ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ವಿಫಲ

ಮೈಸೂರು,ಏ.29:- ಕೋವಿಡ್ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ, ಸಚಿವ ಎಸ್.ಟಿ.ಸೋಮಶೇಖರ್ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಆರೋಪಿಸಿದರು.
ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ಒಟ್ಟು ಜನಸಂಖ್ಯೆ 1 ಕೋಟಿ 20ಲಕ್ಷ, ಆ ಒಂದು ಕೋಟಿ 20ಲಕ್ಷದಲ್ಲಿ 20 ಪರ್ಸೆಂಟ್ ಜನರಿಗೆ ಕೊರೋನಾ ಸೋಂಕು ಅಂದರೆ 24ಲಕ್ಷ ಜನರಿಗೆ ಸೋಂಕಿದೆ ಎಂದು ಅರ್ಥ, ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಿಂದ ಜಾಗ ಬಿಟ್ಟಿರುವವರು ಸಂಖ್ಯೆ 15ಲಕ್ಷ. 15ಲಕ್ಷದಲ್ಲಿ 20ಪರ್ಸೆಂಟ್ ಜನ ಸೋಂಕಿತರು ಎಂದರೆ ಮೂರು ಲಕ್ಷ ಜನ ಸೋಂಕಿತರು ಬೆಂಗಳೂರಿನಿಂದ ಹೊರಗಡೆ ಹೋಗಿದ್ದಾರೆ. ಬಾಂಬೆನಲ್ಲಿಯೂ ಇದೇ ತರ ಆಗಿದೆ. ಸೋಂಕು ಹೆಚ್ಚಾದಾಗ ಇತರೇ ಜಿಲ್ಲೆಗಳಿಗೆ ಹೋಗಿದ್ದರು. ಮೂರು ಲಕ್ಷ ಜನ ಸೋಂಕಿತರು ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಗಿದ್ದಾರೆ.
ನಿಮಗೆ ಸ್ವಲ್ಪನಾದರೂ ಕಾಮನ್ ಸೆನ್ಸ ಇದ್ದಿದ್ದರೆ ಮೊದಲ ಅಲೆ ಸಂದರ್ಭದಲ್ಲಿ ಚೆಕ್ ಪೆÇೀಸ್ಟ್ ಗಳಲ್ಲಿ ನಿಲ್ಲಿಸಿ ಚೆಕ್ ಮಾಡುವಂತಹ ಕೆಲಸವನ್ನಾದರೂ ಮಾಡಿದ್ದೀರಿ, ಥರ್ಮಲ್ ಸ್ಕಾನ್ ಆ್ಯಯಂಟಿಜೆನ್ ಟೆಸ್ಟ್ ನಡೆಯುತ್ತಿತ್ತು. ಇವತ್ತು ಏನೂ ಇಲ್ಲ ಅಂದರೆ ಏನೂ ಇಲ್ಲ ಎಂದು ಕಿಡಿ ಕಾರಿದರು.
