ಸೋಂಕು-ಸಾವು ಗಣನೀಯ ಇಳಿಕೆ

ನವದೆಹಲಿ, ಮೇ ೨೯- ದೇಶದಲ್ಲಿ ಕಳೆದ ಹಲವು ದಿನಗಳಿಂದ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಸರಿ ಸುಮಾರು ೪೫ ದಿನಗಳ ಬಳಿಕ ಕಡಿಮೆ ಸೋಂಕು ಮತ್ತು ಸಾವಿನ ಸಂಖ್ಯೆ ದೃಢಪಟ್ಟಿದೆ.
ಜೊತೆಗೆ ಚೇತರಿಕೆ ಪ್ರಮಾಣ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದು ರಾಜ್ಯಗಳು ಮತ್ತು ಕೇಂದ್ರ ಸರ್ಕಾರಕ್ಕೆ ತುಸು ನೆಮ್ಮದಿ ನಿಟ್ಟಿಸಿರುವ ಬಿಡುವಂತಾಗಿದೆ.
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೧,೭೩,೭೯೦ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ.ಈ ಅವಧಿಯಲ್ಲಿ ೩,೬೧೭ ಮಂದಿ ಸಾವನ್ನಪ್ಪಿದ್ದಾರೆ.ಜೊತೆಗೆ ೨,೮೪,೬೦೧ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ಧಾರೆ.
ಇಂದು ಬೆಳಗ್ಗೆ ಹೊಸದಾಗಿ ದಾಖಲಾಗಿರುವ ಸೋಂಕು ಪ್ರಕರಣ ಸೇರಿದಂತೆ ಇಲ್ಲಿಯ ತನಕ ೨,೭೭,೨೯,೨೪೭ ಮಂದಿಗೆ ಸೋಂಕು ಏರಿಕೆಯಾಗಿದೆ.ಅಲ್ಲದೆ ಚೇತರಿಸಕೊಂಡವರ ಸಂಖ್ಯೆ ೨,೫೧,೭೮,೦೧೧ ಮಂದಿ ಗುಣಮುಖರಾಗಿದ್ಧಾರೆ. ದೇಶದಲ್ಲಿ ಇದುವರೆಗೆ ಸೋಂಕಿನಿಂದ ೩,೨೨,೫೧೨ ಮಂದಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ದಿನ ನಿತ್ಯ ಸೋಂಕಿನ ಸಂಖ್ಯೆ ನಾಗಾಲೋಟದಲ್ಲಿ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲೊ ಪ್ರಾಣವಾಯುವಾಗಿ ಹಾಹಾಕಾರ ಎದುರಾಗಿತ್ತು. ದೇಶದ ಅನೇಕ ರಾಜ್ಯಗಳ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗದೆ ಸೋಂಕಿತರು ಪ್ರಾಣ ಕಳೆದುಕೊಂಡಿದ್ದರು. ಮತ್ತೊಂದೆಡೆ ಹಾಸಿಗೆ,ಔಷಧ ಸಿಗದೆ ಸೋಂಕಿತರು ನರಳಾಡುವಂತಾಗಿದ್ದು ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣ ತುಸು ಕಡಿಮೆಯಾಗಿದೆ.
ಆದರೂ ಸಕ್ರಿಯ ಪ್ರಕರಣಗಳ ಸಂಖ್ಯೆ ೨೦ ಲಕ್ಷ ದಾಟಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರರಗಳಿಗೆ ಸೋಂಕು ನಿಗ್ರಹ ಮಾಡುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.


ಚೇತರಿಕೆ ಅಧಿಕ
ದಿನನಿತ್ಯ ಕೊರೊನಾ ಸೋಂಕಿನ ಚೇತರಿಕೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಚೇತರಿಕೆ ಪ್ರಮಾಣ ೯೦.೮೦ಕ್ಕೆ ಏರಿಕೆಯಾಗಿದೆ. ಸೋಂಕು ಹೆಚ್ಚಳದಿಂದ ಚೇತರಿಕೆ ಪ್ರಮಾಣ ಕುಸಿದಿತ್ತು.ಇದೀಗ ಅದರ ಪ್ರಮಾಣ ಹೆಚ್ಚಾಗುತ್ತಿದೆ.
ಸದ್ಯ ದೇಶದಲ್ಲಿ ದಿನ ನಿತ್ಯದ ಕೊರೊನ ಪಾಸಿಟೀವ್ ಪ್ರಕರಣ ಶೇ.೮.೩೬ ರಷ್ಟು ಇದ್ದು ಕಳೆದ ೫ ದಿನಗಳಿಂದ ಪ್ರತಿದಿನದ ಪಾಸಿಟೀವ್ ಪ್ರಕರಣ ಪ್ರತಿಶತ ಶೇ.೧೦ ರಷ್ಟಕ್ಕೂ ಕಡಿಮೆ ಇದೆ.
ಅಲ್ಲದೆ ವಾರದ ಪ್ರತಿಶತ ಸೋಂಕಿನ ಪ್ರಮಾಣ ಶೇ.೯.೮೪ ರಷ್ಟು ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
೨೨.೨೮ ಲಕ್ಷ ಸಕ್ರಿಯ ಪ್ರಕರಣ
ದೇಶದಲ್ಲಿ ೩೦ ಲಕ್ಷ ಗಡಿ ದಾಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ ದಿನ ನಿತ್ಯ ಸೋಂಕಿನ ಚೇತರಿಕೆ ಪ್ರಮಾಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಕ್ರಿಯ ಪ್ರಕರಣ ಗಣನೀಯವಾಗಿ ಕುಸಿತಕಂಡಿದೆ.
ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೨೨,೨೮,೭೨೪ ಮಂದಿಗೆ ಸಕ್ರಿಯ ಪ್ರಕರಣ ಇದೆ, ಜೊತೆಗೆ ದೇಶದಲ್ಲಿ ಇದುವರೆಗೆ ೨೦,೮೯,೦೨,೪೪೫ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕೊರೊನಾ ಸೋಂಕು ಪತ್ತೆ ಸಂಖ್ಯೆಯೂ ನಿತ್ಯ ಹೆಚ್ಚಾಗುತ್ತಿದೆ, ನಿನ್ನೆ ಒಂದೇ ದಿನ ೨೦,೮೦,೦೪೮ ಮಂದಿಗೆ ಪರೀಕ್ಷೆ ಮಾಡಲಾಗಿದ್ದು ಇದುವರೆಗೆ ದೇಶದಲ್ಲಿ ೩೪,೧೧,೧೯,೯೦೯ ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.