ಸೋನಿಯಾ ಗಾಂಧಿ ಇ.ಡಿ ವಿಚಾರಣೆ ವಿರೋಧಿಸಿ ಬೃಹತ್ ಪ್ರತಿಭಟನೆ

ವಿಜಯಪುರ, ಜು.23-ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಸಾಂವಿಧಾನಿಕ ಇ.ಡಿ. ಐ.ಟಿ. ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಎ.ಐ.ಸಿ.ಸಿ. ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರನ್ನು ವಿಚಾರಣೆಗೊಳಪಡಿಸುತ್ತಿರುವುದನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟಿಸಲಾಯಿತು.
ನಂತರ ಮಹಾತ್ಮಾ ಗಾಂಧಿ ವೃತ್ತದಿಂದ ಬಸವೇಶ್ವರ ಸರ್ಕಲ್, ಡಾ.ಬಾಬಾಸಾಹೇಬ ಅಂಬೇಡ್ಕರ ವೃತ್ತದ ಮಾರ್ಗವಾಗಿ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ಘನವೆತ್ತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ರವರು ಮಾತನಾಡಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ದ್ವೇಷದ ರಾಜಕೀಯದಲ್ಲಿ ಮುಳುಗಿ ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೇಲೆ ಅಧಿಕಾರ ದುರುಪಯೋಗ ಮಾಡಿಕೊಂಡು ಮುಗಿದು ಹೋದ ನ್ಯಾಷನಲ್ ಹೆರಾಲ್ಸ್ ಪತ್ರಿಕೆಯ ಆಂತರಿಕ ವಿಚಾರವನ್ನು ಮತ್ತೆ ಕೆದಕಿ ಎ.ಐ.ಸಿ.ಸಿ. ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರನ್ನು ವಿಚಾರಣೆಗೊಳಪಡಿಸುತ್ತಿರುವುದು ಖಂಡನಾರ್ಹ. ವಿರೋಧ ಪಕ್ಷದವರ ಮೇಲೆ ಇಂತಹ ಮನೋಬಲ ಕುಗ್ಗಿಸುವಂತಹ ಪ್ರಯತ್ನವನ್ನು ಮಾಡುತ್ತಿರುವುದನ್ನು ಕಾಂಗ್ರೆಸ್ ಪಕ್ಷವು ಸಹಿಸುವುದಿಲ್ಲ. ಕೇಂದ್ರ ಸರಕಾರವು ಏನೇ ಪ್ರಯತ್ನಪಟ್ಟರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಇಡೀ ದೇಶದ ತುಂಬಾ ನಮ್ಮ ಕಾಂಗ್ರೆಸ್ ಪಕ್ಷದ ನಾಯಕಿಯಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ ಗಾಂಧಿಯವರ ಪರವಾಗಿ ಪಕ್ಷದ ಕಾರ್ಯಕರ್ತರು ನಿಲ್ಲುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಾಜು ಆಲಗೂರ ರವರು ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಕೇವಲ ದ್ವೇಷದ ರಾಜಕಾರಣ ಮಾಡುತ್ತಿದೆ. ಎ.ಐ.ಸಿ.ಸಿ. ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಸಾಂವಿಧಾನಿಕ ಸಂಸ್ಥೆಯಾದ ಜಾರಿ ನಿರ್ದೇಶನಾಲಯವನ್ನು (ಇ.ಡಿ.) ದುರುಪಯೋಗ ಮಾಡಿಕೊಂಡು ಅವರನ್ನು ವಿಚಾರಣೆಗೆ ಒಳಪಡಿಸುತ್ತಿರುವುದು ಅತ್ಯಂತ ಖಂಡನೀಯವಾಗಿದೆ. ಅಲ್ಲದೆ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಹಾಳುಗೆಡುವಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದರು. ಅದರಂತೆ ಇತ್ತೀಚೆಗೆ ಬಿಜೆಪಿ ಶಾಸಕರು ಮಾಜಿ ಉಪರಾಷ್ಟ್ರಪತಿಗಳಾದ ಹಮೀದ ಅನ್ಸಾರಿಯವರನ್ನು ದೇಶದ್ರೋಹಿ ಎಂದು ಹೇಳಿಕೆ ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ವಿಠ್ಠಲ ವಿಠ್ಠಲ ಕಟಕಧೋಂಡ, ಕಾಂಗ್ರೆಸ್ ಮುಖಂಡರಾದ ಅಬ್ದುಲ್‍ಹಮೀದ ಮುಶ್ರೀಫ್, ಬಿ.