ಸೋತರು ಕ್ಷೇತ್ರ ಬಿಡಲಿಲ್ಲ, ಗೆದ್ದರೆ ಬಿಡ್ತೀನಾ – ಲೋಕೇಶ ವಿ ನಾಯಕ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.30 :- ಕ್ಷೇತ್ರ ಬಿಟ್ಟು ಹೋಗುವ ಜಾಯಮಾನ ನನ್ನದಲ್ಲ, ಹತ್ತುವರ್ಷದಿಂದ  ನಿಮ್ಮ ಸೇವಕನಾಗಿ ಕ್ಷೇತ್ರವಾರು ಸುತ್ತಾಡಿ ಮನೆಮಗನಂತಾಗಿದ್ದೇನೆ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿ ಅಧಿಕ ಮತಗಳು ಪಡೆದು  ನಿಮ್ಮಗಳ ಪ್ರೀತಿವಿಶ್ವಾಸಕ್ಕೆ ಋಣಿಯಾಗಿರುವೆ ಸೋತರು ಕ್ಷೇತ್ರ ಬಿಡದ ನಾನು ಈ ಬಾರಿ ನಿಮ್ಮ ವಿಶ್ವಾಸದ ಮತದಿಂದ ಬಿಜೆಪಿ ಅಭ್ಯರ್ಥಿಯಾಗಿರುವ  ನನ್ನನ್ನು ಗೆಲ್ಲಿಸಿದರೆ  ನಿಮ್ಮಗಳ ಮುಂದೆಯೇ ಸದಾ ಇರುವೆ  ಎಂದು ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕೂಡ್ಲಿಗಿ ಕ್ಷೇತ್ರದ ಮೊರಬ, ಚೌಡಾಪುರ ಹಾಗೂ ಹಿರೇಹೆಗ್ಡಾಳ್ ಗ್ರಾಮಪಂಚಾಯಿತಿವಾರು ಮತ ಪ್ರಚಾರದ ವೇಳೆ ಮಾತನಾಡುತ್ತ ಕ್ಷೇತ್ರ ಬಿಟ್ಟು ಹೋದವರು ಹೋಗಿರಬಹುದು ಆದರೆ ಆ ಸಾಲಿನಲ್ಲಿ ಊರು ಬಿಟ್ಟು ಹೋಗುವ ವ್ಯಕ್ತಿ ನಾನಲ್ಲ ಅದರ ಅವಶ್ಯಕತೆ ನನಗಿಲ್ಲ ಕ್ಷೇತ್ರವಾರು ಸುತ್ತಾಡಿ ಹತ್ತುವರ್ಷದ ಅನುಭವದಲ್ಲಿ ನಾ ಕಂಡಂತೆ  ಕೂಡ್ಲಿಗಿ ಕ್ಷೇತ್ರದಲ್ಲಿ ಅನೇಕ ಪದವೀಧರರಿದ್ದು ಅವರಿಗೆ ಉದ್ಯೋಗವಿಲ್ಲದೆ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ ಅಲ್ಲದೆ ಬೆಂಗಳೂರು ಹಾಗೂ ಇತರೆಡೆ ವಲಸೆ ಹೋಗುತ್ತಿದ್ದು ಇವರಿಗೆ ಕ್ಷೇತ್ರದಲ್ಲಿ ಉದ್ಯೋಗ ಸಿಗುವಂತಹ ಕಾರ್ಯ ರೂಪಿಸುವ ಗುರಿ ಇಟ್ಟುಕೊಂಡಿದ್ದೇನೆ ಅಲ್ಲದೆ ಜನರ ಕಷ್ಟಕಾರ್ಪಣ್ಯಗಳಲ್ಲಿ ಸದಾ ಭಾಗಿಯಾಗಿ ಕಣ್ಣೀರೊರೆಸುವಲ್ಲಿ ಮುಂದಾಗುವೆ ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ನೀವು ತಿಳಿದುಕೊಂಡವರು ಕಳೆದ ಬಾರಿ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರ ಎಷ್ಟು ನೀಡಿದೆ ಎಂಬುದು ನಿಮಗೆಲ್ಲ ತಿಳಿದ ವಿಚಾರವಾಗಿದೆ ಎಂದರು.
ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎಸ್  ಸುರೇಶ ಮಾತನಾಡಿ ಎಸ್ಟಿ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಿದ  ಬಿಜೆಪಿ ಸರ್ಕಾರ  ಕೂಡ್ಲಿಗಿ  ಕ್ಷೇತ್ರದ ಅಭಿವೃದ್ಧಿಗೆ ಕಳೆದ ಬಾರಿ ಕೋಟಿ ಕೋಟಿ ಅನುದಾನ ನೀಡಿದೆ, ಕೆಲವರು ಬಿಜೆಪಿ  ಪಕ್ಷದ ಲಾಭ ಪಡೆದುಕೊಂಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಪಡೆದುಕೊಂಡು ಈಗ ಬೇರೆ ಪಕ್ಷಕ್ಕೆ ಸೇರಿ  ಬಿಜೆಪಿಯನ್ನು ನಿಂದಿಸುವುದು ಸರಿಯಾದುದಲ್ಲ ಎಂದು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಮಾಜಿ  ಅಧ್ಯಕ್ಷ  ಜಿ. ಉಮೇಶ್ ಹಾಗೂ ಮಾಜಿ ಜಿ ಪಂ ಸದಸ್ಯ ಬಿ ಶಿವಣ್ಣ, ಬಿಜೆಪಿ ಜಿಲ್ಲಾಕಾರ್ಯಕಾರಣಿ ಸದಸ್ಯ ಭೀಮೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯ ಪಾಪಣ್ಣ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಗುಳಿಗೆ ವೀರೇಶ್,  ಪ ಪಂ ಸದಸ್ಯ  ಪಿ ಚಂದ್ರು , ಎಸ್ ಸುರೇಶ್, ಗುಳಗೀ ವೀರೇಂದ್ರ, ಗುನ್ನಳ್ಳಿ ನಾರಾಯಣ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಕೆಬಿ ಬಸವರಾಜ್ ,
ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಚಿದಾನಂದಪ್ಪ, ಕಲ್ಲೆರ ರೇವಣ್ಣ, ಮರಬದ ವೀರಣ್ಣ, ಯುವ ಮುಖಂಡರಾದ ಸುದರ್ಶನ್, ಅಜಯ್, ಎಂಎಸ್ ಅಜಯ್ ಕುಮಾರ್ ಸತೀಶ್,ಬಸವರಾಜ್, ಎಸ್. ಪಿ  ಪ್ರಕಾಶ್, ಸಣ್ಣ ಕೊತ್ಲಾಪ್ಪ, ರಜನಿಕಾಂತ್, ಮರಬ ಪಂಚಾಯತಿ ಉಪಾಧ್ಯಕ್ಷ  ವೆಂಕಟೇಶ್, ಹಾಗೂ ಪಕ್ಷಕ್ಕೆ ವಿವಿಧ ಪಕ್ಷಗಳ  ಮೊರಬದ ಮುಖಂಡರು  ಅಭ್ಯರ್ಥಿ ಲೋಕೇಶ ವಿ ನಾಯಕ  ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿ ಗೆ ಸೇರ್ಪಡೆಗೊಂಡರು.
ಮುನ್ನ, ಅಜಮತ್ ಉಲ್ಲಾ , ರಾಜಾವಲಿ, ಸಲೀಂ ಸಾಬ್, ಮಂಜುನಾಥ, ಜಟ್ಟಂಗಿ ನಾಗರಾಜ್, ತಳವಾರ ಹುಲಿಕುಂಟೆಪ್ಪ, ಮೇಗಳಮನಿ ಬಸವರಾಜ್, ಸುಭಾನ್  ಸಾಬ್, ವಿ ದುರ್ಗೇಶ್, ದಾಸಪ್ಪ ರಘು, ಶಿಕಾಣಿ ಈರಪ್ಪರ ನಾಗರಾಜ, ಎಲ್ಲರೂ ಬಿಜೆಪಿಗೆ ಸೇರ್ಪಡೆಗೊಂಡರು