15ಲಕ್ಷ ಜನ 31ಜಿಲ್ಲೆಗಳ ಮೂಲೆ ಮೂಲೆಗಳಿಗೆ ಹೋಗಿದ್ದಾರೆ. ಒಬ್ಬ ಕನಿಷ್ಠ 5ಜನಕ್ಕೆ ಹರಡುತ್ತಾನೆ ಎಂದರೆ ಊಹೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಬರಲಿದೆ. ಪ್ರಾಕ್ಟಿಕಲ್ ಆಗಿ ಪರಿಸ್ಥಿತಿಯನ್ನು ಯೋಚನೆ ಮಾಡಿಯೇ ಇಲ್ಲ. ಎಲ್ಲಿದೆ ರೆಮ್ಡಿಸಿವಿರ್ ಇಂಜಕ್ಷನ್, ಎಲ್ಲಿದೆ ಆಕ್ಸಿಜನ್, ಎಲ್ಲಿದೆ ವೆಂಟಿಲೇಟರ್, ಎಲ್ಲಿ ವೆಂಟಿಲೇಟರ್ ಸಮೇತ ಇದೆ. ಎಲ್ಲೆಲ್ಲಿ ಆಕ್ಸಿಜನ್ ಸಮೇತ ಬೆಡ್ ಇದೆ ಮಾಹಿತಿ ನೀಡಿ, ಬಿಬಿಎಂಪಿ ರೀತಿಯಲ್ಲಿ ಇಲ್ಲಿಯೂ ಮಾಹಿತಿ ನೀಡಿ, ನಿಮಗೇನು ಸಮಸ್ಯೆ ಎಂದು ಪ್ರಶ್ನಿಸಿದರು. 80 ಪರ್ಸೆಂಟ್ ಬೆಡ್ ನೀಡಬೇಕು ಎಂಬುದು ಖಾಸಗಿಯವರಿಗೆ ಸರ್ಕಾರದ ಆದೇಶ, ಆದರೆ ಕೊಡುತ್ತಿದ್ದಾರಾ? ನನಗೆ ಬಂದಿರೋ ಮಾಹಿತಿ ಪ್ರಕಾರ 99 ಪರ್ಸೆಂಟ್ ಸೋಂಕಿತರು ಬೆಂಗಳೂರಿನಿಂದ ಸೋಂಕಿತರನ್ನು ಇಲ್ಲಿ ತಂದು ಹಾಕ್ತಿದ್ದಾರೆ. ಒಂದು ದಿನಕ್ಕೆ ಒಂದು ಲಕ್ಷರೂ.ಚಾರ್ಜ್ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಯವರೆ ನನಗೆ ಅವಕಾಶ ಸಿಕ್ಕಲ್ಲಿ ಝೀರೋ ಕ್ಕೆ ತಂದು ನಿಲ್ಲಿಸುತ್ತೇನೆ ಎಂದಿದ್ರಿ, ಈಗ ಮೂರು ಸಾವಿರದವರೆಗೂ ಬರುತ್ತಿದೆಯಲ್ಲ, ಮುಂದಿನ ದಿನಗಳಲ್ಲಿ ಹತ್ತು ಸಾವಿರದವರೆಗೂ ಬರಬಹುದು, ನೂರು ಜನರು ಸಾಯುವಂತಹ ಪರಿಸ್ಥಿತಿ ಬರಬಹುದು, ದಯಮಾಡಿ ಎಲ್ಲೆಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಆ್ಯಪ್ ಕ್ರಿಯೇಟ್ ಮಾಡಿ ಆ್ಯಪ್ ನಲ್ಲಿ ಮಾಹಿತಿ ನೀಡಿ, ಮೈಸೂರಲ್ಲಿ ಏನು ಮಾಡಿದ್ದೀರಿ, ಮೈಸೂರಲ್ಲಿ ಬೆಡ್ ಖಾಲಿ ಇಲ್ಲದೆ ಇರೋದರಿಂದ ಸೋಂಕಿತರನ್ನು ಬೆಂಗಳೂರಿಗೆ ಶಿಫ್ಟ್ ಮಾಡುತ್ತಿದ್ದಾರೆ. ಮೈಸೂರಿನ ಸೌಲಭ್ಯ ಮೈಸೂರಿನವರಿಗೆ ಲಭ್ಯವಿಲ್ಲ ಅಂದರೆ ಮತ್ತೇನು ಮಾಡುತ್ತಿದ್ದೀರಿ ಸಚಿವ ಸೋಮಶೇಖರ್ ಅವರು ಮೀಟಿಂಗ್ ನಲ್ಲಿ ಮಗ್ನರಾಗಿದ್ದೀರಿ, ಮೀಟಿಂಗ್ ಬಿಟ್ಟು ಬೇರೇನೂ ಮಾಡುತ್ತಿಲ್ಲ. ನಿಮ್ಮ ವೈಫಲ್ಯ ತೆಯನ್ನು ಹೇಳುತ್ತಿದ್ದೇನೆ., ಒಪ್ಪಿಕೊಳ್ಳಿ, ನೀವು ಸಂಪೂರ್ಣವಾಗಿ ವಿಫಲರಾಗಿದ್ದೀರಿ ಎಂದು ವಾಗ್ದಾಳಿನ ನಡೆಸಿದರು.
ಈ ಸಂದರ್ಭ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.