ಸೋಮಶೆಟ್ಟಿಹಳ್ಳಿ-ಸಿದ್ದಾಪುರ ಗ್ರಾಮಸ್ಥರೊಂದಿಗೆ ಬಾಗಿನ  ಅರ್ಪಣೆ

*ಚನ್ನಗಿರ : ಏಷ್ಯಾದ ಎರಡನೇ ದೊಡ್ಡ ಕೆರೆ ಶಾಂತಿ ಸಾಗರ (ಸೂಳೆಕೆರೆ) ದಲ್ಲಿ ಬಾಗಿನ ಅರ್ಪಣೆ ಮಾಡಲಾಯಿತು. ಸೋಮಶೆಟ್ಟಿಹಳ್ಳಿ ಹಾಗೂ ಸಿದ್ದಾಪುರ ಅವಳಿ ಗ್ರಾಮಸ್ಥರೊಂದಿಗೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಂಗಾ ಅವರು ಕುಟುಂಬ ಸಮೇತ ಬಾಗಿನ ಸಮರ್ಪಿಸಿದರು. ಈ ಭಾಗದ ಜನರು, ಹಾಗೂ ರೈತರ ಜೀವನಾಡಿಯಾದ ಶಾಂತಿಸಾಗರ ಭರ್ತಿಯಾಗಿ ಕೋಡಿಬಿದ್ದ ಕಾರಣ ಕ್ಷೇತ್ರದ ರೈತರಿಗೆ ಒಳ್ಳೆಯದಾಗಲಿ ಎಂದು ಬಾಗಿನ ಅರ್ಪಿಸಲಾಯಿತು. ಸೋಮಶೆಟ್ಟಿಹಳ್ಳಿ ಹಾಗೂ ಸಿದ್ಧಾಪುರ ಅವಳಿ ಗ್ರಾಮಸ್ಥರ ಸಹಯೋಗದೊಂದಿಗೆ ಶಾಂತಿಸಾಗರಕ್ಕೆ ತೆರಳಿ ಬಾಗಿನ ಅರ್ಪಿಸಿದರು. ಈ ವೇಳೆ ಮಾತನಾಡಿದ ಅವರು ಈ ಬಾರಿ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿದ್ದು ಕೆರೆ, ಕಟ್ಟೆಗಳು ಮತ್ತು ಹಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ಅದರಂತೆ ಏಷ್ಯಾದ ಎರಡನೇ ದೊಡ್ಡ ಕೆರೆಯಾದ ಶಾಂತಿ ಸಾಗರ ಕೂಡ ಭರ್ತಿಯಾಗಿ ಕೋಡಿ ಬಿದ್ದು ಹರಿದಿದೆ. ಕೆರೆ ಭರ್ತಿಯಾಗಿರುವುದು ನಮಗೆಲ್ಲಾ ಸಂತೋಷದ ವಿಚಾರವೇ ಏಕೆಂದರೆ ನಾವೆಲ್ಲಾ ರೈತರ ಮಕ್ಕಳಾದ ಹಿನ್ನೆಲೆ ನಮಗೆ ಮಳೆಯೇ ಆಶ್ರಯ ಉತ್ತಮ ಮಳೆಯಾದ ಹಿನ್ನೆಲೆ ಕೆರೆ ಭರ್ತಿಯಾಗಿದೆ ಐತಿಹಾಸಿಕ ಕೆರೆ ತುಂಬಿರುವುದು ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಅಷ್ಟೇಅಲ್ಲಾ ಚಿತ್ರದುರ್ಗ ಸೇರಿದಂತೆ ನಮ್ಮ ಜಿಲ್ಲೆಯ ಹಲವೆಡೆ ಇದೇ ನೀರು ಕುಡಿಯಲು ಸರಬರಾಜು ಆಗುತ್ತಿದೆ. ಹೀಗಾಗಿ ಶಾಂತಿಸಾಗರ ಭರ್ತಿಯಾಗಿರುವುದು ಎರಡು ಜಿಲ್ಲೆಯ ರೈತರು ಹಾಗೂ ಜನರಿಗೆ ಒಳ್ಳೆಯದಾಗಿದೆ ಎಂದರು. ಇನ್ನೂ ಈ ಕೆರೆಯನ್ನೇ ನಂಬಿ ನೂರಾರು ರೈತರು ನೀರಾವರಿ ಮಾಡುತ್ತಿದ್ದ ಆ ರೈತರಿಗೆಲ್ಲಾ ಒಳ್ಳೆಯದಾಗಿದೆ ಎಂದು ಬಸವರಾಜು ವಿ ಶಿವಗಂಗಾ ತಿಳಿಸಿದರು. ಈ ನಾಡಿನ ರೈತರು ಚೆನ್ನಾಗಿರಬೇಕೆಂದರೆ ಉತ್ತಮ ಮಳೆಯಾಗಬೇಕು ಕೆರೆಗಳು ಭರ್ತಿಯಾಗಬೇಕು ಆಗ ಮಾತ್ರ ರೈತರಿಗೆ ನೆಮ್ಮದಿ ಸಿಗುತ್ತದೆ. ಈ ಕೆರೆ ಭರ್ತಿಯಾಗಿರುವುದು ಸಹ ಸಾಕಷ್ಟು ರೈತರಿಗೆ ಅನುಕೂಲವಾಗಲಿದೆ ಎಂದರು. ಭಗವಂತ ಚನ್ನಗಿರಿ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲಾ ರೈತರಿಗೂ ಒಳ್ಳೆಯದನ್ನ ಮಾಡಲಿ ಎಂದು ಪ್ರಾರ್ಥಿಸಿ ಬಾಗಿನ ಅರ್ಪಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ  ಸೋಮಶೆಟ್ಟಿಹಳ್ಳಿಯ ಗ್ರಾಮ ಪಂಚಾಯ್ತಿ ಸದಸ್ಯರಾದ ರೇವಣ ದಂಪತಿ ಹಾಗೂ ಮಲ್ಲಿಕಾರ್ಜುನ್, ಪ್ರವೀಣ್ , ಹಾಲೇಶ್, ಸಿದ್ದಪ್ಪ, ಭರತ್ , ಶಂಕ್ರಪ್ಪ, ಕಾರ್ತಿಕ್, ಸಿದ್ದಾಪುರ ಬಾಬು ಸೇರಿದಂತೆ ಗ್ರಾಮದ ಮುಖಂಡರು, ರೈತರು ಉಪಸ್ಥಿತರಿದ್ದರು.