ಸೋಮಲಾಪುರ: ಬಾಲಕರ ಖೋ-ಖೋ ವಿಭಾಗ ಮಟ್ಟಕ್ಕೆ ಆಯ್ಕೆ


ಸಂಜೆವಾಣಿ ವಾರ್ತೆ
ಕುರುಗೋಡು:ಸೆ.28: ತಾಲೂಕು ಸಮೀಪದ ಸೋಮಲಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಬಾಲಕರ ವಿಭಾಗ ಜಿಲ್ಲಾ ಮಟ್ಟದ  ಬಾಲಕರ ಖೋ-ಖೋ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಕಲ್ಬುರ್ಗಿ ವಿಭಾಗ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕರು ಮಾತನಾಡಿ,  ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ ಯಾದ ಕ್ರೀಡಾ ಚಟು ವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಿ.
ಬದಲಾದ ಸನ್ನಿವೇಶದಲ್ಲಿ ಕ್ರೀಡೆಗೆ ಪಠ್ಯದಷ್ಟೇ ಮಹತ್ವ ನೀಡಲಾಗುತ್ತಿದೆ. ಆದ್ದರಿಂದ ಕ್ರೀಡೆ ಮನರಂಜನೆ ಎಂದು ಭಾವಿಸದೆ ಎಲ್ಲರೂ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು. ಪ್ರತಿ ವಿದ್ಯಾರ್ಥಿ ಯಲ್ಲೂ ತನ್ನದೇ ಆದ ಕ್ರೀಡಾ ಪ್ರತಿಭೆ ಇರುತ್ತದೆ. ದೈಹಿಕ ಶಿಕ್ಷಣ ಶಿಕ್ಷಕರು ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಜತೆಗೆ, ಅಗತ್ಯ ಸಲಹೆ, ಮಾರ್ಗದರ್ಶ ನೀಡಿದರೆ ಗ್ರಾಮೀಣ ಕ್ರೀಡಾ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡ ಬಲ್ಲರು ಎಂದರು.
ಶಾಲಾ ಕ್ರೀಡಾಪಟುಗಳಿಗೆ ಧನ್ಯವಾದ:
ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು,  ತಂಡದ ಮ್ಯಾನೇಜರ್ ಜಡೆಪ್ಪ.ಎ ,ದೈಹಿಕ ಶಿಕ್ಷಕರಾದ ಚಂದ್ರಪ್ಪ.ವಿ , ಹನುಮಂತಪ್ಪ.ಹೆಚ್, ಮಂಜುನಾಥ್.ಎಂ, ಗ್ರಾಮದ ಮುಖಂಡರು, ಯುವಕರು ಸೇರಿ ಶಾಲೆಯ ಕ್ರೀಡಾಪಟು ವಿದ್ಯಾರ್ಥಿಗಳಿಗೆ ಶುಭ ಕೋರಿ ಧನ್ಯವಾದಗಳು ತಿಳಿಸಿದ್ದಾರೆ.
ಟೀ ಶರ್ಟ್ ವಿತರಣೆ :
ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರಾಘವೇಂದ್ರ.ವಿ, ಸದಸ್ಯರು ಸೇರಿ ವಿಭಾಗ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಾದ ಉಡೆದ್ ಬ್ರದರ್ಸ್ ವಿದ್ಯಾರ್ಥಿಗಳಿಗೆ ಟೀ ಶರ್ಟ್ ಗಳು ವಿತರಿಸಿದರು.