ಸೋತರೂ ಕೋಲಾರ ಬಿಡೋದಿಲ್ಲ ಪಕ್ಷ ಸಂಘಟಿಸುತ್ತೇನೆ

ಕೋಲಾರ, ಜೂ. ೫-ಸಮಯ ಅಭಾವ ಕಡಿಮೆಯಿದ್ದ ಕಾರಣ ಗ್ರಾಮೀಣ ಭಾಗಕ್ಕೆ ಮತಪ್ರಚಾರಕ್ಕೆ ಹೋಗಲು ಸಾಧ್ಯವಾಗಿಲ್ಲ, ಆದರೂ ಸಹ ಕೋಲಾರ ಲೋಕಸಭಾ ಕ್ಷೇತ್ರದ ಶಾಸಕರು, ಮಾಜಿ ಶಾಸಕರು, ಮುಖಂಡರು ಸೇರಿ ಉತ್ತಮ ಚುನಾವಣೆ ನಡೆಸಿದ್ದಕ್ಕಾಗಿ ನನ್ನ ಪ್ರತಿಸ್ಪರ್ಧಿ ಅಲ್ಪ ಮತಗಳಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ತಿಳಿಸಿದರು.
ಮತ ಎಣಿಕೆ ಕೇಂದ್ರದಿಂದ ಹೊರಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ಟಿಕೆಟ್ ಘೋಷಣೆ ಆಗಿದ್ದು ತರವಾಯಿತು, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಪ್ರಾಯವಿಲ್ಲದೆ ಒಟ್ಟಾಗಿ ಕೆಲಸ ಮಾಡಿದ ಪರಿಣಾಮ ಮತದಾರರು ಸ್ಪಂಧನೆ ಮಾಡಿದ್ದಾರೆ, ಟಿಕೆಟ್ ಘೋಷಣೆ ಇನ್ನೂ ೧೫ ದಿನಗಳ ಮುಂಚಿತವಾಗಿ ಮಾಡಿದ್ದರೆ ಇನ್ನೂ ಉತ್ತಮವಾದ ಚುನಾವಣೆ ನಡೆಸಬಹುದಾಗಿತ್ತು, ಚುನಾವಣೆಯ ಅರಿವು ಈಗ ಗೊತ್ತಾಗಿದೆ. ಮುಂದೆ ಕೋಲಾರದಲ್ಲಿಯೇ ಇರುತ್ತೇನೆ, ಪಕ್ಷ ಸಂಘಟನೆ ಕೆಲಸ ಮಾಡುವುದಾಗಿ ತಿಳಿಸಿದರು.
ಮತದಾರರ ಮನಸ್ಸಿನಲ್ಲಿರುವುದು ಈಗ ನನಗೆ ಅರಿವಾಗಿದೆ, ಟಿಕೆಟ್ ಘೋಷಣೆಯಾಗದಿಂದಲೂ ಎಲ್ಲ ಮುಖಂಡರು ಒಟ್ಟಾಗಿ ಭಿನ್ನಮತವಿಲ್ಲದೆ ಕೆಲಸ ಮಾಡಿದ್ದಾರೆ, ಮೈತ್ರಿ ಕೆಲಸ ಮಾಡಿದ ಕಾರಣ ನಮ್ಮ ಪ್ರತಿಸ್ಪರ್ಧಿ ಗೆಲುವು ಸಾಧಿಸಲು ಅನುಕೂಲವಾಗಿದೆ, ಭಾರೀ ಅಂತರದ ಗೆಲುವು ಏನಿಲ್ಲ, ಸಚಿವ ಕೆ.ಹೆಚ್.ಮುನಿಯಪ್ಪನವರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ, ಅವರು ರಾಷ್ಟ್ರ ನಾಯಕರಾದ ಕಾರಣ ಚುನಾವಣಾ ಪ್ರಚಾರಕ್ಕೆ ಹೆಚ್ಚಾಗಿ ಬರಲು ಸಾಧ್ಯವಾಗಿಲ್ಲ, ಅದಕ್ಕೆ ಬೇರೆ ರೀತಿಯ ಬಣ್ಣ ಕಟ್ಟುವ ಅವಶ್ಯಕತೆ ಇಲ್ಲ, ನನಗಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಕೃತಜ್ಞತೆ ತಿಳಿಸಿದರು.