ಸೋಗಿ ವೀರಭದ್ರೇಶ್ವರ ರಥೋತ್ಸವ ರದ್ದು

ಹೂವಿನಹಡಗಲಿ ಜ 08 : ತಾಲೂಕಿನ ಸೋಗಿ ಗ್ರಾಮದಲ್ಲಿ ಇದೇ 26 ರಂದು ಜರುಗಬೇಕಿದ್ದ ವೀರಭದ್ರೇಶ್ವರ ಸ್ವಾಮಿ ರಥೋತ್ಸವವನ್ನು ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಎಚ್.ಪ್ರಕಾಶ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವಸ್ಥಾನದ ಸಾಂಪ್ರದಾಯಿಕ ಆಚರಣೆಗಳನ್ನು ಸರಳವಾಗಿ ನಡೆಸುತ್ತಿದ್ದು, ಜ. 24 ರಂದು ಸ್ವಾಮಿಯ ಮೊದಲ ಉತ್ಸವ ಹೊರಡಿಸಲಾಗುವುದು, 25 ರಂದು ದೀಪೆÇೀತ್ಸವ, 26 ರಂದು ಸಾಂಕೇತಿಕ ರಥೋತ್ಸವ, 27 ರಂದು ಪುರವಂತರ ಮಜಲು, 28 ರಂದು ಮಹಾ ಮಂಗಲದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.