ಸೋತರೂ ಗೆದ್ದರೂ ಸದಾ ನಿಮ್ಮೊಂದಿಗಿರುವೆ: ಕೇಶವ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.25: ನಗರದ 12 ಮತ್ತು 23 ನೇ  ವಾರ್ಡ್ಗಳಲ್ಲಿ ಆಮ್ ಆದ್ಮಿ  ಪಕ್ಷದ ಅಭ್ಯರ್ಥಿ  ಕೊರಲಗುಂದಿ ದೊಡ್ಡ ಕೇಶವ ರೆಡ್ಡಿ ಮತ್ತು ಅವರ ಪುತ್ರಿ ಮಂಜುಳಾ ಮನೋಹರ ರೆಡ್ಡಿ ಅವರು  ಮತಯಾಚನೆ ಮಾಡಿದರು.
ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ, ನಾನು ಸೋತರೂ ಗೆದ್ದರೂ ಸದಾ ನಿಮ್ಮೊಂದಿಗೆ ಜನಸೇವೆ ಮಾಡಲು ಸಿದ್ಧನಿರುತ್ತೇನೆ.  ದೆಹಲಿ ಮತ್ತು ಪಂಜಾಬ್ ಮಾದರಿಗಳಲ್ಲಿ ನಮ್ಮ ಕರ್ನಾಟಕದಲ್ಲಿ ವಿಶೇಷವಾಗಿ ಬಳ್ಳಾರಿಯಲ್ಲಿಯೂ ಸಹ ಅಭಿವೃದ್ಧಿ ಹೊಂದಬೇಕಾದರೆ ನಮ್ಮ ಪಕ್ಷದ ಪರಕೆ ಕೊರಕೆ ಗುರುತಿಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ಹಾಕಿರಿ ಮತ್ತು ಹಾಕಿಸಿರಿ ಎಂದರು.
ಈ ಸಂದರ್ಭದಲ್ಲಿ  ಪಕ್ಷದ ಬಳ್ಳಾರಿ ಜಿಲ್ಲಾ ಉಸ್ತುವಾರಿ ನವಲಿ ಹಿರೇಮಠ,ನಗರದ ಅಧ್ಯಕ್ಷ ಜೆ ವಿ ಮಂಜುನಾಥ, ವಿ.ಬಿ. ಮಲ್ಲಪ್ಪ, ಟಿ. ಕಿರಣ್ ಕುಮಾರ್, ಅಮೆರ್ ಖಾದ್ರಿ, ನೂರ್, ಪ್ರದೀಪ್ ರೆಡ್ಡಿ ರಾಘವ್ ರೆಡ್ಡಿ ಪ್ರಸಾದ್ ರೆಡ್ಡಿ, ರಘು ಶೆಟ್ಟಿ, ದಿವಾಕರ್, ಶಿವಲಿಂಗ ನಾಯಕ್, ಸುಹೇಲ್, ಅಮಿತ್, ಪ್ರತಾಪ್, ಶೇಖರ್ ಯಾದವ್  ಮತ್ತು ಅವರ ಸ್ನೇಹ ಬಳಗ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.