ಸೋನೂ ಸೂದ್ ಅವರಿಂದ ದೇಶಾದ್ಯಂತ ವಿದ್ಯಾರ್ಥಿಗಳಿಗೆ ಬೆಂಬಲ, ಪಂಜಾಬ್ ಮುಖ್ಯಮಂತ್ರಿಯಿಂದ ಸೋನೂ ಸೂದ್ ಗೆ ಪ್ರಶಂಸೆ

ಸೋನು ಸೂದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ದೇಶಾದ್ಯಂತದ ವಿದ್ಯಾರ್ಥಿಗಳಿಗೆ ಬೆಂಬಲಿಸುವ ಮಾತನಾಡಿದ್ದಾರೆ.ಸದ್ಯದ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಅವರು ಸರಕಾರವನ್ನು
ವಿನಂತಿಸಿದ್ದಾರೆ.


ಕೊರೊನಾ ಸೋಂಕು ತೀವ್ರ ವ್ಯಾಪಿಸುತ್ತಿರುವ ಕಾರಣ ಭಯ ಪಟ್ಟಿರುವ ವಿದ್ಯಾರ್ಥಿಗಳಿಗೆ ಈ ಬೆಂಬಲ ಲೈಫ್ ಸಪೋರ್ಟ್ ಎಂದೆನಿಸಿದೆ. ಈ ಕಷ್ಟದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರುವಂತಹ ಅಸಹಾಯಕ ದೃಶ್ಯವನ್ನು ಸೃಷ್ಟಿಸಬೇಡಿ ಎಂದಿದ್ದಾರೆ ಸೋನೂ.
ವೀಡಿಯೋದಲ್ಲಿ ಸೋನು ಇನ್ನೊಂದು ಮಾತೂ ಹೇಳಿದ್ದಾರೆ- ನಮ್ಮ ದೇಶದಲ್ಲಿ ಬೋರ್ಡ್ ಎಕ್ಸಾಮ್ ಆಗುತ್ತಿದೆ. ಆದರೆ ನಮ್ಮ ದೇಶದ ವಿದ್ಯಾರ್ಥಿಗಳಿಗೆ ಈ ಸಮಯ ಪರೀಕ್ಷೆಗೆ ಕೂರುವಂತಹ ಸ್ಥಿತಿ ಇಲ್ಲ. ದೇಶದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಕೊರೊನಾ ಕೇಸುಗಳಿವೆ. ನನಗನಿಸಿದೆ ಆಫ್ ಲೈನ್ ಎಕ್ಸಾಮ್ ಈ ಸಮಯ ಸರಿಯಾಗಿಲ್ಲ. ಇದಕ್ಕೆ ಎಲ್ಲರ ಬೆಂಬಲ ಬೇಕು. ಸರಿಯಾದ ಸಂದರ್ಭ ಬಂದಾಗಲೇ ಪರೀಕ್ಷೆ ನಡೆಯಬೇಕು ಮತ್ತು ಲಕ್ಷಗಟ್ಟಲೆ ವಿದ್ಯಾರ್ಥಿಗಳ ಬದುಕನ್ನು ಅಪಾಯಕ್ಕೆ ಒಡ್ಡುವುದನ್ನು ತಡೆಯಬೇಕು ಎಂದಿರುವರು.
ಸೋನು ಅವರು ಇತ್ತೀಚೆಗೆ ಪಂಜಾಬ್ ನಲ್ಲಿ ಕೋವಿಡ್ ೧೯ ರ ಲಸಿಕೆ ಚುಚ್ಚಿಸಿಕೊಂಡಿದ್ದಾರೆ. ಅವರು ಸಂಜೀವನೀ: ಎ ಶಾಟ್ ಆಫ್ ಲೈಫ್ ವ್ಯಾಕ್ಸಿನ್ ಡ್ರೈವ್ ಕೂಡಾ ಶುಭಾರಂಭಿಸಿದ್ದಾರೆ. ಸೋನೂ ಸೂದ್ ಅವರ ಈ ಕೆಲಸ ಪಂಜಾಬ್ ನಿಂದ ಆರಂಭವಾಗಿದ್ದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಹ್ ಅವರೂ ಸೋಶಲ್ ಮೀಡಿಯಾದಲ್ಲಿ ಬರೆಯುತ್ತಾ- “ಪಂಜಾಬ್ ಸರಕಾರದ ಕೊರೊನಾ ವ್ಯಾಕ್ಸಿನೇಶನ್ ಡ್ರೈವ್ ಗಾಗಿ ಸೋನೂ ಬ್ರಾಂಡ್ ಅಂಬಾಸಡರ್.ಅದಕ್ಕಾಗಿ ಅವರಿಗೆ ಶುಭಾಶಯಗಳು” ಎಂದಿರುವರು.

ಸಾಧುಗಳ ಹತ್ಯೆಯ ಮತ್ತು ಗೋಹತ್ಯೆಯ ವಿಷಯದ ಫಿಲ್ಮ್ “ಸಂಘಾರ್” ಎಪ್ರಿಲ್ ೧೬ ರಂದು ಬಿಡುಗಡೆ

ಕಳೆದ ವರ್ಷ ಮಹಾರಾಷ್ಟ್ರದ ಪಾಲ್ ಘರ್ ಎಂಬಲ್ಲಿ ಸಾಧುಗಳನ್ನು ಹತ್ಯೆ ಮಾಡಿದ ಘಟನೆ ಮತ್ತು ಗೋಹತ್ಯೆಯನ್ನು ಮುಂದಿಟ್ಟು ನಿರ್ಮಿಸಿದ ಫಿಲ್ಮ್ ’ಸಂಘಾರ್’ (ಸಂಹಾರ್) ಎಪ್ರಿಲ್ ೧೬ ರಂದು ಬಿಡುಗಡೆಗೊಳ್ಳಲಿದೆ.


ಫಿಲ್ಮ್ ನಲ್ಲಿ ನಲ್ಲಿ ಪ್ರಧಾನ ಪಾತ್ರವನ್ನು ಖ್ಯಾತ ನಟ ಪುನೀತ್ ಇಸ್ಸಾರ್ ನಿರ್ವಹಿಸಿದ್ದಾರೆ.
ಫಿಲ್ಮ್ ನ ಟೀಸರ್ ಗೆ ಬಹಳ ಉತ್ತಮ ಪ್ರಶಂಸೆಗಳು ಬಂದಿವೆ.
“ನಮ್ಮ ಫಿಲ್ಮ್ ಪಾಲ್ ಘರ್ ನಲ್ಲಿ ನಡೆದ ಸಾಧುಗಳ ಲಿಂಚಿಂಗ್ ವಿಷಯಕ್ಕೆ ಸಂಬಂಧಿಸಿ ಇದೆ.ಒಂದು ವರ್ಷದ ನಂತರ ಎಪ್ರಿಲ್ ೧೬ರಂದು ಇದು ಬಿಡುಗಡೆಗೊಳ್ಳಲಿದೆ” ಎಂದಿದ್ದಾರೆ ಪುನೀತ್.


ಫಿಲ್ಮ್ ನ ಕಥೆಯನ್ನು ಪುನೀತ್ ಇಸ್ಸಾರ್ ಅವರ ಪುತ್ರ ಸಿದ್ಧಾಂತ್ ಇಸ್ಸಾರ್ ಬರೆದಿದ್ದಾರೆ. ಅವರೇ ಈ ಫಿಲ್ಮ್ ನ ಡೈರೆಕ್ಟರ್.ಈ ಫಿಲ್ಮ್ ನ್ನು ಅವರ ಯುಟ್ಯೂಬ್ ಚಾನೆಲ್ ಶೋಮ್ಯಾನ್ ಥಿಯೇಟರ್ ಪ್ರೊಡಕ್ಷನ್ ರಿಲೀಸ್ ಮಾಡುತ್ತಿದೆ.

ಪ್ರಥಮ ಬಾರಿ ಮ್ಯೂಸಿಕ್ ವೀಡಿಯೋ ಗಾಗಿ ಅರ್ಜುನ್ ಕಪೂರ್ ಮತ್ತು ರಕೂಲ್ ಪ್ರೀತ್ ಸಿಂಹ್ ಜೊತೆಯಲಿ

ನಟ ಅರ್ಜುನ್ ಕಪೂರ್ ಮತ್ತು ದಕ್ಷಿಣ ಭಾರತದ ಫಿಲ್ಮ್ ನಿಂದ ಬಾಲಿವುಡ್ ಗೆ ಬಂದಿರುವ ನಟಿ ರಕುಲ್ ಪ್ರೀತ್ ಸಿಂಹ್ ಮೊದಲ ಬಾರಿ ಒಂದು ಮ್ಯೂಸಿಕ್ ವೀಡಿಯೋದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತಮ್ಮ ಪೋಸ್ಟರುಗಳನ್ನು ಶೇರ್ ಮಾಡಿದ್ದಾರೆ.
ಈ ಮ್ಯೂಸಿಕ್ ವೀಡಿಯೋದ ಟೈಟಲ್ ’ದಿಲ್ ಹೈ ದೀವನಾ’.


ಇದರ ಕ್ಯಾಪ್ಶನ್ ನಲ್ಲಿ ಇಬ್ಬರೂ ಬರೆದಿದ್ದಾರೆ- ಎಪ್ರಿಲ್ ೧೭ರಂದು ಈ ವಿಡಿಯೋ ರಿಲೀಸ್ ಆಗಲಿದೆ. ರಾಧಿಕಾ ರಾವ್ ಮತ್ತು ವಿನಯ ಸಪ್ರೂ ನಿರ್ದೇಶನದಲ್ಲಿ ನಿರ್ಮಿಸಿರುವ ಆಲ್ಬಮ್ ನ ಹಾಡುಗಳ ಸಂಗೀತಗಾರರಾಗಿದ್ದಾರೆ ತನಿಷ್ಕ ಬಾಗಚೀ.ಟಿ ಸೀರೀಸ್ ನ ಬ್ಯಾನರ್ ನಲ್ಲಿ ಬಂದಿರುವ ಈ ಆಲ್ಬಮ್ ನ ಗೀತೆಗಳನ್ನು ದರ್ಶನ್ ರಾವಲ್ ಮತ್ತು ಜಾರಾ ಖಾನ್ ಹಾಡಿದ್ದಾರೆ.