ಸೋಜುಗದ ಕಸ್ತೂರಿ ಕನ್ನಡ

ಜೆಂಕಾರ್ ಮ್ಯೂಸಿಕ್ ಸಂಸ್ಥೆ ಸೋಜುಗದ ಕಸ್ತೂರಿ ಕನ್ನಡ ಎಂಬ ಹಾಡು ಬಿಡುಗಡೆ ಮಾಡಿದೆ.
ಅಜಯ್ ವಾರಿಯರ್‌ ನಟಿಸಿ‌‌, ಹಾಡಿರುವ ಈ‌ ಹಾಡನ್ನು ಜಿಮ್ ಶಿವು ಬರೆದಿದ್ದಾರೆ. ‌ ಯುವರಾಜ್ ಸಂಗೀತ ನೀಡಿದ್ದಾರೆ.
ನಿರ್ದೇಶನ ಹಾಗೂ ಸಂಕಲನದ ಜವಾಬ್ದಾರಿ ಮೋಹನ್ ಕಾಮಾಕ್ಷಿ ಅವರದು.
ಶ್ರೀರಂಗಪಟ್ಟಣದ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ಈ‌ ಹಾಡನ್ನು ಸುನೀತ್ ಹಲಗೇರಿ ತಮ್ಮ ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆಹಿಡಿದಿದ್ದಾರೆ.
ಈಗಾಗಲೇ ‌ಬಿಡುಗಡೆಯಾಗಿರುವ ಈ ಹಾಡಿಗೆ ಒಳ್ಳೆಯ ಪ್ರಶಂಸೆ ದೊರಕಿದೆ.
ಸದ್ಯದಲ್ಲೇ ಸಾಕಷ್ಟು ವಿಡಿಯೋ ಹಾಡುಗಳು ಜೆಂಕಾರ್‌ನಿಂದ ಬಿಡುಗಡೆಯಾಗಲಿವೆ.