ಸೋಂಕು ಮತ್ತಷ್ಟು ಇಳಿಕೆ

ನವದೆಹಲಿ.ಸೆ.೫- ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ಇಳಿಕೆಯಾಗುತ್ತಿದ್ದು ಇಂದು ಮತ್ತಷ್ಟು ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಸೋಂಕು ಸಂಖ್ಯೆಯ ಇಳಿಕೆಯ ಜೊತೆಯೇ ಚೇತರಿಕೆ ಸಂಖ್ಯೆ ಅಧಿಕವಾಗಿದೆ.ದೇಶದಲ್ಲಿ ಹೊಸದಾಗಿ ೫,೯೧೦ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ೭,೦೩೪ ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯ ತನಕ ಚೇತರಿಸಿಕೊಂಡವರ ಒಟ್ಟು ಸಂಖ್ಯೆ ೪,೩೮,೮೦,೪೬೪ಕ್ಕೆ ಹೆಚ್ಚಳವಾಗಿದೆ, ಅಲ್ಲದೆ ಚೇತರಿಕೆ ಪ್ರಮಾಣ ಶೇ.೯೮.೬೯ಕ್ಕೆ ಅಧಿಕವಾಗಿದೆ ಎಂದು ತಿಳಿಸಲಾಗಿದೆ.
ಸೋಂಕು ಇಳಿಕೆಯಾಗಿ ಚೇತರಿಕೆ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಶೇಕಡಾವಾರು ಸಂಖ್ಯೆ ಶೇ.೦.೧೨ಕ್ಕೆ ಕುಸಿದಿದೆ, ದೇಶದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ ೫೩,೯೭೪ ಮಂದಿಯಲ್ಲಿ ಇದೆ ಎಂದು ತಿಳಿಸಲಾಗಿದೆ.ಹೊಸದಾಗಿ ೩೨,೩೧,೮೯೫ ಡೋಸ್ ಲಸಿಕೆ ನೀಡಲಾಗಿದ್ದು ಇಲ್ಲಿಯವರೆಗೆ ೨೧೩,೫೨,೭೪,೯೪೫ ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿಯಲ್ಲಿ ತಿಳಿಸಿದೆ.ಹೊಸದಾಗಿ ಕಾಣಿಸಿಕೊಂಡ ಸಾವು ಸೇರಿದಂತೆ ಇಲ್ಲಿಯ ತನಕ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ೫,೨೮,೦೦೭ಕ್ಕೆ ಹೆಚ್ಚಳಾಗಿದೆ ಎಂದು ಹೇಳಲಾಗಿದೆ.
ದಿನದ ಪಾಸಿಟಿವಿಟಿ ಪ್ರಮಾಣ ಶೇ.೨.೬೦ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ.೨.೧೫ ರಷ್ಟು ಇದೆ. ದೇಶದಲ್ಲಿ ಹೊಸದಾಗಿ ೨,೨೭,೩೧೩ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇದುವರೆಗೂ ೮೮.೭೩ ಕೋಟಿ ಜನರಿಗೆ ಪರೀಕ್ಷೆ ಮಾಡಲಾಗಿದೆ ಎಂದು ಸಚಿವಾಲ ತಿಳಿಸಿದೆ.