ಸೋಮಣ್ಣ ಬೃಹತ್ ರೋಡ್ ಶೋ ಮತಯಾಚನೆ

ಚಾಮರಾಜನಗರ, ಮೇ.04:- ಜಿಲ್ಲೆಯಾಗಿ 27 ವರ್ಷಗಳು ಕಳೆದರು ಸಹ ಜಿಲ್ಲಾ ಕೇಂದ್ರದ ನಗರವಾಗಿ ಬೆಳೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಈ ಬಾರಿ ನಿಮ್ಮ ಒಂದು ಮತವನ್ನು ಬಿಜೆಪಿಗೆ ನೀಡಿ, ಐದು ವರ್ಷದಲ್ಲಿ ಮಾಧರಿ ಚಾ.ನಗರ ನಿರ್ಮಾಣ ಮಾಡುವೆ ಎಂದು ಬಿಜೆಪಿ ಅಭ್ಯರ್ಥಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು.
ನಗರದ 31 ವಾರ್ಡುಗಳಲ್ಲಿ ಪಕ್ಷದ ನಗರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಮುಖಂಡರೊಂದಿಗೆ ರೋಡ್ ಶೋ ಮೂಲಕ ಮತಯಾಚನೆ ಮಾಡಿದ ಅವರು, ಪ್ರಮುಖ ಸರ್ಕಲ್‍ಗಳನ್ನು ಮತದಾರದನ್ನುದ್ದೇಶಿಸಿ ಮಾತನಾಡಿದರು. ವಾರ್ಡುಗಳು ಹಾಗೂ ಬಡಾವಣೆಗಳಲ್ಲಿ ಸೋಮಣ್ಣ ಬರುತ್ತಿದ್ದಂತೆ ನಿವಾಸಿಗಳು ಭಾರಿ ಗಾತ್ರದ ಹಾರಗಳನ್ನು ಹಾಕಿ ಸಿಹಿ ತಿನ್ನಿಸಿದರು. ರೋಡ್ ಶೋಗಳಲ್ಲಿ ಭಾಗವಹಿಸಿ, ಬಿಜೆಪಿ ಪರ ಘೋಷಣೆ ಕೂಗಿದರು.
ನಗರದಲ್ಲಿ ಜಿಲ್ಲಾಸ್ಪತ್ರೆ ಉಳಿಸಿದೆ : ಜಿಲ್ಲಾ ವೈದ್ಯಕೀಯ ಕಾಲೇಜು ನಿರ್ಮಾಣದ ಬಳಿಕ ಜಿಲ್ಲಾಸ್ಪತ್ರೆಯನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗಿತ್ತು. ನನ್ನ ಗಮನಕ್ಕೆ ಬರುತ್ತಿದ್ದಂತೆ ಪಟ್ಟಣದ ನಾಗರೀಕರು 8 ಕಿ. ಮೀ. ದೂರದ ಯಡಪುರದಲ್ಲಿರುವ ವೈದ್ಯಕೀಯ ಕಾಲೇಜಿಗೆ ಹೋಗಬೇಕಾಗಿತ್ತು. ಅದರೆ, ಒಂದು ದಿನದಲ್ಲಿ ಜಿಲ್ಲಾಸ್ಪತ್ರೆಯನ್ನು ಸ್ಥಾಪನೆ ಮಾಡುವಲ್ಲಿ ಶ್ರಮ ವಹಿದ್ದೇನೆ. ಕಳೆದ 20 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಡಾ.ರಾಜ್‍ಕುಮಾರ್ ಕಲಾಮಂದಿರ ಕಾಮಗಾರಿಯನ್ನು ಪೂರ್ಣಗೊಳಿಸಿ, ಉದ್ಘಾಟನೆ ಮಾಡುವ ಮೂಲಕ ಕಲಾಸಕ್ತರಿಗೆ ಅರ್ಪಣೆ ಮಾಡುವ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಅಭಿವೃದ್ದಿಗೆ ನನ್ನದೇ ವಿಶೇಷ ಅಸಕ್ತಿ ವಹಿಸಿ ಕೆಲಸ ಮಾಡಿದ್ದೇನೆ. ವರಿಷ್ಟರು ಇದನ್ನೆಲ್ಲ ಗಮನಿಸಿ, ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚನೆಯಂತೆ ಇಲ್ಲಿಗೆ ಬಂದಿದ್ದೇನೆ. ಕಳೆದ 20 ದಿನಗಳಿಂದ ಕ್ಷೇತ್ರ ಸುತ್ತಿರುವ ನನಗೆ ಕ್ಷೇತ್ರದ ಸಂಪೂರ್ಣ ಪರಿಚಯವಾಗಿದೆ. ನಗರದ ಅಭಿವೃದ್ದಿಯನ್ನು ನೋಡಿದ್ದೇನೆ. ಈ ಎಲ್ಲಾ ಬದಲಾವಣೆಯನ್ನು ಮಾಡಲು ತಮ್ಮ ಒಂದು ಓಟಿಗೆ ಶಕ್ತಿ ಇದೆ. ಹೀಗಾಗಿ ಈ ಬಾರಿ ಒಂದು ಮತವನ್ನು ನೀಡಿ, ನಗರದ ಅಭಿವೃದ್ದಿಗಾಗಿ ಈ ಬಾರಿ ಬದಲಾವಣೆ ಮಾಡಿ, ಮೂರು ಬಾರಿ ಕಾಂಗ್ರೆಸ್‍ಗೆ ಮತ ನೀಡಿದ್ದೀರಿ, ಈ ಭಾರಿ ಬಿಜೆಪಿಗೆ ಹಾಕಿ ಎಂದು ಸೋಮಣ್ಣ ಮನವಿ ಮಾಡಿದರು.
ರೋಡ್ ಶೋನಲ್ಲಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಮುಖಂಡರಾದ ಕೂಡ್ಲೂರು ಹನುಮಂತಶೆಟ್ಟಿ, ನಗರ ಮಂಡಲದ ಅಧ್ಯಕ್ಷ ನಾಗರಾಜು, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಉಪಾಧ್ಯಕ್ಷೆ ಸುಧಾ, ಸದಸ್ಯರಾದ ಮಮತಾ ಬಾಲಸುಬ್ರಮಣ್ಯ, ಗಾಯಿತ್ರಿ ಚಂದ್ರಶೇಖರ್, ನಟರಾಜು, ಶಿವರಾಜು, ಎಪಿಎಂಸಿ ಅಧ್ಯಕ್ಷ ಮನೋಜ್‍ಪಟೇಲ್, ಸುದರ್ಶನಗೌಡ, ಮಂಟೇಸ್ವಾಮಿ, ಶ್ರೀನಿವಾಸಪ್ರಸಾದ್ ಮೊದಲಾದವರು ಇದ್ದರು.