(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.25: ನಗರದ ಹಿರಿಯ ನ್ಯಾಯವಾದಿ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಅಧ್ಯಕ್ಷ, ಹಿರಿಯ ರಾಜಕಾರಣಿ, ವಿಧಾನ ಪರಿಷತ್ ಮಾಜಿ ಸದಸ್ಯ ಶಿಕ್ಷಣ ಪ್ರೇಮಿ ಎನ್. ತಿಪ್ಪಣ್ಣ ಅವರ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ಜಿ.ಸೋಮಶೇಖರ್ ರೆಡ್ಡಿ ಅವರು ಪಕ್ಷದ ಮುಖಂಡ ಎಸ್ ಮಲ್ಲನಗೌಡ ಆವರೊಂದಿಗೆ ಭೇಟಿ ಮಾಡಿ ಆಶಿರ್ವಾದ ಪಡೆದರು.
ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ನಿಮ್ಮಂತಹ ನಾಯಕರು ಗೆಲಿಯಬೇಕು ಎಂದ ತಿಪ್ಪಣ್ಣನವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ವೀರಶೈವ ಸಮುದಾಯಕ್ಕೆ ಸಾಕಷ್ಟು ಸಹಕಾರ ಆಗಿದ್ದನ್ನು ಸ್ಮರಿಸಿ ಸಮುದಾಯದ ಬೆಂಬಲ ಇರುತ್ತದೆಂದು ಸೂಚ್ಯವಾಗಿ ಹೇಳಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಮೋತ್ಕರ, ವೀರಶೇಖರ ರೆಡ್ಡಿ ಮೊದಲಾದವರು ಇದ್ದರು.