ಸೋಂಕು ಮತ್ತಷ್ಟು ಹೆಚ್ಚಳ

ನವದೆಹಲಿ, ಜು.೧೫- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ನಿತ್ಯ ಏರಿಕೆಯಾಗುತ್ತಿದ್ದು ಸತತ ಎರಡನೇ ದಿನವೂ ೨೦ ಸಾವಿರ ಗಡಿ ದಾಟಿದ್ದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಹೊಸದಾಗಿ ೨೦,೦೩೮ ಮಂದಿಯಲ್ಲಿ ಸೋಂಕು ಕಳೆದ ೨೪ ಗಂಟೆಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ೧೬,೯೯೪ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
ಜೊತೆಗೆ ಇದೇ ಅವಧಿಯಲ್ಲಿ ೪೭ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೧,೩೯,೦೭೩ ಮಂದಿಗೆ ಏರಿಕೆಯಾಗಿದೆ. ಇದರಿಂದ ದಿನದಿಂದ ದಿನಕ್ಕೆ ಒಟ್ಟು ಸೋಂಕಿನ ಸಂಖ್ಯೆ ಶೇಕಡಾವಾರು ೪.೪೪ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಹೊಸದಾಗಿ ಕಾಣಿಸಿಕೊಂಡ ಸೋಂಕು ಸೇರಿದಂತೆ ಇಲ್ಲಿಯ ತನಕ ೪.೩೪ ಕೋಟಿಗೆ ಏರಿಕೆಯಾಗಿದೆ.
ಇಲ್ಲಿಯ ತನಕ ೪,೩೦,೪೫,೩೫೦ ಮಂದಿ ಚೇತರಿಸಿಕೊಂಡು ಬಿಡುಗಡೆ ಯಾಗಿದ್ದಾರೆ. ಜೊತೆಗೆ ೫,೨೫,೬೦೧ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಹೊಸದಾಗಿ ೧೧,೯೨,೦೬೯ ಡೋಸ್, ಲಸಿಕೆ ನೀಡಿದಲಾಗಿದ್ದು ಇಲ್ಲಿಯ ತನಕ ೧೯೯,೧೧,೩೪,೦೦೪ ಡೋಸ್ ಲಸಿಕೆ ನೀಡಲಾಗಿದೆ. ಇದೇ ಅವಧಿಯಲ್ಲಿ ೪,೫೦,೮೨೦ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯ ತನಕ ೮೬,೮೬ ಕೋಟಿಗೆ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ದಿನದ ಪಾಸಿಟಿವಿಟಿ ಪ್ರಮಾಣ ಶೇ. ೪.೪೪ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ. ೪.೩೦ ರಷ್ಟು ಇದೆ. ಅಲ್ಲದೆ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ.೦.೩೨ ರಷ್ಟು ಏರಿಕೆಯಾಗಿದೆ.
ಸೋಂಕು ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚೇತರಿಕೆಯ ಒಟ್ಟು ಪ್ರಮಾಣ ಶೇ ೯೪,೪೮ಕ್ಕೆ ಏರಿಕೆ ಇಳಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.