ಸೋಂಕು ಮತ್ತಷ್ಟು ಹೆಚ್ಚಳ

ನವದೆಹಲಿ,ಜೂ,೨೩- ದೇಶದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿದೆ. ನಿನ್ನೆ ದಾಖಲಾಗಿದ್ದಕ್ಕಿಂತ ಇಂದು ಮತ್ತಷ್ಟು ಏರಿಕೆಯಾಗಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೩,೩೧೩ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೩೮ ಮಂದಿ ಸಾವನ್ನಪ್ಪಿದ್ದಾರೆ.ಇದೇ ವೇಳೆ ೧೦,೯೭೨ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಸೋಂಕು ಏರಿಕೆ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಸದ್ಯ ಈ ಪ್ರಕರಣ ೮೩,೯೯೦ ಮಂದಿಗೆ ಏರಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆತಂಕಕ್ಕೆ ಗುರಿ ಮಾಡಿದೆ.
ದೇಶದಲ್ಲಿ ಸೋಂಕು ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಒಟ್ಟು ಸೋಂಕು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ ೪,೩೩ ಕೋಟಿಗೆ ಏರಿಕೆಯಾಗಿದೆ. ಜೊತೆಗೆ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾದವರ ಸಂಖ್ಯೆ ೪,೨೭,೩೬,೦೨೭ಕ್ಕೆ ಹೆಚ್ಚಳವಾಗಿದೆ.
ಇದುವರೆಗೂ ೮೫ ಕೋಟಿಗೂ ಅಧೀಕ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಇಲ್ಲಿಯ ತನಕ ಸೋಂಕಿನಿಂದ ೫,೨೪,೯೪೧ ಮಂದಿಗೆ ಹೆಚ್ಚಳವಾಗಿದೆ.
ದೇಶದಲ್ಲಿ ನಿನ್ನೆಗಿಂತ ಇಂದು ೨,೩೦೩ ಮಂದಿಗೆ ಸೋಂಕು ಹೆಚ್ಚಳವಾಗಿದ್ದು ಒಟ್ಟಾರೆ ಸೋಂಕಿನ ಪ್ರತಿಶತ ಪ್ರಮಾಣ ಶೇ.೦೧೯ ರಷ್ಟು ಇದೆ ಎಂದು ಸಚಿವಾಲಯ ಹೇಳಿದೆ.
ದಿನದ ಪಾಸಿಟಿವಿ ಪ್ರಮಾಣ ಶೇ.೨.೦೩ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣವೂ ಹೆಚ್ಚಳವಾಗಿದೆ. ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೬,೫೬,೪೧೦ ಮಂದಿಗೆ ಸೋಂಕು ಮತ್ತೆ ಪರೀಕ್ಷೆ ಮಾಡಿದ್ದು ಇಲ್ಲಿಯ ತನಕ ೮೫ ಕೋಟಿಗೂ ಅಧಿಕ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.