ಸೋಮಶೇಖರ ರೆಡ್ಡಿ ಪ್ರಚಾರ ಹಿಂದಕ್ಕೆ ಹಾಕಿಪತಿ ರೆಡ್ಡಿ ಪರ ಪ್ರಚಾರ ಆರಂಭಿಸಿದ ವಿಜಯಮ್ಮ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.12: ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಲಿ ಸೋಮಶೇಖರ ರೆಡ್ಡಿ ಪರ ಅವರ ಪತ್ನಿ ವಿಜಯಮ್ಮ ಅವರು ಇಂದು ನಗರದ 36, ನೇ ವಾರ್ಡ್ ನ  ಮತಗಟ್ಟೆ 5ರ ಹವಾಂಬಾವಿ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಮಹಿಳೆಯರಿಗೆ ಅರಿಷಿಣ ಮತ್ತು ಕುಂಕುಮ ಹಚ್ಚಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
ಕೆಲವು ಕಡೆ ತಮ್ಮ ಮನೆಗೆ ಬಂದ ಶಾಸಕರ ಪತ್ನಿಯನ್ನು ಆತ್ಮೀಯವಾಗಿ ಬರಮಾಡಿಕೊಂಡ ಜನತೆ. ನಿಮ್ಮಿಂದಾಗಿ ಈ ಭಾಗದ ವಿಶೇಷ ಅಭಿವೃದ್ಧಿಯಾಗಿದೆ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಿರುವುದರಿಂದ ಬಿಜೆಪಿಗೆ ಮತ ನೀಡುವುದಾಗಿ ಭರವಸೆ ನೀಡಿದ್ದು ಕಂಡು ಬಂತು.
ವಿಜಯಮ್ಮ ಜೊತೆ ಪುತ್ರ ಶ್ರವಣಕುಮಾರ್  ರೆಡ್ಡಿ, ಸ್ಥಳೀಯ ಮುಖಂಡ  ನಾರಾಯಣ ಕಾರ್ಯಕರ್ತರು, ಪಕ್ಷದ ಬೆಂಬಲಿಗರು ಇನ್ನಿತರರು  ಭಾಗಿಯಾಗಿದ್ದರು.