ಸೋಗಿ ಶಾಲೆಗೆ ಲಕ್ಷ ರೂ. ದೇಣಿಗೆ ನೀಡಿದ ಹಳೇ ವಿದ್ಯಾರ್ಥಿ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಆ.15 : ತಾಲೂಕಿನ ಸೋಗಿ ಗ್ರಾಮದ ಪಟ್ಟೇದ ಸಿದ್ದಮಲ್ಲಪ್ಪ ಸರ್ಕಾರಿ ಪ್ರೌಢಶಾಲೆಗೆ ಈ ಶಾಲೆಯ ಹಳೇ ವಿದ್ಯಾರ್ಥಿಯೊಬ್ಬರು ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಗ್ರಾಮದ ಹೊಳಿಯಾಚಿ ವಾಮದೇವಪ್ಪನವರ ಪುತ್ರ ಗುರುಬಸವರಾಜ ಅವರು ಸೋಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಹೆಸರಲ್ಲಿ ಠೇವಣಿ ಇರಿಸಿದ್ದಾರೆ.
1989 ರಿಂದ 92ರವರೆಗೆ ಪ್ರೌಢಶಾಲೆಯಲ್ಲಿ ಓದಿರುವ ಗುರುಬಸವರಾಜ ಸದ್ಯ ಇಂಡಿಯನ್ ಬ್ಯುರೋ ಆಫ್ ಮೈನ್ಸ್ ನಲ್ಲಿ ಅಧಿಕಾರಿಯಾಗಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರತಿವರ್ಷ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿ, ಸ್ಪರ್ಧಾ ವಿಜೇತರರಿಗೆ ಠೇವಣಿಯ ಬಡ್ಡಿ ಹಣದಲ್ಲಿ ಬಹುಮಾನ ನೀಡುವಂತೆ ಅವರು ಶಾಲಾ ಆಡಳಿತ ಮಂಡಳಿಯವರನ್ನು ಕೋರಿದ್ದಾರೆ.