ಸೋಮಣ್ಣ ಪ್ರಚಾರದ ವೇಳೆ ಸಿದ್ದರಾಮಯ್ಯ ಪರ ಘೋಷಣೆ

ಮೈಸೂರು: ಏ.24:- ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪ್ರಚಾರ ತಡೆಯಲು ಯತ್ನಿಸಿದ ಘಟನೆ ಮೈಸೂರು ತಾಲ್ಲೂಕು ಭುಗತಗಳ್ಳಿ ಗ್ರಾಮದಲ್ಲಿ ನಡೆಯಿತು.
ಗ್ರಾಮದಲ್ಲಿ ಪ್ರಚಾರಕ್ಕೆ ಸೋಮಣ್ಣ ಆಗಮಿಸಿದ ವೇಳೆ ಸಿದ್ದರಾಮಯ್ಯ ಪರ ಕೆಲ ಯುವಕರು
ಸೋಮಣ್ಣಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು.
ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಚ್ಪಾರ್ಚನೆ ಮಾಡಿ ಭಾಷಣ ಮಾಡಲು ಸೋಮಣ್ಣ ಮುಂದಾದ ವೇಳೆ ಭಾಷಣದ ಮಧ್ಯೆ ಪ್ರಶ್ನೆ ಯುವಕನೊಬ್ಬ ಮಾಡಲು ಮುಂದಾದ. ಭಾಷಣ ಮುಗಿಯುವವರೆಗೂ ಕಾಯುವಂತೆ ಸೋಮಣ್ಣ ಮನವಿ ಮಾಡಿದರು. ಬಳಿಕ ಭಾಷಣ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಪರ ಘೋಷಣೆ ಕೂಗಿ ಮುತ್ತಿಗೆ ಹಾಕಿದರು. ಈ ವೇಳೆ ಮತ್ತೊಂದು ಯುವಕರ ಗುಂಪಿನಿಂದ ಸೋಮಣ್ಣ ಹಾಗೂ ಬಿಜೆಪಿ ಪರ ಘೋಷಣೆ ಕೂಗಲಾಯಿತು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತಗತಿರುವುದನ್ನು ಕಂಡ ಪೆÇಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಬಳಿಕ ಸೋಮಣ್ಣ ಮತ್ತೊಂದು ಊರಿಗೆ ಪ್ರಚಾರಕ್ಕೆ ತೆರಳಿದರು.
ಅಬ್ಬರದ ಪ್ರಚಾರ:
ರಾಜ್ಯದ ಪ್ರತಿಷ್ಠಿತ ವರುಣ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅಬ್ಬರದ ಪ್ರಚಾರ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಪ್ರಬಲ ಪೈಪೆÇೀಟಿಯೊಡ್ಡಿರುವ ವಿ ಸೋಮಣ್ಣ, ವರುಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಭುಗತಹಳ್ಳಿ, ವಾಜಮಂಗಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿ ಸೋಮಣ್ಣ ಬಿರುಸಿನ ಪ್ರಚಾರ ನಡೆಸಿದರು.
ಸಿದ್ಧರಾಮಯ್ಯ ವಿವೇಚನೆಯಿಂದ ಮಾತನಾಡಲಿ:
ನನ್ನನ್ನು ಹೊರಗಿನವನು ಎಂದು ಹೇಳುತ್ತಿರುವ ಸಿದ್ಧರಾಮಯ್ಯ ವಿವೇಚನೆಯಿಂದ ಮಾತನಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಿರುಗೇಟು ನೀಡಿದರು.
ವರುಣ ಕ್ಷೇತ್ರದ ವಾಜಮಂಗಲದಲ್ಲಿ ಪ್ರಚಾರ ವೇಳೆ ಮಾತನಾಡಿದ ಅವರು, ವರುಣ ಕ್ಷೇತ್ರಕ್ಕೆ ಬಂದಿರುವ ಸೋಮಣ್ಣ ಹೊರಗಿನವರು, ವರುಣ ಕ್ಷೇತ್ರಕ್ಕೆ ಸೋಮಣ್ಣ ಕೊಡುಗೆ ಏನು? ಎಂದು ಪ್ರಶ್ನಿಸುತ್ತಿರುವ ಸಿದ್ಧರಾಮಯ್ಯಗ ತಿರುಗೇಟು ನೀಡಿದರಲ್ಲದೆ, ಸಿದ್ದರಾಮಯ್ಯ ಕೊಪ್ಪಳಕ್ಕೆ ಹೋಗಿ ಚುನಾವಣೆಗೆ ನಿಂತಿದ್ದರು. ಕಳೆದ ಚುನಾವಣೆಯಲ್ಲೂ ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಬಾದಾಮಿ ಕ್ಷೇತ್ರದಲ್ಲೂ ಸಿದ್ಧರಾಮಯ್ಯ ಸ್ಪರ್ಧಿಸಿದ್ದರು ಎಂದು ನೆನಪಿಸುವ ಕೆಲಸ ಮಾಡಿದರು.
ಲಿಂಗಾಯತ ಸಿಎಂಗಳು ಭ್ರಷ್ಟಾಚಾರ ಮಾಡಿದ್ಧಾರೆಂದು ಮಾಜಿ ಸಿಎಂ ಸಿದ್ಧರಾಮಯ್ಯ ನೀಡಿರುವ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆ ಮಾತನಾಡಿದ ಅವರು, ಈ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ.
ಆವೇಶದಲ್ಲಿ ಮಾತನಾಡಿ ಕ್ಷಣಾರ್ಧದಲ್ಲಿ ನಾನು ಆ ರೀತಿ ಹೇಳಿಯೇ ಇಲ್ಲ ಎಂದಿದ್ದಾರೆ. ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮೇ 10ರಂದು ಜನರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ಸೂಚ್ಯವಾಗಿ ತಿಳಿಸಿದರು.
ವರುಣ ವಿಧಾನಸಭೆ ಕ್ಷೇತ್ರದಲ್ಲಿ ಆರಂಭದಲ್ಲಿದ್ಧ ಉತ್ಸಾಹ ಇದೀಗ ಇಮ್ಮಡಿಯಾಗಿದೆ. ಉತ್ಸಾಹ ನೂರರಷ್ಟು ಇಮ್ಮಡಿಯಾಗಿದೆ. ವರುಣ ಕ್ಷೇತ್ರದ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ನಾವು ಹೋದೆಡೆಯೆಲ್ಲಾ ಜನರು ಬದಲಾವಣೆ ಬಯಸಿರುವುದು ಗೊತ್ತಾಗುತ್ತಿದೆ. ವರುಣದಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿ ಸೋಮಣ್ಣ ಅವರೊಂದಿಗೆ ಸಂಸದ ಪ್ರತಾಪ್ ಸಿಂಹ, ದೇವನೂರು ಪ್ರತಾಪ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದರು.