ಸೋಂಕು-ಸಾವು ಸಂಖ್ಯೆ ಇಳಿಕೆ


ನವದೆಹಲಿ ಮೇ.೨೮- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ದಿನನಿತ್ಯ ಹಾವು-ಏಣಿ ಆಟ ಮುಂದುವರಿಸಿದ್ದು ಕಳೆದ ಒಂದೂವರೆ ತಿಂಗಳ ಬಳಿಕ ಕಡಿಮೆ ಸೋಂಕು ಸಂಖ್ಯೆ ದೃಢಪಟ್ಟಿದ್ದು, ತುಸು ನಿಟ್ಟಿಸಿರು ಬಿಡುವಂತೆ ಮಾಡಿದೆ.ನಿನ್ನೆ ಸೋಂಕು ಮತ್ತು ಸಾವಿನ ಸಂಖ್ಯೆ ಏರಿಕೆಯಾಗಿತ್ತು. ಇಂದು ೨ ಲಕ್ಷಕ್ಕೂ ಕಡಿಮೆ ಸಂಖ್ಯೆಯಲ್ಲಿ ಧೃಡಪಟ್ಟಿದೆ. ಈ ಮೂಲಕ ಕಳೆದ ೪೪ ದಿನಗಳ ಬಳಿಕ ಸೋಂಕಿನ ಸಂಖ್ಯೆ ಕಡಿಮೆ ದಾಖಲಾಗಿದೆ.ಸದ್ಯ ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ. ೧೦.೪೨ ರಷ್ಟು ಇದ್ದು ಚೇತರಿಕೆ ಪ್ರಮಾಣ ೯೦.೩೪ ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ಹೊಸದಾಗಿ ೧,೮೬,೩೬೪ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ಅಲ್ಲದೆ ಸಾವಿನ ಸಂಖ್ಯೆ ೩,೬೬೦ ಸಂಖ್ಯೆ ದಾಖಲಾಗಿದೆ.ಸೋಂಕಿನಿಂದ ೨,೫೯,೪೫೯ ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಇಂದು ಬೆಳಗ್ಗೆ ೮ ಗಂಟೆ ತನಕ ಹೊಸದಾಗಿ ದೃಢಪಟ್ಟಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯತನಕ ದೇಶದಲ್ಲಿ ಒಟ್ಟಾರೆಯಾಗಿ ೨,೭೫,೫೫,೪೫೭ ಮಂದಿ ಸೋಂಕಿನ ಸಂಖ್ಯೆ ಏರಿಕೆಯಾಗಿದೆ.ಅಲ್ಲದೆ ೨,೨೪,೯೩,೪೧೦ ಮಂದಿಗುಣಮುಖರಾಗಿದ್ದಾರೆ. ಇಲ್ಲಿಯ ತನಕ ೩,೧೮,೮೯೫ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಸಕ್ರಿಯ ಪ್ರಕರಣ ಇಳಿಕೆ
ದೇಶದಲ್ಲಿ ನಿತ್ಯ ದಾಖಲಾಗುತ್ತಿರುವ ಕೊರೋನಾ ಸೋಂಕು ಸಂಖ್ಯೆಗಿಂತ ಚೇತರಿಕೆ ಪ್ರಮಾಣ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕುಸಿತ ಕಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.ಸದ್ಯ ದೇಶದಲ್ಲಿ ೨೩,೪೩,೧೫೨ ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿಗೆ ಕಳೆದ ಹಲವು ದಿನಗಳಿಂದ ಈ ಪ್ರಮಾಣ ದಿನನಿತ್ಯ ಗಣನೀಯವಾಗಿ ಕುಸಿತ ಕಂಡಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ
೨೦ಕೋಟಿ ದಾಟಿದ ಲಸಿಕೆ
ದೇಶದಲ್ಲಿ ಕೊರೋನಾ ಸೋಂಕಿನ ಲಸಿಕೆ ಅಭಾವದ ನಡುವೆಯೂ ೨೦ ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ನಿನ್ನೆ ಸಂಜೆಯತನಕ ದೇಶದಲ್ಲಿ ೨೦,೫೭,೨೦,೬೬೦ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದೆ
ಪರೀಕ್ಷೆ ಪ್ರಮಾಣ ಹೆಚ್ಚಳ
ದೇಶದಲ್ಲಿ ಕಳೆದ ಹಲವು ದಿನಗಳಿಂದ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಪ್ರಮಾಣವನ್ನು ಹೆಚ್ಚು ಮಾಡಲಾಗುತ್ತದೆ.ನಿನ್ನೆ ೨೦,೭೦,೫೦೮ ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ದೇಶದಲ್ಲಿ ಇರುವರೆಗೂ ೩೩,೯೦,೩೯,೮೬೧ ಮಂದಿಗೆ ಪರೀಕ್ಷೆ ನಡೆಸಲಾಗಿದೆ ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚು ಮಾಡಲಾಗುತ್ತದೆ ಎಂದು ಐಸಿಎಂಆರ್ ತಿಳಿಸಿದೆ.
೧೫ ದಿನದಿಂದ ಚೇತರಿಕೆ
ದೇಶದಲ್ಲಿ ಕಳೆದ ೧೫ ದಿನಗಳಿಂದ ಕೊರೊನಾ ಸೋಂಕಿನ ಚೇತರಿಕೆ ಪ್ರಮಾಣ ಸತತವಾಗಿ ಹೆಚ್ಚುತ್ತಿದೆ ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕುಸಿತ ಕಂಡಿದೆ.ಇಂದೂ ಕೂಡ ,೨.೫೯ ಲಕ್ಷ ಮಂದಿ ಚೇತರಿಕೆ ಕಂಡಿದ್ದಾರೆ. ಇದರಿಂದಾಗಿ ಚೇತರಿಕೆ ಪ್ರಮಾಣ ಹೆಚ್ಚಾಗಿದೆ.