ಎಸ್. ಪಾಟೀಲ ಯಾಳಗಿ, ಕಾಂತಾ ನಾಯಕ, ಅಶೋಕ ಮನಗೂಳಿ, ಮಲ್ಲಣ್ಣ ಸಾಲಿ, ಸುಭಾಷ ಛಾಯಾಗೋಳ, ಮಹ್ಮದರಫೀಕ್ ಟಪಾಲ, ಚಾಂದಸಾಬ ಗಡಗಲಾವ, ಎಸ್.ಎಂ. ಪಾಟೀಲ ಗಣಿಹಾರ, ವಿದ್ಯಾರಾಣಿ ತುಂಗಳ, ಡಾ.ವಿಶ್ವನಾಥ ಮಠ, ಸಂಗನಗೌಡ ಪಾಟೀಲ ಹರನಾಳ, ಆನಂದ ದೊಡಮನಿ, ರಾಮನಗೌಡ ಬಗಲಿ, ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ, ಗುರು ತಾರನಾಳ, ವಿನೋದ ವ್ಯಾಸ, ಬಶೀರ ಬೇಪಾರಿ, ರಫೀಕ ಪಕಾಲಿ, ಎಸ್.ಬಿ. ಹಾರಿವಾಳ, ಈರನಗೌಡ ಎಸ್. ಬಿರಾದಾರ, ಸಿದ್ದಣ್ಣ ಗೌಡನ್ನವರ, ಬಾಳನಗೌಡ ಪಾಟೀಲ, ಸುಜಾತಾ ಕಳ್ಳಿಮನಿ, ವಿದ್ಯಾವತಿ ಅಂಕಲಗಿ, ಜಿಲ್ಲಾ ಅಂಗಘಟಕಗಳ ಅಧ್ಯಕ್ಷರಾದ ಬಾಪುಗೌಡ ಪಾಟೀಲ ವಡವಡಗಿ, ಶ್ರೀಕಾಂತ ಛಾಯಾಗೋಳ, ಶಾಹಜಾನ ಮುಲ್ಲಾ, ಎಸ್.ವ್ಹಿ. ಹಜೇರಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸಾಹೇಬಗೌಡ ಬಿರಾದಾರ, ವಸಂತ ಹೊನಮೊಡೆ, ಸೋಮನಾಥ ಕಳ್ಳಿಮನಿ, ಈರಣ್ಣ ಪಟ್ಟಣಶೆಟ್ಟಿ, ಶರಣಪ್ಪ ಯಕ್ಕುಂಡಿ, ಹಾಜಿಲಾಲ ದಳವಾಯಿ, ಈರಪ್ಪ ಜಕ್ಕಣ್ಣವರ, ತಮ್ಮಣ್ಣ ಮೇಲಿನಕೇರಿ, ಹೊನಮಲ್ ಸಾರವಾಡ, ಎ.ಎಮ್. ಸುತಾರ, ಚನಬಸಪ್ಪ ನಂದರಗಿ, ಎಂ.ಎ. ಖತೀಬ, ಇರ್ಫಾನ ಶೇಖ, ನಾಗರಾಜ ಲಂಬು, ರಜಾಕಸಾಬ ಕಾಖಂಡಕಿ, ರೇಣುಕಾ ಲೋಹಗಾಂವಕರ, ಸುಜಾತಾ ಸಿಂಧೆ, ಕಸ್ತೂರಿ ಬಿರಾದಾರ, ಕಸ್ತೂರಿ ಪೂಜಾರಿ, ದಾನಮ್ಮಾ ಜಿರಲಿ, ರಮೇಶ ದಳವಾಯಿ, ಮಲ್ಲನಗೌಡ ಎಸ್. ಬಿರಾದಾರ, ಧನರಾಜ ಎ., ಗಣೇಶ ಮಣೂರ, ರವೀಂದ್ರ ಜಾಧವ, ಜಕ್ಕಪ್ಪ ಯಡವೆ, ಮಾದೇವ ನಾಟೀಕಾರ, ಎಂ.ಎಂ. ಮುಲ್ಲಾ, ಮುದಸ್ಸರ ವಾಲಿಕಾರ, ಇಲಿಯಾಸ ಸಿದ್ದಿಕಿ, ಸಂತೋಷ ಬಾಲಗಾಂವಿ, ತಾಜುದ್ದೀನ ಖಲೀಫಾ, ಎಂ.ಎ. ಅಥಣಿ, ಬಿ.ಎಸ್. ಬ್ಯಾಳಿ, ನಿಂಗನಗೌಡ ಬಿರಾದಾರ, ಎಸ್.ಎಸ್. ಹೆಬ್ಬಾಳ, ಶಿವಕುಮಾರ ದೇಸಾಯಿ, ಸರಿತಾ ನಾಯಕ, ಸಲೀಮ್ ಪೀರಜಾದೆ, ದೀಪಾ ಕುಂಬಾರ, ಗೌರಮ್ಮಾ ಮುತ್ತತ್ತಿ, ಲಲಿತಾ ದೊಡಮನಿ, ಪ್ರಭಾವತಿ ನಾಟಿಕಾರ, ಮಂಜುಳಾ ಜಾಧವ, ರುಕ್ಮಿಣಿ ರಾಠೋಡ, ಭಾರತಿ ಹೊಸಮನಿ, ಸುಂದರಪಾಲ ರಾಠೋಡ, ಸಲೀಮ್ ಉಸ್ತಾದ, ಅನುಪಮ ಬಬಲೇಶ್ವರ, ಲಕ್ಷ್ಮಣಗೌಡ ಎನ್. ಬಿರಾದಾರ, ಅಕಬರ ನಾಯಕ, ಕೆ.ಕೆ. ಬನ್ನೆಟ್ಟಿ, ಆರ್.ಡಿ. ಹಕ್ಕೆ, ಸುಭಾಸ ತಳಕೇರಿ, ಶಿವಾನಂದ ಹೊನವಾಡ, ಬಸವರಾಜ ಕಲ್ಲೂರ, ಶರಣಪ್ಪ ಬೆಲ್ಲದ, ಬಾಬು ಯಾಳವಾರ, ಮುಂತಾದವರು ಉಪಸ್ಥಿತರಿದ್ದರು.