(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.22: ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ ಪರವಾಗಿ ಇಂದು ಅವರ ಪತ್ನಿ ,ವಿಜಯಮ್ಮ ಅವರು ನಗರದ 20ನೇ ವಾರ್ಡ್ ಪಟೇಲ್ ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಮತದಾರರಿಗೆ ತಿಳಿಸಿ ಬಿಜೆಪಿ ಪಕ್ಷಕ್ಕೆ ಮತ ನೀಡಲು ಕೋರಿದರು.
ಮನೆಗೆಗಳಿಗೆ ಹೋಗಿ ಮಹಿಳೆಯರಿಗೆ ಕುಂಕಮ ನೀಡಿ ಮತ ಕೇಳಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ರೇಣುಕಾ ಕಿಟ್ಟು, ಶಿವು, ಮೇಘನಾಥ್, ಕೇದಾರ್ನಾಥ್, ದರ್ಶನ್, ಕರೂರು ಸುಧಾಕರ್ ರೆಡ್ಡಿ, ಸುರೇಶ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಕುಮಾರಿ ಸುಗುಣ, ಪುಷ್ಪ ,ವಾರ್ಡಿನ ಪ್ರಮುಖ ಮುಖಂಡರು ಕಾರ್ಯಕರ್ತರು ಇದ್ದರು.