ಸೋಮಲಿಂಗದಳ್ಳಿ: ಮನೆಕುಸಿತ ಮಹಿಳೆಗೆ ಗಾಯ

ಚಿಂಚೋಳಿ,ಜೂ.6- ತಾಲೂಕಿನ ಸೋಮಲಿಂಗದಲ್ಲಿ ಗ್ರಾಮದಲ್ಲಿ ಬಿದ್ದ ಅಕಾಲಿಕ ಗಾಳಿ, ಮಳೆಯಿಂದ ಮನೆ ಕುಸಿದು ಬಿದ್ದಿದ್ದು, ಈ ಅವಘಡದಲ್ಲಿ ಬಡ ಮಹಿಳೆ ಪ್ರಾಣಾ ಅಪಾಯದಿಂದ ಪಾರಾದ ಘಟನೆ ಜರುಗಿದೆ.
ಚಿಂಚೋಳಿ ತಾಲೂಕಿನ ಸೋಮಲಿಂಗದಲ್ಲಿ ಗ್ರಾಮದಲ್ಲಿ ರವಿವಾರ ತಡರಾತ್ರಿ ಅಕಾಲಿಕ ಮಳೆಯಿಂದ ಪುಶ್ಯಮ್ಮ ಗಂಡ ರಾಮುಲು ಅವರ ಮನೆ ಕುಸಿದು ಮಹಿಳೆ ಮಲಗಿದ್ದ ಕೊಳೆಯ ಮೆಲ್ಚಹವಾಣಿ ಬಿದ್ದು ಮಹಿಳೆಗೆ ಗಂಭೀರ ಗಾಯಗೊಂಡಿದ್ದು, ಮಹಿಳೆಯನ್ನು ಚಿಂಚೋಳಿಯ ಸಾರ್ವಜನಿಕ ಆಸ್ಪತೆಗೆ ದಾಖಲು ಮಾಡಲಾಗಿದೆ.
ಕಂದಾಯ ಇಲಾಖೆ ವತಿಯಿಂದ ಮನೆಯ ಪರಿಶೀಲನೆ ಮಾಡಲಾಗಿದೆ. ಗ್ರಾಮಸ್ತರು ಬಡ ಮಹಿಳೆಗೆ ಸರಕಾರದ ವತಿಯಿಂದ ನಷ್ಟ ಪರಿಹಾರ ಕೊಡಬೇಕೆಂದು ಸೋಮಲಿಂಗದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವೀರಭದ್ರಪ್ಪ ರಾಯಪಳ್ಳಿ, ಸರ್ಕಾರಕ್ಕೆ ಅಗ್ರಿದ್ದಾರೆ