ಸೋಮಯ್ಯ ಸ್ವಾಮಿ ಪಟ್ಟಿಕಂತಿ ಹಿರೇಮಠ ನಿಧನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.23: ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಗೆಜ್ಜಲಗಟ್ಟ ಗ್ರಾಮದ, ಕೃಷಿಕರೂ, ಜ್ಯೋತಿಷಿಗಳೂ ಆಗಿದ್ದ. ವೇದಮೂರ್ತಿ  ಸೋಮಯ್ಯ ಸ್ವಾಮಿ ಪಟ್ಟಿಕಂತಿ ಹಿರೇಮಠ (85) ಇವರು ಇಂದು ನಗರದ ತಮ್ಮ ಪುತ್ರನ ನಿವಾಸದಲ್ಲಿ ಬೆಳಿಗ್ಗೆ 11.30 ಕ್ಕೆ  ದೈವಾಧೀನರಾಗಿದ್ದಾರೆ.
ಮೃತರು  ಪುತ್ರರಾದ ಬಿಐಟಿಎಂ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮರೇಶಯ್ಯ ಹಿರೇಮಠ, ರಾಯಚೂರಿನಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮ್ಯಾನೇಜರ್, ಮಹದೇವಯ್ಯ, ಶರಣಯ್ಯ, ಮಂಜುನಾಥ ಸೇತಿದಂತೆ, ಓರ್ವ ಪುತ್ರಿ,  ಸೊಸೆಯಂದಿರರು, ಅಳಿಯ‌ ಹಾಗೂ ಮೊಮ್ಮಕ್ಕಳು, -ಅಪಾರ ಸಂಖ್ಯೆಯ ಶಿಷ್ಯ ವರ್ಗ, ಭಕ್ತರು , ಬಂದು ವರ್ಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಅವರ ಸ್ವಗ್ರಾಮ ರಾಯಚೂರು ಜಿಲ್ಲೆಯ ‌ಲಿಂಗಸೂಗೂರು ತಾಲೂಕಿನ ಗೆಜ್ಜಲಗಟ್ಟ ಗ್ರಾಮದ ಹೊಲದಲ್ಲಿ ವೀರಶೈವ ವಿಧಿ ವಿಧಾನಗಳಂತೆ  ನಾಳೆ ಶನಿವಾರ ಮಧ್ಯಾಹ್ನ 12 ಗಂಟೆಗೆನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಸಂತಾಪ:
ಸೋಮಯ್ಯ ಸ್ವಾಮಿ ಅವರ ನಿಧನಕ್ಕೆ ಬಿಐಟಿಎಂ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥ ಡಾ. ಯಶವಂತ ಭೂಪಾಲ್, ಡಾ. ವೆಂಕಟ್ ಮಹಿಪಾಲ್,‌‌ಅಶೋಕ್ ಭೂಪಾಲ್,‌ ಲಿಂಗರಾಜ ಭೂಪಾಲ್ ಹಾಗೂ ಸಿಬ್ಬಂದಿಯು ಸಂತಾಪ ವ್ಯಕ್ತಪಡಿಸಿದ್ದಾರೆ.

One attachment • Scanned by Gmail