ಸೋಂಕು ಬಳಿಕ ಕಲಿಕೆ ಮಟ್ಟ ಕುಸಿತ

ನವದೆಹಲಿ,ಜ.೧೯-ದೇಶದಲ್ಲಿ ಕೋವಿಡ್ ಸೋಂಕಿನ ನಂತರ, ವಿದ್ಯಾರ್ಥಿಗಳ ಸಂಖ್ಯೆ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದೆ ಆದರೆ ಕಲಿಕೆಯಲ್ಲಿ ದೊಡ್ಡ ಮಟ್ಟದಲ್ಲಿ ಕುಸಿತವಾಗಿದೆ ಎಂದು ಅಧ್ಯಯನ ಮಾಹಿತಿ ನೀಡಿದೆ.

ದೆಹಲಿಯಲ್ಲಿ ಬಿಡುಗಡೆಯಾದ ೧೭ನೇ ಎಎಸ್‌ಇಆರ್ ವರದಿಯ ಪ್ರಕಾರ, ಸಾಂಕ್ರಾಮಿಕ ರೋಗ ಕಡಿಮೆಯಾಗುತ್ತಿದ್ದಂತೆ, ೨೦೨೨ ರಲ್ಲಿ ಶೇ.೯೮.೪ ರಷ್ಟು ೬ರಿಂದ ೧೪ ವಯೋಮಾನದ ಮಕ್ಕಳಲ್ಲಿ ಶಾಲಾ ದಾಖಲಾತಿ ಗಣನೀಯವಾಗಿ ಏರಿಕೆಯಾಗಿದೆ ಎಂದು ತಿಳಿಸಿದೆ.

೨೦೧೮ ರಲ್ಲಿ ಶಾಲೆಗೆ ದಾಖಲಾಗಿದ್ದ ಮಕ್ಕಳ ಸಂಖ್ಯೆಗಿಂತ ಅಧಿಕವಾಗಿದೆ. ಆ ವರ್ಷ ಶೇ. ೯೭.೨ ರಷ್ಟು ಮಕ್ಕಳ ಸಂಖ್ಯೆ ಹೆಚ್ಚಾಗಿತ್ತಿತ್ತು ಎಂದು ಸಮೀಕ್ಷಾ ವರದಿ ತಿಳಿಸಿದೆ.

ದೇಶದ ೬೧೬ ಜಿಲ್ಲೆಗಳ ೧೯,೦೬೦ ಹಳ್ಳಿಗಳಲ್ಲಿ ೭ ಲಕ್ಷ ಮಕ್ಕಳನ್ನು ಅಧ್ಯಯನ ಸಮೀಕ್ಷೆಗೆ ಒಳಪಡಿಸಿತ್ತು.ಅದರಲ್ಲಿ ಈ ವಿಷಯ ಬಹಿರಂಗಗೊಂಡಿದೆ.

ಮಕ್ಕಳನ್ನು ಶಾಲೆಗಳಿಂದ ಹೊರಗಿಡುವ ಸಾಂಕ್ರಾಮಿಕ-ಪ್ರೇರಿತ ಶಾಲಾ ಸ್ಥಗಿತದ ಎರಡು ವರ್ಷಗಳ ನಂತರ, ೨೦೨೨ ರ ವಾರ್ಷಿಕ ಶಿಕ್ಷಣ ಸ್ಥಿತಿ ವರದಿ ಒಳ್ಳೆಯ ಸುದ್ದಿ ಮತ್ತು ಕೆಟ್ಟದ್ದನ್ನು ಎರಡನ್ನೂ ನೀಡಿದೆ.

ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ಮತ್ತು ಸ್ಥಳಾಂತರ ಶಾಲೆಯಿಂದ ಮಕ್ಕಳು ಹೊರಗುಳಿಯಲು ಕಾರಣವಾಗಿತ್ತು. ಡ್ರಾಪ್‌ಔಟ್‌ಗಳಿಗೆ ಕಾರಣವಾಗುತ್ತದೆ ಎಂಬ ಭಯದ ನಡುವೆ ಮಕ್ಕಳು ೨೦೨೨ ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಮರಳಿದ್ದಾರೆ ಎಂದು ಅಧ್ಯಯನದಲ್ಲಿ ತಿಳಿಸಿದೆ.

, ನಿರೀಕ್ಷೆಯಂತೆ, ಈ ಅಡಚಣೆ ಹೆಚ್ಚಿನ ಕಲಿಕೆಯ ಮಟ್ಟದಲ್ಲಿ ದೊಡ್ಡ ಕುಸಿತಕ್ಕೆ ಕಾರಣವಾಯಿತು. ರಾಜ್ಯಗಳು, ಸರ್ಕಾರಿ ಮತ್ತು ಖಾಸಗಿ ಎರಡರಲ್ಲೂ
ಶಾಲೆಗಳು ಮತ್ತು ಹುಡುಗಿಯರು ಮತ್ತು ಹುಡುಗರಿಗಾಗಿ ಕಲಿಕೆ ಮಟ್ಟ ಕುಸಿತ ಕಂಡಿದೆ ಎಂದು ತಿಳಿಸಲಾಗಿದೆ.