ಸೋಂಕು ಮತ್ತೆ ಹೆಚ್ಚಳ- ಸರ್ಕಾರಕ್ಕೆ ಆತಂಕ

ನವದೆಹಲಿ, ಮೇ ೨೦- ಕಳೆದ ಕೆಲವು ದಿನಗಳಿಂದ ಕಡಿಮೆಯಾಗಿದ್ದ ಕೋರೊನಾ ಸೋಂಕಿನ ಪ್ರಕರಣ ಇಂದು ಹೆಚ್ಚಾಗಿದೆ. ಜೊತೆಗೆ ಒಂದು ವಾರಕ್ಕೂ ಅಧಿಕ ಸಮಯದಿಂದ ಸತತ ನಾಲ್ಕು ಸಾವಿರಕ್ಕೂ ಹೆಚ್ಚಾಗುತ್ತಿದ್ದ ಸಾವಿನ ಸಂಖ್ಯೆ ಇದಿಗ ನಾಲ್ಕು ಸಾವಿರಕ್ಕೂ ಕಡಿಮೆ ದಾಖಲಾಗಿದೆ.
ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಸಾಂಗ್ ಮತ್ತು ಸಾವಿನ ಸಂಖ್ಯೆ ಹಾವು-ಏಣಿಯಾಟ ಆಡುತ್ತಿದ್ದು ಇದರಿಂದಾಗಿ ಕೆಲವು ದಿನ ಸಾವಿನ ಸಂಖ್ಯೆ ಏರಿಕೆ ಆದರೆ ಮತ್ತೆ ಕೆಲವು ದಿನಗಳ ಸಂಖ್ಯೆ ಏರಿಕೆಯಾಗುತ್ತಿದೆ.
ಸಾವು ಮತ್ತು ಸೋಂಕು ಸಂಖ್ಯೆ ಹೆಚ್ಚಾಗುತ್ತಿರುವುದು ಕೇಂದ್ರ ರಾಜ್ಯ ಸರ್ಕಾರಗಳನ್ನು ಮತ್ತು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ರೋಗಿಗಳಿಗೆ ಆಸ್ಪತ್ರೆಯಲ್ಲಿ ಆಮ್ಲಜನಕ ,ಹಾಸಿಗೆ, ಔಷಧಿ ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯ ಸಿಗದೆ ಪರದಾಡುವ ಸ್ಥಿತಿ ಕಡಿಮೆಯಾಗಿಲ್ಲ
೨.೭೬ ಲಕ್ಷ ಮಂದಿಗೆ ಸೋಂಕು:
ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೨,೭೬,೦೭೦ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು ೩,೮೭೪ ಮಂದಿ ಸಾವನ್ನಪ್ಪಿದ್ದಾರೆ. ಈ ಅವಧಿಯಲ್ಲಿ ೩,೬೯,೦೭೭ ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕಿನಿಂದ ಇದುವರೆಗೂ ಒಟ್ಟಾರೆಯಾಗಿ ೨,೫೭,೭೨,೪೦೦ ಮಂದಿಗೆ ಸೋಂಕು ಏರಿಕೆಯಾಗಿದೆ. ಇಂದು ಚೇತರಿಸಿಕೊಂಡವರ ಸಂಖ್ಯೆ ಸೇರಿದಂತೆ ಇಲ್ಲಿಯತನಕ ಸೋಂಕಿನಿಂದ ಗುಣಮುಖರಾದರ ಸಂಖ್ಯೆ ೨,೨೩,೫೫,೪೪೦ಕ್ಕೆ ಹೆಚ್ಚಾಗಿದೆ.
ಇಂದು ಹೊಸದಾಗಿ ಮೃತಪಟ್ಟಿರುವವರು ಸೇರಿದಂತೆ ಇಲ್ಲಿಯತನಕ ಸೋಂಕಿನಿಂದ ೨,೮೭,೧೨೨ ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

೩೧.೨೯ ಲಕ್ಷ ಸಕ್ರಿಯ ಪ್ರಕರಣ:
ದೇಶದಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಹೊಸದಾಗಿ ದಾಖಲಾಗುತ್ತಿರುವ ಸೋಂಕು ಪ್ರಕರಣಗಳಿಗಿಂತ ಚೇತರಿಕೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಏರಿಕೆ ತುಸು ಕಡಿಮೆಯಾಗಿದೆ.
ಸದ್ಯ ದೇಶದಲ್ಲಿ ೩೧,೨೯,೮೭೮ ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿಗೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಜನವರಿ ೧೬ ರಿಂದ ಆರಂಭವಾದ ಲಸಿಕಾ ಅಭಿಯಾನ ಇಲ್ಲಿಯತನಕ ೧೮,೭೦,೦೯,೭೯೨ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

೩೨.೨೩ ಕೋಟಿಗೆ ಪರೀಕ್ಷೆ:
ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಹೆಚ್ಚಾಗುತ್ತಿರುವ ನಡುವೆಯೇ ದೇಶದಲ್ಲಿ ಇಲ್ಲಿಯತನಕ ಒಟ್ಟಾರೆಯಾಗಿ ೩೨ ಕೋಟಿಗೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ
ನಿನ್ನೆ ಸಂಜೆ ೨೦,೫೫,,೦೧೦ ಮಂದಿಗೆ ಪರೀಕ್ಷೆ ಮಾಡಲಾಗಿದ್ದು ಇದುವರೆಗೂ ಒಟ್ಟಾರೆಯಾಗಿ ೩೨,೨೩,೫೬,೧೮೭ ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.