ಸೋನುಸೂದ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕ್ಷಿಪ್ರ ಆಮ್ಲಜನಕ ಕೇಂದ್ರ ಉದ್ಘಾಟನೆ

ಬಳ್ಳಾರಿ,ಜೂ.02 : ಕರ್ನಾಟಕ ರೈಲ್ವೇ ಪೊಲೀಸ್ ಸಹಯೋಗದೊಂದಿಗೆ ಸೋನುಸೂದ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ರೈಲ್ವೇ ನಿಲ್ದಾಣದಲ್ಲಿ ಕ್ಷಿಪ್ರ ಆಮ್ಲಜನಕ ಕೇಂದ್ರವನ್ನು ರೈಲ್ವೆ ಡಿಎಸ್‍ಆರ್‍ಪಿ ವೆಂಕನಗೌಡ ಪಾಟೀಲ್ ಅವರು ಮಂಗಳವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕ್ಷಿಪ್ರ ಆಮ್ಲಜನಕ ಕೇಂದ್ರವು ಕಂಟ್ರೋಲ್ ರೂಂ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಅತೀ ಅವಶ್ಯಕವಾಗಿ ಆಕ್ಸಿಜನ್ ಕೊರತೆಯಿದ್ದವರು ಕಂಟ್ರೋಲ್ ರೂಂ ಗೆ ಕರೆ ಮಾಡಿ ಆಕ್ಸಿಜನ್ ಪಡೆಯಬಹುದು. ನಗರದಿಂದ 80ರಿಂದ 100 ಕಿ.ಮೀ ವ್ಯಾಪ್ತಿಯಲ್ಲಿರುವವರು ಕ್ಷಿಪ್ರ ಆಮ್ಲಜಕದ ಕೇಂದ್ರದ ನೆರವು ಪಡೆಯಬಹುದು ಎಂದು ಹೇಳಿದರು.
ಕ್ಷಿಪ್ರ ಆಮ್ಲಜನಕ ಕೇಂದ್ರದಿಂದ ಸಿಲಿಂಡರ್ ಮೂಲಕ ಆಕ್ಸಿಜನ್ ಪೂರೈಸಲಾಗುತ್ತದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದ್ದರೂ ಜನರು ನಿರ್ಲಕ್ಷ್ಯವಹಿಸಿದೆ ಸಂಪೂರ್ಣವಾಗಿ ಕೊರಾನಾ ನಿಯಂತ್ರಿಸಲು ಸಾರ್ವಜನಿಕರು ಕೈಜೋಡಿಸಬೇಕು ಎಂದರು.
ಸೋನುಸೂದ್ ಚಾರಿಟಬಲ್ ಟ್ರಸ್ಟ್‍ನ ಅಮೀತ್ ಅವರು ಮಾತನಾಡಿ ಜನರಿಗೆ ಉಚಿತ ಆಮ್ಲಜನಕ ನೀಡುವ ಉದ್ದೇಶದಿಂದ ದೇಶದ್ಯಾಂತ ಆಮ್ಲಜಕನ ಪೂರೈಸಲಾಗುತ್ತಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಕೋವಿಡ್ ರೋಗಿಗಳಿಗೆ ನೆರವಾಗುವ ಕೆಲಸ ಸೋನುಸೂದ್ ಅವರು ಮಾಡುತ್ತಿದ್ದಾರೆ. ಸೋನುಸೂದ್ ಚಾರಿಟಬಲ್ ಟ್ರಸ್ಟ್ ಮುಖಾಂತರ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯನ್ನು ನೀಗಿಸುವ ಕೆಲಸ ಮಾಡಲಾಗುತ್ತದೆ. ಹಾಸನ, ದಾವಣಗೆರೆ, ಹುಬ್ಬಳ್ಳಿ ಒಳಗೊಂಡಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಕ್ಷಿಪ್ರ ಆಮ್ಲಜನಕ ಕೇಂದ್ರವನ್ನು ತೆರೆÀಯಲಾಗಿದೆ. ಬಳ್ಳಾರಿಗೆ 20 ಆಕ್ಸಿಜನ್ ಸಿಲಿಂಡರ್ ನೀಡಲಾಗಿದೆ. ಬೇಡಿಕೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಸಿಲಿಂಡರ್‍ಗಳನ್ನು ಪೂರೈಸಲಾಗುತ್ತಿದ್ದು, ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಸೋನುಸೂದ್ ಅವರ ಟ್ವಿಟರ್ ಖಾತೆಯ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಕ್ಷಿಪ್ರ ಆಮ್ಲಜಕನ ಕೇಂದ್ರದ ಸಹಾಯವಾಣಿ ಸಂ:7069999961 ಗೆ ಸಂಪರ್ಕಿಸಿ ತುರ್ತು ಅವಶ್ಯಕತೆ ಇರುವವರು ಆಕ್ಸಿಜನ್ ಪಡೆಯಬಹುದು ಎಂದು ಅವರು ತಿಳಿಸಿದರು.
ಆಕ್ಸಿಜನ್ ಉಪಯೋಗ ಮತ್ತು ಆಕ್ಸಿಜನ್ ಸಿಲಿಂಡರ್ ಯಾವ ರೀತಿ ಬಳಕೆ ಮಾಡಬೇಕು? ಆಕ್ಸಿಜನ್ ಸಿಲಿಂಡರ್ ಬಳಸುವ ಸಮಯದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಬಗ್ಗೆ ಸೋನುಸೂದ ಚಾರಿಟಬಲ್ ಟ್ರಸ್ಟ್ನ ಸದಸ್ಯರು ಸ್ಥಳದಲ್ಲಿಯೇ ತರಬೇತಿ ನೀಡಿದರು.
ಈ ಸಮಯದಲ್ಲಿ ರಾಯಚೂರು ರೈಲ್ವೆ ವೃತ್ತದ ಸಿಪಿಐ ಎನ್.ಎಸ್.ಜನಗೌಡ, ರಾಯಚೂರು ರೈಲ್ವೆ ಪೊಲೀಸ್ ಠಾಣೆಯ ಪಿಎಸ್‍ಐ ಮಹೇಶ್ ಸಿ.ಜೆ, ಬಳ್ಳಾರಿ ರೈಲ್ವೆ ಠಾಣೆಯ ಎಎಸ್‍ಐ ಕೆ.ಶಿವಮೂರ್ತಿ, ಸೋನುಸೂದ್ ಚಾರಿಟಬಲ್ ಟ್ರಸ್ಟ್‍ನ ಎಸ್.ಅಜಯ್, ವಿವೇಕ್, ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್, ರೈಲ್ವೆ ಪೊಲೀಸ್ ಮತ್ತು ರೆಡ್‍ಕ್ರಾಸ್ ಸಂಸ್ಥೆಯ ಸಿಬ್ಬಂದಿ ಹಾಗೂ ಇತರರು ಇದ್ದರು.