ಸೋಮಣ್ಣ, ಗೋಪಾಲಕೃಷ್ಣ ಪಕ್ಷ ಬಿಡಲ್ಲ: ಅಶೋಕ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.18:  ಸಚಿವ ಸೋಮಣ್ಣ, ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಪಕ್ಷ ಬಿಡಲ್ಲ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಅವರಿಂದು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,  ಸೋಮಣ್ಣನವರ ಸಿಟ್ಟು 100%  ಶಮನ ಆಗಿದೆ. ಅವರು ಯಾವುದೇ ಸಂದರ್ಭದಲ್ಲೂ ಪಕ್ಷ ಬಿಡೋ ಪ್ರಶ್ನೆಯೇ ಇಲ್ಲ. ಇನ್ನು ಕೂಡ್ಲಿಗಿ ಶಾಸಕ ಗೊಪಾಲ ಕೃಷ್ಣ ಕೂಡ ಪಕ್ಷ ಬಿಡಲ್ಲ ಎಂದು ಹೇಳಿದರು.
 ಸಿದ್ದರಾಮ್ಯಯ್ಯನವರನ್ನು  ಸೋಲಿಸುವ ಹೊಣೆ ಡಿಕೆಶಿಗೆ:
ಮಾಜಿ ಮುಖ್ಯ ಮಂತ್ರಿ ಸಿದ್ರಾಮಯ್ಯ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸುವ ಹೊಣೆ ಅವರದೇ ಪಕ್ಷದ ಡಿ.ಕೆ.ಶಿವಕುಮಾರ್ ಹೊತ್ತುಕೊಂಡಿದ್ದಾರೆಂದರು.
ರಾಹುಲ್ ಸೂಚನೆ ಮೇರೆಗೆ ವರುಣಾಕ್ಕೆ ಹೋಗ್ತಿರೋ ಸಿದ್ದರಾಮಯ್ಯ ಬಗ್ಗೆ  ವ್ಯಂಗವಾಗಿ ಮಾತನಾಡಿ. ಸಿದ್ದರಾಮಯ್ಯ ವರುಣಾ ಅಲ್ಲ ಪಾಕಿಸ್ತಾನ, ಅಫ್ಘಾನಿಸ್ತಾನ,  ಅಥವಾ ಬಾಂಗ್ಲಾದೇಶಕ್ಕೆ ಹೋಗಿ ಸ್ಪರ್ಧೆ ಮಾಡಬೇಕು. ಬಹುಶಃ ಆ ದೇಶಗಳಲ್ಲಿ ಅವರು ಗೆಲ್ಲಬಹುದು. ಯಾಕಂದ್ರೇ ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲೂ ಗೆಲ್ಲಲ್ಲು ಆಗಲ್ಲ ಎಂದರು.
ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲಿ  ಸ್ಪರ್ಧೆ ಮಾಡಿದರೂ.  ಗೆಲ್ಲೋದಿಲ್ಲ ಈಗಾಗಲೇ ವರುಣಾ, ಚಾಮುಂಡೇಶ್ವರಿ ಸೋತಿದ್ದಾರೆ. ಈಗ ಬಾದಮಿ ಬಿಟ್ಟು ಓಡ್ ಬಂದಿದ್ದಾರೆ. ಕೋಲಾರದಲ್ಲೂ ಗೆಲ್ಲುವುದು ಕಷ್ಟವಿದೆ. ಹೀಗಾಗಿ ಇದೀಗ ಮತ್ತೆ ವರುಣಾ ಕಡೆ ಮುಖ ಮಾಡ್ತಿದ್ದಾರೆ. ಸಿದ್ದರಾಮಯ್ಯ ಬೇರೆ ರಾಜ್ಯ ಅಥವಾ ಬೇರೆ ದೇಶ ನೋಡ್ಕೋಳೋದು ಒಳ್ಳೆದು ಎಂದರು.‌
ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆ ಮೂಲಕ ಜನ ಜಾಗೃತಿ ಮಾಡುತ್ತಿದ್ದೇವೆ. 224 ಕ್ಷೇತ್ರಗಳನ್ನು ರೀಚ್ ಆಗಿರೋದು  ಬಿಜೆಪಿ ಮಾತ್ರ. ಬಿಜೆಪಿಯಲ್ಲಿ ಬಹಳಷ್ಟು ಜನ ರಾಜ್ಯ ಹಾಗೂ ಕೇಂದ್ರ ನಾಯಕರಿದ್ದಾರೆ.  ಆದ್ರೇ ಕಾಂಗ್ರೆಸ್ ಗೆ ಕೇವಲ ಇಬ್ಬರು ಮಾತ್ರ ಎಂದರು.‌
ಕಾಂಗ್ರೆಸ್ ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಿಟ್ಟರೇ ಮೂರನೇ ಲೀಡರ್ ಇಲ್ಲ. ಅವರು 224 ಕ್ಷೇತ್ರಕ್ಕೆ ಹೋಗಿಲ್ಲ, ಟಿಕೆಟ್ ಹಂಚಿಕೆಯಲ್ಲಿ ಬ್ಯೂಸಿ ಇದ್ದಾರೆ.ಕಾಂಗ್ರೆಸ್ ನವರು ಇಲ್ಲ ಸಲ್ಲದ ಆರೋಪ ಮಾಡ್ತಾರೆ. ಮತ್ತೊಮ್ಮೆ ಅಧಿಕಾರದ ರುಚಿ ನೋಡಬೇಕೆಂದು ಕನಸು ಕಾಣ್ತಿದ್ದಾರೆಂದರು.