ಸೋಂಕು ಹೆಚ್ಚಳ ಚೇತರಿಕೆ ಅಧಿಕ


ನವದೆಹಲಿ,ಆ.೪- ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ಏರುಮುಖದಲ್ಲಿದೆ. ಆದರೂ ಚೇತರಿಕೆ ಸಂಖ್ಯೆ ಅಧಿಕವಾಗಿರುವುದು ತುಸು ನೆಮ್ಮದಿಯ ನಿಟ್ಟಿಸಿರುವ ಬಿಡುವಂತೆ ಮಾಡಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೯,೮೯೩ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು ೨೦,೪೧೯ ಮಂದಿ ಸೋಂಕಿತರ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಹೊಸದಾಗಿ ೩೮,೨೦,೬೭೬ ಡೋಸ್ ಲಸಿಕೆ ಹಾಕಲಾಗಿದ್ದು ಇಲ್ಲಿಯ ತನಕ ೨೦೫.೨೨ ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಈ ಪೈಕಿ ೯೩,೪೦ ಕೋಟಿ ಡೋಸ್ ಎರಡನೇ ಡೋಸ್, ೯.೮೦ ಕೋಟಿ ಹೆಚ್ಚುವರಿ ಡೋಸ್ ಲಸಿಕೆ ನೀಡಲಾಗಿದ್ದು ಉಳಿದ ಡೋಸ್ ಮೊದಲ ಡೋಸ್ ಲಸಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಸೋಂಕು ಏರಿಳಿತ ಹಿನ್ನೆಲೆಯಲ್ಲಿ ದಿನದ ಪಾಸಿಟಿವಿ ಪ್ರಮಾಣ ಶೇ.೪.೯೪ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ.೪.೬೪ ರಷ್ಟು ಇದೆ. ಅಲ್ಲದೆ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ.೦.೩೧ರಷ್ಟು ಇದೆ ಎಂದು ಸಚಿವಾಲಯ ತಿಳಿಸಿದೆ.
ಹೊಸದಾಗಿ ಕಾಣಿಸಿಕೊಂಡ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ ೪,೩೮ ಕೊಟಿಗೂ ಅಧಿಕವಾಗಿದ್ದು ಇಲ್ಲಿಯ ತನಕ ಚೇತರಿಸಿಕೊಂಡು ಬಿಡುಗಡೆಯಾದವರ ಸಂಖ್ಯೆ ೪,೩೪,೨೪,೦೨೯ಕ್ಕೆ ಹೆಚ್ಚಳವಾಗಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪,೦೩,೦೦೬ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯ ತನಕ ಒಟ್ಟು ೮೭.೬೭ ಕೋಟಿ ಜನರಿಗೆ ಪರೀಕ್ಷೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.