ಸೋಂಕು ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ


ಧಾರವಾಡ, ಜೂ 5: ಕೋವಿಡ್‍ನಿಂದ ದೇಶ ಹಾಗೂ ರಾಜ್ಯ ತತ್ತರಿಸಿದೆ. ಈ ಸೋಂಕು ನಿರ್ಮೂಲನೆಗೆ ಲಸಿಕೆ ಒಂದೇ ಮದ್ದು. ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಂಡು ಸೋಂಕು ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಸಿವಿಲ್ ನ್ಯಾಯಾಧೀಶ ಚಿನ್ನಣ್ಣವರ್ ಆರ್.ಎಸ್. ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ, ಲಯನ್ಸ್ ಕ್ಲಬ್ ಧಾರವಾಡ ಗ್ಯಾಲಾಕ್ಷಿ, ವಿಕಲಚೇತನರ ಜಿಲ್ಲಾ ಒಕ್ಕೂಟ, ಇಲ್ಲಿನ ಅಂಜುಮನ್ ಸಂಸ್ಥೆಯಲ್ಲಿ ಹಮ್ಮಿಕೊಂಡ ವಿಕಲಚೇತನರಿಗೆ ಲಸಿಕೆ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ವಿಕಲಚೇತನರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ನ್ಯಾಯಾಲಯವು ಈಗಾಗಲೇ ಆದೇಶ ಮಾಡಿದೆ. ಇವರಿಗೆ ಹೆಚ್ಚು ಕಾಯಿಸಿದೇ ನೇರವಾಗಿ ಲಸಿಕೆ ನೀಡಬೇಕು. ಫಲಾನುಭವಿಗಳು ಜಿಲ್ಲಾಸ್ಪತ್ರೆಗೆ ಅಥವಾ ಆರೋಗ್ಯ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.
ಭಾರತಕ್ಕೆ ವರ್ಷದಿಂದ ಹಿಂದೆ ದಾಂಗುಡಿ ಇಟ್ಟ ಕೋವಿಡ್‍ನಿಂದ ಅನೇಕ ಸಾವು-ನೋವುಗಳು ಸಂಭವಿಸಿವೆ. ತಂದೆ-ತಾಯಿ ಹಾಗೂ ಪೆÇೀಷಕರನ್ನು ಕಳೆದುಕೊಂಡ ಅದೇಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಇಂಥವರ ಭವಿಷ್ಯ ನಿರ್ಮಾಣ್ಕಕೆ ಸರ್ವರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಎನ್.ಮೂಲಿಮನಿ, ಆರೋಗ್ಯ ಇಲಾಖೆ ಸಹಾಯ, ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಅಂಗವಿಕಲರಿಗೆ ಕೋವಿಡ್ ನಿರೋಧಕ ಲಸಿಕೆ ಹಾಕುವ ಕಾರ್ಯ ನಡೆದಿದೆ. ಮುಂದೆ ವಾರ್ಡ್‍ವಾರು ಲಸಿಕೆ ಹಾಕುವ ಯೋಜನೆ ಹಮ್ಮಿಕೊಳ್ಳಲಿದೆ ಎಂದರು.
ಲಯನ್ಸ್ ಕ್ಲಬ್ ಧಾರವಾಡ ಗ್ಯಾಲಾಕ್ಷಿ ಅಧ್ಯಕ್ಷ ಡಾ. ಎಂ.ಎ.ಮುಮ್ಮಿಗಟ್ಟಿ, ಜೀವರಕ್ಷಣೆಗೆ ಲಸಿಕೆ ಸಂಜೀವಿನಿ. ಎಲ್ಲರು ನಿರ್ಭಯವಾಗಿ ಲಸಿಕೆ ಹಾಕಿಸಿಕೊಳ್ಳಬಹುದು. ಆದರೆ, ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುವ ವಿಕಲಚೇತನರು ವೈದ್ಯರ ಸಲಹೆ ಮೇರೆಗೆ ಲಸಿಕೆ ಪಡೆಯಬೇಕು ಎಂದರು.
ವಿಕಲಚೇನತರ ಒಕ್ಕೂಟದ ಜಿಲ್ಲಾಧ್ಯಕ್ಷ ಕೇಶವ ತೆಲಗು, ಕೋವಿಡ್ ನಿರೋಧಕ ಲಸಿಕೆ ಬಗ್ಗೆ ಬಹಳಷ್ಟು ವಿಕಲಚೇತನರಲ್ಲಿ ತಪ್ಪು ಅಭಿಪ್ರಾಯವಿದೆ. ಲಸಿಕೆಯಿಂದ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ಹೀಗಾಗಿ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಕೆ ಬೇಡ ಎಂದು ಕಿವಿಮಾತು ಹೇಳಿದರು.
ಆರೋಗ್ಯ ಇಲಾಖೆಯ ಸಿಬ್ಬಂದಿ ಧಾರವಾಡ, ನವಲೂರು, ಸತ್ತೂರು, ಸುತಗಟ್ಟಿ, ಎತ್ತಿನಗುಡ್ಡ, ಗೋವನಕೊಪ್ಪ ಸೇರಿ ಸುಮಾರು 100ಕ್ಕೂ ಅಧಿಕ ವಿಕಲಚೇತನರಿಗೆ ಲಸಿಕೆ ಹಾಕಿದರು.
ಡಾ. ವಿಜಯಲಕ್ಷ್ಮೀ, ಎಂ.ಎಸ್. ಮುಳಮುತ್ತಲ, ಪ್ರವೀಣ ಬೆಳವಟ್ಟಿ, ಬಸಂತಿ ಹಂಪ್ಪಳದ, ವಿಕಲಚೇನತರ ಒಕ್ಕೂಟದ ಗೌರವಾಧ್ಯಕ್ಷ ಮಹ್ಮದಗೌಸ್ ಕಳಸಾಪೂರ, ಮಹಿಳಾ ಉಪಾಧ್ಯಕ್ಷೆ ಮಂಗಳಾ ಬೆಟಗೇರಿ, ಬಸವರಾಜ ಉಪ್ಪಾರ, ಶ್ರೀಶೈಲ ಸವದತ್ತಿ, ಸಂತೋಷ ಹಿರೇಮಠ ಇದ್ದರು.