(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ರಾಜ್ಯ ಬಿಜೆಪಿ ಅಧ್ಯಕ್ಷನಾಗಿ ನನ್ನ ಅವಧಿ ಮುಗಿದಿದೆ. ರಾಜ್ಯ ವಿಧಾನ ಸಭೆ ಚುನಾವಣೆ ಸೋಲಿನ ಫಲಿತಾಂಶದ ನೈತಿಕತೆಯಿಂದ ರಾಜೀನಾಮೆ ಸಲ್ಲಿಸಿರುವೆ, ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ನಡೆದಿದೆ. ಮಾಜಿ ಸಚಿವ ವಿ.
ಸೋಮಣ್ಣ ಅಧ್ಯಕ್ಷರಾಗಲು ಬಯಸಿದ್ದಾರೆ. ಕೇಂದ್ರ ನಾಯಕರು ಈ ಬಗ್ಗೆ ನಿರ್ಧಾರ ಮಾಡಲಿದ್ದಾರೆಂದು ನಳೀನ್ ಕುಮಾರ್ ಕಟೇಲ್ ಹೇಳಿದ್ದಾರೆ.
ಅವರಿಂದು ಬಳ್ಳಾರಿ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ನಾನು ಸೋಲಿನ ಹೊಣೆ ಹೊತ್ತು ಕೇಂದ್ರದ ನಾಯಕರಿಗೆ ತಿಳಿಸಬೇಕಾದ್ದನ್ನು ಪತ್ರ ಬರೆದು, ಮೌಖಿಕವಾಗಿಯೂ ತಿಳಿಸಿರುವೆ. ನಾಲ್ಕು ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಸಿರುವೆ, ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆಂದರು.
ಗ್ಯಾರೆಂಟಿಕಾರ್ಡುಗಳ ಪ್ರಭಾವ ರಾಜ್ಯ ವಿಧಾನಸಭಾ ಫಲಿತಾಂಶ ದ ಮೇಲೆ ಪರಿಣಾಮ ಬೀರಿದೆ.
ಬೊಮ್ಮಾಯಿ ಅವರ ಸರ್ಕಾರದ ಮೇಲೆ ಶೇ.40 ಲಂಚದ ಆರೋಪದ ಬಗ್ಗೆ ವಿವರಣೆ ಮಾಡಲು ಆಗಲಿಲ್ಲ. ಕಾಂಗ್ರೆಸ್ ಮುಖಂಡರ ಮೇಲಿನ ಆರೋಪಗಳನ್ನು ಹೆಚ್ಚಾಗಿ ಜನರ ಮುಂದೆ ತೆರೆದಿಡಲು ವಿಫಲರಾಗಿದ್ದು, ನಾಯಕರ ಒಳ ಒಪ್ಪಂದ ಎಂಬ ಸಿಟಿ ರವಿ, ಪ್ರತಾಪ್ ಸಿಂಹ್, ಸುನೀಲ್ ಹೇಳಿಕೆ ಬಗ್ಗೆ ವಿಚಾರ ಮಾಡಲಿದೆಂದರು.
ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಎಲ್ಲಾ ಸ್ಥಾನಗಳಲ್ಲಿ
ಕೆಆರ್ ಪಿ ಪಕ್ಷ ಕಾರಣ ಇರಬಹುದು. ಮಾಜಿ ಸಚಿವ ಜನಾರ್ಧನರೆಡ್ಡಿ ಅವರನ್ನು
ಬಿಜೆಪಿಗೆ ಕರೆತರುವ ಮಾತುಕತೆ ಇಲ್ಲ ಎಂದರು.
ಅಕ್ಕಿ ಕೊಡದಿರಲು, ಕೇಂದ್ರ ತೆಗೆದುಕೊಂಡ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಗೋಹತ್ಯೆ ನಿಷೇಧ ಕಾಯ್ದೆ ಎಪಿಎಂಸಿ ಕಾಯ್ದೆ ಹಿಂದಕ್ಕೆ ಪಡೆದಿರುವುದು ದ್ವೇಷ ರಾಜಕಾರಣವಾಗಿದೆಂದರು.
ಲಿಂಗಾಯತರ ಕಡಗಣನೆ ಆರೋಪವನ್ನು ಒಪ್ಪುವಿರಾ ಎಂಬ ಪ್ರಶ್ನೆಗೆ ಇಲ್ಲ. ಯಡಿಯೂರಪ್ಪ ನೇತೃತ್ವದಲ್ಲಿಯೇ ಚುನಾವಣೆ ನಡೆಯಿತು. ಒಟ್ಟಾರೆ ಜನ ಪಕ್ಷವನ್ನು ನಿರಾಕರಿಸಿದ್ದಾರೆ.
ಜಿಪಂ, ತಾಪಂ, ಲೋಕಸಭೆಗೆ ಸಿದ್ದತೆ ನಡೆದಿದೆ ಎಂದರು.
ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ರಹಿತವಾದ, ಆತಂಕವಾದ ಕಡಿಮೆಮಾಡಿದ ಮೊದಲಾದವುಗಳ ಆಡಳಿತದ ಬಗ್ಗೆ ತಿಳಿಸಿದರು.
ರಾಜ್ಯದಲ್ಲಿ ಅನಿರೀಕ್ಷಿತ ಫಲಿತಾಂಶದಿಂದ ಕಾರ್ಯಕರ್ತರು ಒಂದಿಷ್ಟು ನಿಷ್ಕ್ರಿಯರಾಗಿದ್ದಾರೆ. ಅವರಲ್ಲಿ ಪ್ರೋತ್ಸಾಹ ತುಂಬಲು,
ಜುಲೈ ತಿಂಗಳಲ್ಲಿ ಮತದಾರರ ಮನೆಗೆ ಕಾರ್ಯಕರ್ತರು ಭೇಟಿಮಾಡಿ ಕೇಂದ್ರ ಸರ್ಕಾರದ 9 ವರ್ಷಗಳ ಸಾಧನೆ ತಿಳಿಸುವ ಕಾರ್ಯ ನಡೆಯಲಿದೆ. ರಾಜ್ಯದಲ್ಲಿ ಪಕ್ಷದ ಮುಖಂಡರ ಏಳು ತಂಡಗಳು ಸಭೆ, ಪ್ರಚಾರದ ಕಾರ್ಯ ಮಾಡುತ್ತಿದೆಂದರು.
ಸುದ್ದಿಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಮಾಜಿ ಶಾಸಕರಾದ ಗಾಲಿ ಸೋಮಶೇಖರ ರೆಡ್ಡಿ, ಮಾಲಿಕಯ್ಯ ಗುತ್ತೆದಾರ್, ಎಂ.ಎಸ್.ಸೋಮಲಿಂಗಪ್ಪ, ಮುಖಂಡರುಗಳಾದ ರೇಣುಕಾ ಪ್ರಸಾದ್, ಎಂ.ಪಿ.ಸುಮಾ ವಿಜಯ, ಶಿಲ್ಪ ರಾಘವೇಂದ್ರ, ಕೆ.ಎ.ರಾಮಲಿಂಗಪ್ಪ, ಡಾ.ಎಸ್.ಜೆ.ವಿ.ಮಹಿಪಾಲ್, ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಹರಗೌಡ, ಗಣಪಾಲ ಐನಾಥ ರೆಡ್ಡಿ, ತೊಗರಿ ರಾಜೀವ್, ಸಿದ್ದೇಶ್ ಯಾದವ್ ಮೊದಲಾದವರು ಇದ್ದರು.