ಸೋಮನಾಥ ನಿಧನ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 05 :  ಕನ್ನಡ ವಿಶ್ವವಿದ್ಯಾಲಯದ ನೌಕರ, ಕುಡತಿನಿಯ ಹಾಲೆಡೆ ಮಠದ ಸೋಮನಾಥ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ,
ಮೃತರ ಇಚ್ಛೆಯಂತೆ ವೈದ್ಯಕೀಯ ಅಧ್ಯಯನಕ್ಕಾಗಿ ಪಾರ್ಥಿವ ಶರೀರವನ್ನು ಬೆಂಗಳೂರಿನ ಬಿಜೆಎಸ್ ಆಸ್ಪತ್ರೆಗೆ ನೀಡಲಾಗಿದೆ.
ಮೃತರು ಪತ್ನಿ, ಮಗ, ಮಗಳು ಮತ್ತು ಸಹೋದರರನ್ನು ಹಾಗೂ ಅಪಾರ ಸಂಖ್ಯೆಯ ಬಂಧುವರ್ಗ, ಮಿತ್ರರನ್ನು ಅಗಲಿದ್ದಾರೆ.
ಸಚಿವ ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ಎನ್.ತಿಪ್ಪಣ್ಣ   ಅವರಿಗೆ ಆಪ್ತ ಸಹಾಯಕರಾಗಿ  ಕಾರ್ಯನಿರ್ವಹಿಸಿದ್ದರು.
ವಿವಿಯಲ್ಲಿ ಡಾ.ಮಲ್ಲಿಕಾ ಘಂಟಿ ಅವರು ಕುಲಪತಿಗಳಾಗಿದ್ದಾಗ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಸುಧೀರ್ಘ ಹೋರಾಟ ಮಾಡಿಕೊಂಡು  ಬಂದಿದ್ದರು.