುಟುಂಬಲೋ ಇಲಾ ಒಕರು ಉಂಟಾರು ಎಂದಿರುವ ಬಗ್ಗೆ ಪ್ರದರ್ಶಿಸಿದರು.
ಅಷ್ಟೇ ಅಲ್ಲದೆ ಜನಾರ್ದನರೆಡ್ಡಿ ಅವರಿಂದ ಪಕ್ಷಗೆ ಸಹಕಾರ ಆಗಿದೆ ಎಂದು ಬಿಜೆಪಿಯ ಈಶ್ವರಪ್ಪ, ಯಡಿಯೂರಪ್ಪ ಹೇಳಿದ್ದ ಮಾತುಗಳನ್ನು ಪ್ರದರ್ಶಿಸಿದರು.

ಸೋಲಿನ ಹತಾಶೆಯಿಂದ ಏನೆಲ್ಲ ಮಾತಮಾಡುವುದು ಸರಿಯಲ್ಲ. ನಾನು ಸೋತಿದ್ದೆ ನನಗ್ಯಾರು ನೀವು ಬಂದು ಧೈರ್ಯತುಂಬಲಿಲ್ಲ.
ಪಾಲಿಕೆ ಚುನಾವಣೆಯಲ್ಲಿ ಸ್ವತಃ ನಿಮ್ಮ ಮಗನನ್ನು ಗೆಲಿಸಿಕೊಳ್ಳಲಾಗಿಲ್ಲ. ಹೀಗಿರುವಾಗ ನೀವು ನಮ್ಮಪಕ್ಷದ ನಾಯಕರ ಬಗ್ಗೆ ಟೀಕೆ ಸರಿಯಲ್ಲ. ನಮ್ಮ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಸೋತಿದ್ದಾರೆ. ಅವರೇನು ಹತಾಸೆಯಾಗಿ ಮಾತನಾಡಿಲ್ಲ ಎಂದರು. ಮುಂದಿನ ಚುನಾವಣೆಗೂ ಲಕ್ಷ್ಮೀ ಅರುಣಾ ಅವರನ್ನೇ ನಮ್ಮ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಂದಿನಿಂದಲೇ ಸಂಘಟನೆ, ಹೋರಾಟ ಮಾಡಲಿದೆ. ನೀವು ಮಾಡಿ. ಅದು ಬಿಟ್ಟು ಪಕ್ಷದ ಮುಖಂಡರ ಮೇಲೆ ಆಧಾರ ರಹಿತ ಟೀಕೆ ಬೇಡ ಎಂದರು.