ಸೋಮನಿಂಗದಳ್ಳಿ ಕೆಮಿಕಲ್ ಘಟಕ ಮುಚ್ಚಲು ಯಾಕಾಪೂರ ಆಗ್ರಹ

ಚಿಂಚೋಳಿ,ಮಾ.25- ತಾಲೂಕಿನ ಸೋಮನಿಂಗದಳ್ಳಿ ಗ್ರಾಮದ ಹೊರ ವಲಯದಲ್ಲಿ ಪರಿಸರ ಹಾನಿಕರವಾಗಿರುವ ವಿಷಕಾರಿ ಕೆಮಿಕಲ್ ಉತ್ಪಾದನಾ ಘಟಕ ತೆರೆದಿರುವುದರಿಂದ ಇಲ್ಲಿಂದ ಹೊರಸೋಸುವ ದುರ್ವಾಸನೆಯಿಂದಾಗಿ ಗ್ರಾಮಸ್ಥರು ತೀವ್ರ ಆತಂಕ ಮತ್ತು ಭಯಭಿತಿಯಲ್ಲಿದ್ದಾರೆ ಎಂದು ಜೆಡಿಎಸ್ ಮುಖಂಡ ಸಂಜೀವನ ಯಾಕಾಪೂರ ಅವರು ದೂರಿದ್ದಾರೆ.
ಇಲ್ಲಿನ ವಿಷಕಾರಿ ಕೆಮಿಕಲ್ ದಿಂದ ಗರ್ಭಿಣಿಯರಿಗೆ ಚಿಕ್ಕ ಮಕ್ಕಳಿಗೆ ವೃದರ ಪ್ರಾಣಿಪಕ್ಷಿಗಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಭಿರುತ್ತಿದೆ ಎಂದು ತಹಶಿಲ್ದಾರರಿಗೆ ಅವರು ಮನವರಿಕೆ ಮಾಡಿಕೊಟ್ಟರು.
ಕೂಲಿ ಕಾರ್ಮಿಕರು ಗಣಿಗಳಲ್ಲಿ ದುಡಿದು ಜೀವನ ಸಾದಿಸುತ್ತಿದ್ದರು ಆದರೆ ವನ್ಯಜೀವಿಧಾಮಕ್ಕಾಗಿ ಗಣಿಗಳು ಬಂದ್ ಮಾಡಿದ್ದೀರಿ ಆದರೆ ವಿಷಕಾರಿವಾದ ಕೆಮಿಕಲ್ ದುರ್ವಾಸನೆ ಜನರಿಗೆ ಮತ್ತು ಪ್ರಾಣಿಪಕ್ಷಿಗಳ ಜೀವಕ್ಕೆ ಹಾನಿಯಿರುವ ಕೆಮಿಕಲ್ ಉತ್ವಾದನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದು ಯಾವ ನ್ಯಾಯಾ ಎಂದು ಅವರು ತಹಸೀಲ್ದಾರನ್ನು ಪ್ರಶ್ನಿಸಿದರು.
ತಾಲೂಕಿನ ಸೋಮನಿಂಗದಳ್ಳಿ ಗ್ರಾಮದಲ್ಲಿ ಜೀವಕಳೆದುಕೊಂಡ ಜಾನುವಾರುಗಳಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸೋಮನಿಂಗದಳ್ಳಿ ಗ್ರಾಮಕ್ಕೆ ನಾನು ಸ್ವತಃ ತಾವೂ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದೇನೆ. ರಾಸಾಯನಿಕ ಘಟಕದ ಸ್ಥಳದಿಂದಲೇ ದೂರವಾಣಿ ಮೂಲಕ ಕರೆ ಮಾಡಿ ಸಂಬಂಧಿಸಿದವರಿಗೆ ಹಾಗೂ ಅಧಿಕಾರಿಗಳಿಗೆ ಮಾತನಾಡಿದ್ದೇನೆ ಆದರೇ ಅವರಿಂದ ಸಮಸ್ಯೆ ಪರಿಹಾರದ ಬದಲಿಗೆ ದರ್ಪದಿಂದ ಮಾತನಾಡುತ್ತಿದ್ದಾರೆ ಎಂದು ಪತ್ರಕರ್ತರಿಗೆ ಈ ವಿಷಯ ಹೇಳಿದರು.
ಕೆಮಿಕಲ್ ಉತ್ವಾದನೆ ಘಟಕ ತೆರೆಯುವಲ್ಲಿ ಸ್ಥಳೀಯ ಶಾಸಕ ಡಾ.ಅವಿನಾಶ ಜಾಧವ ಮತ್ತು ತಹಸೀಲ್ದಾರ್ ಅವರ ಕೈವಾಡವಿದೆ ಎಂದು ಗಂಭೀರ ಅವರು ಆರೋಪಿಸಿದರು.
ಇಲ್ಲಿನ ವಿಷಕಾರಿ ಕೆಮಿಕಲ್ ಘಟಕ ಬಂದ್ ಮಾಡಿದರೆ ಸರಿ ಇಲ್ಲಾದಿದ್ದರೆ ತಹಸೀಲ್ದಾರ್ ಕಛೇರಿಗೆ ಮತ್ತು ಶಾಸಕರ ಮನೆಗೆ ಗ್ರಾಮಸ್ಥರು ಮತ್ತು ಜೆಡಿಎಸ್ ಪಕ್ಷದಿಂದ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ. ಪುರಸಭೆ ಸದಸ್ಯರಾದ ನಾಗೇಂದ್ರಪ್ಪಾ ಗುರಂಪಳ್ಳಿ. ಬಸವರಾಜ ಸಿರಸಿ. ಮಲ್ಲಣಗೌಡ ಪಾಟೀಲ. ಚಂದ್ರಕಾಂತ ಸಾಸರಗಾಂವ. ಸಿದ್ದು ಬಬುಲಿ.ಬೀಮರೆಡ್ಡಿ. ಪ್ರಭುಲಿಂಗ ಸೋಮನಿಂಗದಳ್ಳಿ. ಅಪ್ಪಾಣ್ಣಾ ಲೋಡನೂರ. ಮತ್ತು ಸೋಮನಿಂಗದಳ್ಳಿ ಗ್ರಾಮದ ಅನೇಕ ಮಹಿಳೆಯರು ಇದ್ದರು.