ಸೋಂಕು ವುಹಾನ್ ಲ್ಯಾಬ್‌ನಿಂದಲೇ ಸೋರಿಕೆ

ವಾಷಿಂಗ್ಟನ್,ಜೂ.೮-ಚೀನಾದ ವುಹಾನ್ ಪ್ರಾಂತ್ಯದಿಂದಲೇ ಮಾರಕ ಕೊರೊನಾ ಸೋಂಕು ಸೋರಿಕೆಯಾಗಿದೆ ಎಂಬ ಅಂಶವನ್ನು ಅಮೆರಿಕದ ಸರ್ಕಾರದ ಪ್ರಯೋಗಾಲಯ ಸಮರ್ಥಿಸಿಕೊಂಡಿದ್ದು, ಇದು ಹೆಚ್ಚಿನ ತನಿಖೆಗೆ ಅರ್ಹವಾಗಿದೆ ಎಂದು ಹೇಳಿರುವುದನ್ನು ಉಲ್ಲೇಖಿಸಿ ವಾಲ್ ಸ್ಟ್ರೀಟ್ ನಿಯತಕಾಲಿಕ ವರದಿ ಮಾಡಿದೆ.
ವರ್ಗೀಕರಿಸಿದ ಜನರನ್ನು ಉಲ್ಲೇಖಿಸಿ ಸಾಕ್ಷಚಿತ್ರದ ಈ ಅಧ್ಯಯನವನ್ನು ಮೇ ೨೦೨೦ರಲ್ಲಿ ಕ್ಯಾಲಿಫೋರ್ನಿಯಾದ ಲಾರೆನ್ಸ್ ಲಿವರ್ ಮೋರ್ ರಾಷ್ಟ್ರೀಯ ಪ್ರಯೋಗಾಲಯ ಸಿದ್ಧಪಡಿಸಿತ್ತು. ಆದರೆ ಡೊನಾಲ್ಡ್ ಟ್ರಂಪ್ ಆಡಳಿತದ ಅಂತಿಮ ತಿಂಗಳುಗಳಲ್ಲಿ ಸಾಂಕ್ರಾಮಿಕ ಮೂಲದ ಬಗ್ಗೆ ತನಿಖೆಗೆ ಒಳಪಡಿಸಿದೆ ಎಂದು ವರದಿ ತಿಳಿಸಿದೆ.
ಲಾರೆನ್ಸ್ ಲಿವರ್‌ಮೋರ್ ಅವರ ಮೌಲ್ಯಮಾಪನವು ಕೋವಿಡ್ ೧೯ ಸೋಂಕಿನ ಜೀನೋಮಿಕ್ ಸೆಳೆದಿದೆ ಎಂದು ನಿಯತಕಾಲಿಕ ವರದಿ ಮಾಡಿದ್ದು ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಲಿವರ್ ಮೋರ್ ನಿರಾಕರಿಸಿದ್ದಾರೆ.
ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೊರೊನಾ ಸೋಂಕಿನ ಉಗಮವನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಅದೇಶ ನೀಡಿದ್ದರು.
ಅಮೆರಿಕ ಗುಪ್ತಚರ ಸಂಸ್ಥೆಗಳು ಎರಡು ಸಂಭವನೀಯ ಸನ್ನಿವೇಶಗಳನ್ನು ಪರಿಗಣಿಸಿದ್ದು, ಸೋಂಕು ವುಹಾನ್ ಪ್ರಾಂತ್ಯದ ಪ್ರಯೋಗಾಲಯದಿಂದ ಉಂಟಾಗಿದೆ ಇಲ್ಲವೆ ಪ್ರಾಣಿಯೊಂದಿಗಿನ ಸಂಪರ್ಕದಿಂದ ಹೊರಹೊಮ್ಮಿದೆ. ಆದರೆ ಈ ಬಗ್ಗೆ ನಿರ್ದಿಷ್ಟ ತೀರ್ಮಾನಕ್ಕೆ ಬಂದಿಲ್ಲ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ವೇಳೆ ಅಮೆರಿಕ ಗುಪ್ತಚರ ವರದಿಯ ಅನುಸಾರ ಚೀನಾದ ವುಹಾನ್ ಪ್ರಾಂತ್ಯದಲ್ಲಿರುವ ವುಹಾನ್ ಇನ್ಸಿಟಿಟ್ಯೂಟ್ ಆಫ್ ವೈರಾಲಜಿಯ ಮೂವರು ಸಂಶೋಧಕರು ೨೦೧೯ ನವೆಂಬರ್‌ನಲ್ಲಿ ಅನಾರೋಗ್ಯಕ್ಕೀಡಾಗಿದ್ದರು ಎಂದು ಆರೋಪಿಸಿದ್ದರು. ಹೀಗಾಗಿ ಆಸ್ತತ್ರೆ ದಾಖಲಾಗಲು ಅನುಮತಿ ಕೋರಿದ್ದಾರೆ ಎಂದು ಅಮೆರಿಕ ಮೂಲಗಳು ತಿಳಿಸಿವೆ.
ಈ ಬಗೆಗಿನ ಪ್ರತಿಕ್ರಿಯೆಗಳು ಸೋಂಕಿನ ಮೂಲದ ಮೇಲೆ ಪಾರದರ್ಶಕತೆಯ ಕೊರತೆಯಿದೆ ಎಂದು ಅಮೆರಿಕ ಅಧಿಕಾರಿಗಳನ್ನು ಮಾಡಿರುವ ಆರೋಪಗಳನ್ನು ಚೀನಾ ನಿರಾಕರಿಸಿದೆ.
ಒಟ್ಟಾರೆ ವುಹಾನ್ ಪ್ರಯೋಗಾಲಯದಿಂದಲೇ ಕೊರನಾ ಸೋಂಕು ಹರಡಲು ಸಾಕಷ್ಟು ಪುರಾವೆಗಳಿದ್ದರೂ ಚೀನಾ ಮಾತ್ರ ಈ ಆರೋಪಗಳನ್ನು ಒಪ್ಪಿಕೊಳ್ಳದೆ ಮೊಂಡಾಟ ಪ್ರದರ್ಶಿಸುತ್ತಿದೆ.