ಸೋಂಕು ಬೆಂಗಳೂರಿಗೆ ೭ನೇ ಸ್ಥಾನ


ನವದೆಹಲಿ,ಮಾ.೨೫- ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕಿನ ೨ನೇ ಹಂತದ ಭೀತಿ ಎದುರಾಗಿರುವಾಗಲೇ ದೇಶದಲ್ಲಿ ಸಕ್ರಿಯೆ ಪ್ರಕರಣಗಳ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರುನಗರ ೭ನೇ ಸ್ಥಾನದಲ್ಲಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ದೇಶದಲ್ಲಿನ ಪ್ರಸಕ್ತ ಕೋವಿಡ್ ಪರಿಸ್ಥಿತಿ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಅಜಯ್ ಭೂಷಣ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
೧೦ ಜಿಲ್ಲೆಗಳ ಪಟ್ಟಿಯಲ್ಲಿ ೯ ಜಿಲ್ಲೆಗಳು ಮಹಾರಾಷ್ಟ್ರಕ್ಕೆ ಸೇರಿದೆ. ಬೆಂಗಳೂರು ನಗರ ಜಿಲ್ಲೆ ೭ನೇ ಸ್ಥಾನದಲ್ಲಿದೆ ಎಂದು ಅವರು ವಿವರಿಸಿದರು. ಬೆಂಗಳೂರು ನಗರದಲ್ಲಿ ನಿನ್ನೆ ೧೩೯೮ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ೧೧,೫೨೦ಕ್ಕೆ ಏರಿಕೆಯಾಗಿದೆ.
ಕಳೆದ ವರ್ಷ ಅಕ್ಟೋಬರ್ ೧೧ರ ವೇಳೆಗೆ ೬೬,೮೫೪ ರಿಂದ ಜನವರಿ ತಿಂಗಳಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೪ಸಾವಿರಕ್ಕೆ ಇಳಿಕೆಯಾಗಿತ್ತು, ವೈರಾಣುಪೀಡಿತರ ಸಂಖ್ಯೆ ದ್ವಿಗುಣವಾಗುತ್ತಿದ್ದು, ೨ನೇ ಹಂತದ ಸುಳಿವು ನೀಡಿದೆ.
ಮಾ. ೧೫ ರಂದು ೬,೪೫೪ ಪ್ರಕರಣಗಳು ವರದಿಯಾಗಿದ್ದರೆ, ಮೊನ್ನೆಯವರೆಗೂ ಪ್ರಕರಣಗಳ ಸಂಖ್ಯೆ ೧೧,೫೨೦ಕ್ಕೆ ಏರಿಕೆಯಾಗಿದೆ.ಮತ್ತೊಂದು ಅಚ್ಚರಿಯ ವಿಷಯವೆಂದರೆ ಬೆಂಗಳೂರು ನಗರದಲ್ಲಿ ಚೇತರಿಕೆ ಪ್ರಕರಣಗಳು ಕಡಿಮೆಯಾಗುತ್ತಿದೆ. ಮಾ. ೧೫ ರಂದು ಶೇ. ೯೭.೩೩ ರಷ್ಟಿದ್ದ ಚೇತರಿಕೆ ಪ್ರಮಾಣ ಈಗ ೯೬.೧೮ಕ್ಕೆ ಇಳಿಕೆಯಾಗಿದೆ.