ಸೋಜಿಗದ ಗೀಜಗನ ಗೂಡು

ಕಲಬುರಗಿ: ತನ್ನ ಸ್ವಂತ ಶಕ್ತಿಯಿಂದ ತಾನೇ ಗೂಡು ನಿರ್ಮಿಸಿಕೊಳ್ಳುವ ಕೌಶಲ್ಯ ಹಕ್ಕಿಗಳಿಗೆ ಇದೆ.ವಾಸಕ್ಕಾಗಿ ಹಾಗೂ ತನ್ನ ಮರಿಗಳನ್ನು ಬೆಚ್ಚಗೆ ಸುರಕ್ಷಿತವಾಗಿಡಲು ಹುಲ್ಲುಕಡ್ಡಿ ಮತ್ತು ಹತ್ತಿ, ನಾರಿನಿಂದ ಸರಳವಾಗಿ ಹಕ್ಕಿಗಳು ಗೂಡು ನಿರ್ಮಿಸಿಕೊಳ್ಳುತ್ತವೆ.
ಪಕ್ಷಿ ಲೋಕದ ಎಂಜಿನಿಯರ್ ಎಂದೇ ಕರೆಸಿಕೊಳ್ಳುವ ಗೀಜಗ ಹಕ್ಕಿ ಈಚಲು ಗರಿ ಬಳಸಿ ಮುಳ್ಳಿನ ಮರದಲ್ಲಿ ಗೂಡು ಕಟ್ಟುತ್ತವೆ .15 ಸೆಂಮೀ ಅಳತೆಯುಳ್ಳ ಗೂಡು ಹೆಚ್ಚಾಗಿ ನೀರಿರುವ ಪ್ರದೇಶದಲ್ಲಿ ನಿರ್ಮಿಸುತ್ತವೆ.
ಗೀಜಗ ಹಕ್ಕಿ ಗೂಡು ಕಟ್ಟಲು ಸುಮಾರು ನಲವತ್ತರಿಂದ ಐವತ್ತು ದಿನ ತೆಗೆದುಕೊಳ್ಳುವವು. ಗೂಡಿನ ರಚನೆಯೇ ಅದ್ಭುತ. ಇದರ ತಾಳ್ಮೆ,ಚಾಣಾಕ್ಷತನ ,ಶ್ರದ್ಧೆ, ನಿಷ್ಠೆ, ಶ್ರಮ, ವೇಳಾ ಪಟ್ಟಿ ಎಂತವರಿಗೂ ಸೋಜಿಗ!.
ಕೃಷಿವಲಯದ ಅಸುಪಾಸಿನಲ್ಲಿ ಪಾಳು ಬಿದ್ದ ಭಾವಿಗಳಲ್ಲಿ ನೀರಿನ ಸೆಲೆ ಇರುವ ಕಡೆ ವಾಸಕ್ಕಾಗಿ ಮತ್ತು ಸಂತಾನೋತ್ಪತ್ತಿಗಾಗಿ ಸ್ಥಳ ಆಯ್ಕೆ ಮಾಡಿಕೊಳ್ಳುತ್ತವೆ.ಇವು ಎರಡರಿಂದ ಮೂರು ಅಂತಸ್ಥಿನ ಗೂಡು ಹೆಣೆಯುತ್ತದೆ.
ಈ ಗೂಡು ಎಷ್ಟು ಭದ್ರವೆಂದರೆ ಒಮ್ಮೆ ನಿರ್ಮಿಸಿದ ಗೂಡು ಪುನಃ ಏಳೆಂಟು ತಿಂಗಳವರೆಗೆ ಬೇರೆ ಪಕ್ಷಿಗಳಿಗೂ ಆಸರೆಯಾಗುತ್ತವೆ ಇದೇ ಮನುಷ್ಯರಿಗೂ ಪಶು ಪಕ್ಷಿಗಳಿಗೂ ಇರುವ ವ್ಯತ್ಯಾಸ.