ಸೋಮದೇವರ ಹಟ್ಟಿ ದುರ್ಗಾದೇವಿ ಆಶಿರ್ವಾದ ಪಡೆದ ಕೇಂದ್ರ ಸಚಿವ

ವಿಜಯಪುರ, ಜು.27-ಪ್ರಸಿದ್ಧ ಶ್ರೀ ಮಾತಾ ದುರ್ಗಾದೇವಿ ದೇವಸ್ಥಾನ ಸೋಮದೇವರ ಹಟ್ಟಿ ಎಲ್.ಟಿ. ತಾ| ತಿಕೋಟಾಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀಪಾದ ನಾಯಕ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು.
ಧರ್ಮದರ್ಶಿಗಳಾದ ಡಾ. ಜಗನು ಮಹಾರಾಜರು ಶ್ರೀಪಾದ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಿದರು. ಜೂನ್ 28 ರಂದು ನಡೆದ ದೇವಿಯ ವಾರ್ಷಿಕ ಜಾತ್ರೆಗೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದರು ಆದರೆ ಕಾರಣಾಂತರಗಳಿಂದ ಜಾತ್ರೆಗೆ ಬರುವುದಕ್ಕೆ ಆಗಲಿಲ್ಲ. ಇಂದು ಭೇಟಿ ನೀಡುತ್ತಿದ್ದೇನೆ ಹಾಗೂ ನಾನು ಪ್ರತಿವರ್ಷವೂ ಇಲ್ಲಿಗೆ ಆಗಮಿಸಿ ದೇವಿಯ ಆಶೀರ್ವಾದ ಪಡೆಯುತ್ತೇನೆ ಎಂದು ಹೇಳಿದರು.
ರಾಜಪಾಲ ಚವ್ಹಾಣ, ರಾಜು ಜಾಧವ, ಸಂತೋಷ ಚವ್ಹಾಣ, ಚಾಮಲು ರಾಠೋಡ ಹಾಗೂ ಬಂಜಾರಾ ಮುಖಂಡರು ತಾಂಡಾ ಗುರುಹಿರಿಯರು ಉಪಸ್ಥಿತರಿದ್ದರು.